ಇದು ಮಕ್ಕಳ ಸುರಕ್ಷತೆ ಹಾಗು ಆರೈಕೆಗಾಗಿ ಮಾಡಿದಂತಹ ೨೪ ಗಂಟೆಯ ಉಚಿತ ತುರ್ತುಸೇವೆಯಾಗಿದೆ. ಮಕ್ಕಳ ತುರ್ತು ಸೇವೆಗೆ ಸ್ಪಂದಿಸುವ ಜೊತೆಗೆ ಪುನರ್ವಸತಿ ಸೌಲಭ್ಯವನ್ನು ಒದಗಿಸುತ್ತದೆ ಇನ್ನಷ್ಟು ವಿಷಯವನ್ನು ಮುಂದೆ ಓದಿ…
ಇಲ್ಲಿಯವರೆಗೂ ೩೦ ಲಕ್ಷ ಮಕ್ಕಳಿಗೆ ಈ ಎಲ್ಲ ಸೇವೆಯನ್ನು ಒದಗಿಸಿದೆ. ಭಾರತೀಯ ಮಕ್ಕಳ ಸಹಾಯವಾಣಿ ಪ್ರತಿಷ್ಠಾನವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ನೋಡಲ್ ಏಜೆನ್ಸಿ ಆಗಿದ್ದು, ಇದರಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಅದನ್ನ ತಡೆಯುವಲ್ಲಿ ಸಹಾಯ ಮಾಡುತ್ತದೆ ಅದಕ್ಕೆ ಸಂಬಂಧಪಟ್ಟಂತಹ ಕಾಯ್ದೆಗಳನ್ನು ತಿಳಿಯಬಹುದಾಗಿದೆ.
ಕಳೆದ ಒಂದು ವರ್ಷದಲ್ಲಿ 20,587 ಲೈಂಗಿಕ ದೌರ್ಜನ್ಯದ ಪ್ರಕಟರಣಗಳು ದಾಖಲಾಗಿವೆ. ಮಕ್ಕಳ ದೌರ್ಜನ್ಯ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಮತ್ತು ಇದನ್ನು ತಡೆಯುವಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕಾಗಿದೆ.
Email : dial1098@www.childlineindia.org.in
ಇನ್ನೊಂದು ಮಹತ್ವದ ವಿಷಯವೇನೆಂದರೆ ಸಮಾರಂಭ / ಪಾರ್ಟಿಗಳಲ್ಲಿ ಬಹಳಷ್ಟು ಆಹಾರ ವ್ಯರ್ಥವಾಗುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಅವುಗಳನ್ನು ಕಸದ ಬುಟ್ಟಿಗೋ, ತಿಪ್ಪೆಗೋ ಹಾಕುವ ಬದಲು ಹೀಗೆ ಮಾಡಿ.
ನಮ್ಮಲ್ಲಿ ಉಳಿದ ಆಹಾರವನ್ನು 1098 ಸಂಖ್ಯೆಗೆ ಕರೆಮಾಡಿದರೆ, ನಮ್ಮಲ್ಲಿ ಉಳಿದ ಆಹಾರವನ್ನು ಸಂಗ್ರಹಿಸಿ ಹಸಿದ ಮಕ್ಕಳಿಗೆ ಹಂಚುತ್ತಾರೆ.
ಆಹಾರವನ್ನು ವ್ಯರ್ಥ ಮಾಡದಿರಿ, ವ್ಯರ್ಥವಾಗುವ ಲಕ್ಷಣವಿದ್ದರೆ ದಯವಿಟ್ಟು ಈ ಮೇಲಿನ ಸಂಖ್ಯೆಗೆ ಕರೆ ಮಾಡಿ, ಪ್ರಾರ್ಥನೆ ಮಾಡುವ ತುಟಿಗಳಿಗಿಂತ ಸಹಾಯ ಮಾಡುವ ಕೈಗಳು ನೀವಾಗಿ…
- ಆಕೃತಿ ನ್ಯೂಸ್