ಚಂದ ಚಂದ ನಿನ್ನ ಅಂದ, ಗಾಳಿ ಕೂಡ ಆಯ್ತು ಮಂದ… ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಚನ್ನೆ ಚನ್ನೆ ನನ್ನ ಚನ್ನೆ
ಚಂದ ನಿನ್ನ ಕಣ್ಸನ್ನೆ
ಕೆಂಪಾಗಿ ಕೆನ್ನೆ ರಂಗಾದವೀಗ
ನೋಡೆನ್ನ ನನ್ನೊಮ್ಮೆ
ಮಲ್ಲೆ ಮಲ್ಲೆ ನಿಂಗೆ ಮಲ್ಲೆ
ತಂದು ಕೊಡುವೆ ನಿಂಗೆ ನಲ್ಲೆ
ನಿಂದೇಯ ಗ್ಯಾನ ನಿದ್ದೇನೆ ಇಲ್ಲ
ನನ್ನನ್ನ ನೋಡೊಮ್ಮೆ
ಚಂದ ಚಂದ ನಿನ್ನ ಅಂದ
ಗಾಳಿ ಕೂಡ ಆಯ್ತು ಮಂದ
ನೀನಿದ್ರೆ ಕಂಪು ಬ್ಯಾವರ್ಸಿ ಮನ್ಸು
ನಿನ್ನನ್ನೆ ಬಯಸೈತೆ
ಬಂತ ಬಂತ ಪ್ರೀತಿ ಬಂತ
ಎಲ್ಲ ಕಡೆ ಕುಂತು ನಿಂತ
ಚಂದ್ರಾನ ಮೀರಿ ಚೆನ್ನೇಯ ಮಾರಿ
ಎಲ್ನೋಡು ಕಂಡೈತೆ
ಆಸೆ ಆಸೆ ಉಕ್ಕಿ ಆಸೆ
ತಿರುವಿ ನಿಂತೆ ನನ್ನ ಮೀಸೆ
ಪಟ್ಟಾದ ರಾಣಿ ಪಕ್ಕಕ್ಕೆ ಬಾರೆ
ಹೋಗೋಣ ಮಧುವನಕೆ.
- ಚನ್ನಕೇಶವ ಜಿ ಲಾಳನಕಟ್ಟೆ
