ನಾಟಿವೈದ್ಯರಾದ ಸುಮನಾ ಮಳಲಗದ್ದೆ ಅವರು ಕರ್ಕಾಟಕ ಶೃಂಗಿ (ಕಾಕಡಶೃಂಗಿ) ಮಹತ್ವದ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಇದು ನಮ್ಮಲ್ಲಿ ಬೆಳೆಯುವ ಬೆಳೆ ಅಲ್ಲ. ಉತ್ತರ ಭಾರತದ ಕೆಲವು ಕಡೆ ಬೆಳೆಯುತ್ತಾರೆ. ಇದನ್ನು ಹಲವಾರು ಔಷಧೀಯ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ :
ಫೋಟೋ ಕೃಪೆ : google
1) ಜೇನುತುಪ್ಪದಲ್ಲಿ ತೆಗೆದುಕೊಳ್ಳುವುದರಿಂದ ಕಫ ನೀರಾಗಿ ಕೆಮ್ಮಲು ಸುಲಭವಾಗುತ್ತದೆ.
2) ತ್ರಿಕಟು ಜೋತೆ ಗೆ ಜೇನುತುಪ್ಪ ಸೇರಿಸಿ ಕರ್ಕಾಟಕ ಶೃಂಗಿಯ ಪುಡಿಯನ್ನು ಹಾಕಿ ತೆಗೆದುಕೊಳ್ಳುವುದರಿಂದ ಕ್ಷಯರೋಗ ನಿವಾರಣೆಯಾಗುತ್ತದೆ.
3) ನಾನು ತಯಾರಿಸುವ ಕ್ಯಾನ್ಸರ್ ಮೆಡಿಸಿನ್ ನಲ್ಲಿ ಕರ್ಕಾಟಕ ಶೃಂಗಿಯನ್ನೂ ಉಪಯೋಗಿಸುತ್ತೇನೆ.
4) ಶುಂಠಿ ಬೆಳ್ಳುಳ್ಳಿ ನೆಲಬೇವು ಕರ್ಕಾಟಕ ಶೃಂಗಿ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಜ್ವರ ನಿವಾರಣೆ ಆಗುತ್ತದೆ.
5) ಹದವರಿತು ಮಾಡುವ ಲೇಹ್ಯದಿಂದ ಹೆಣ್ಣು ಮಕ್ಕಳ ಗರ್ಭಾಶಯ ಸರಿಯಾಗುತ್ತದೆ.
6) ಜೇನುತುಪ್ಪದೊಂದಿಗೆ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.
7) ದಾಳಿಂಬೆ ಸಿಪ್ಪೆ ಯ ಜೊತೆಯಲ್ಲಿ ಸೇವಿಸುವುದರಿಂದ ಅತಿಸಾರ ಗುಣವಾಗುತ್ತದೆ.
8) ಚರ್ಮರೋಗಕ್ಕೆ ಒಳ್ಳೆಯ ಔಷಧ ವಾಗಿದೆ.
9) ಕರ್ಕಾಟಕ ಶೃಂಗೀಯ ಪುಡಿಯನ್ನು ಸೈಂಧವ ಲವಣದೊಂದಿಗೆ ಸೇರಿಸಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆಗಳು ದೂರವಾಗುತ್ತದೆ. ನಾನು ತಯಾರಿಸುವ ಹಲ್ಲುಪುಡಿಯಲ್ಲಿ ಕರ್ಕಾಟಕ ಶೃಂಗಿ ಇರುತ್ತದೆ.
10) ನಾನು ತಯಾರಿಸುವ ಚವನ ಪ್ರಾಶ್ ನಲ್ಲಿ ಕರ್ಕಾಟಕ ಶೃಂಗಿ ಇರುತ್ತದೆ.
11) ಉಷ್ಣ ಶರೀರದವರು ಹೆಚ್ಚಾಗಿ ಉಪಯೋಗಿಸದೆ ಇರುವುದು ಒಳ್ಳೆಯದು. 🥢ಸುಮನಾ ಮಳಲಗದ್ದೆ 9980182883
- ಸುಮನಾ ಮಳಲಗದ್ದೆ – ನಾಟಿವೈದ್ಯರು : 9980182883.