ಎಲ್ಲ ವೈದ್ಯರಿಗೂ ವೈದ್ಯರ ದಿನದ ಶುಭಾಶಯಗಳು

ಅಂತೂ ಆಯುರ್ವೇದದಲ್ಲೂ ಶಕ್ತಿ ಇದೆ ಎಂಬುದು ಜಗತ್ತಿಗೇ ಸಾಬೀತಾಯಿತು.

ನಾನಂತೂ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ನಂಬಿ ಹಲವಾರು ವರ್ಷಗಳೇ ಆಯಿತು. ನನ್ನ ವೃತ್ತಿ ಜೀವನದ ಪ್ರಾರಂಭದಲ್ಲಿ (18 ವರ್ಷಗಳ ಹಿಂದೆ), ಪ್ರತೀ ಹದಿನೈದು ದಿನಕ್ಕೆ ಜ್ವರದಿಂದ ಬಳಲುತ್ತಿದ್ದೆ. ಇದು ಒಂದು ನಾಲ್ಕು ತಿಂಗಳು ಮುಂದುವರಿದು ಇನ್ನೇನು ಟೈಫಾಯ್ಡಗೆ ತಿರುಗುವ ಹಂತದಲ್ಲಿತ್ತು. ಕೆಲಸಕ್ಕೆ ರಾಜೀನಾಮೆ ಕೊಡುವ ಪರಿಸ್ಥಿತಿ ಉಂಟಾಯ್ತು. ಆಗ ಹೊಳೆದದ್ದು ಈ ಆಯುರ್ವೇದ ಚಿಕಿತ್ಸಾ ಪದ್ಧತಿ.

ನಮ್ಮೂರಿಗೆ ಆಗ ತಾನೇ ಆಯುರ್ವೇದ ವೈದ್ಯ ಪದ್ಧತಿಯನ್ನು ಕಲಿತ ವೈದ್ಯರು ತಮ್ಮ ದವಾಖಾನೆಯನ್ನು ಪ್ರಾರಂಭಿಸಿದ್ದರು. ಒಮ್ಮೆ ಪ್ರಯತ್ನಿಸಿ ನೋಡೋಣ ಎಂದು ಅವರಲ್ಲಿಗೆ ಹೋದೆ. ಜ್ವರಕ್ಕೆ ಅಂತ ಅಲ್ಲ. immunity boost ಮಾಡಿಕೊಳ್ಳಿ ಅಂತ ಒಂದು ಮೂರು ತಿಂಗಳ ಔಷಧಿ ಕೊಟ್ಟರು. ಆ ಮೇಲೆ ಒಂದು ಐದು ತಿಂಗಳು ಹೀಗೇ ಸ್ವಲ್ಪ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅನುಸರಿಸಿದೆ. ಆವತ್ತಿನಿಂದ ಈ ಹೊತ್ತಿನವರೆಗೂ ನನ್ನ ಅವಲಂಬನೆ ಆಯುರ್ವೇದ. ಬಹುಶಃ ಅದರ ನಂತರ ನಾನು ಜ್ವರದಿಂದ ಬಳಲಿದ್ದೂ ತೀರಾ ಎರಡೋ ಮೂರೋ ಬಾರಿ ಅಷ್ಟೇ.

arunima

ನನ್ನ ಅದೃಷ್ಟ, ಮದುವೆಯಾಗಿ ಬೆಂಗಳೂರು ಸೇರಿದಾಗಲೂ ಒಳ್ಳೇ ಆಯುರ್ವೇದ ವೈದ್ಯರು ಸಿಕ್ಕಿದ್ದು. ಅದರಂತೆ ನನ್ನ ಪತಿಯೂ ಸಹ ಆಯುರ್ವೇದ ವೈದ್ಯ ಪದ್ಧತಿಯನ್ನು ಅನುಸರಿಸಲು ಸಹಕರಿಸಿದ್ದು. ಇಂದಿನ ತನಕ ಬಸಿರು, ಬಾಳಂತನ ಬಿಟ್ಟರೆ allopathic medicine ತಗೊಂಡಿದ್ದೇ ಇಲ್ಲ.

ಮಕ್ಕಳಿಗೂ ಅದೇ ರೂಢಿ ಮಾಡಿಸಿ ಬಿಟ್ಟಿದ್ದೇವೆ. ನಮಗೆ ಬೆಂಗಳೂರಿನ allopathic  ಡಾಕ್ಟರ್ ಗಳ, ಆಸ್ಪತ್ರೆಗಳ ಪರಿಚಯ ಬಹಳ ಕಡಿಮೆ. ನನ್ನವರಿಗೆ ಆಕ್ಸಿಡೆಂಟ್ ಆಗಿ ಕೈ ಮೂಳೆ ಮುರಿದಾಗ, ಮೂಳೆ ಡಾಕ್ಟರ್ ಹತ್ತಿರ ಮೂಳೆ ಜೋಡಿಸಿಕೊಂಡಿದ್ದು ಬಿಟ್ಟರೆ ಉಳಿದೆಲ್ಲ ಔಷಧಗಳೂ ಆಯುರ್ವೇದದ್ದೇ. ಆಮೇಲೆ physiotherapy ಅಂತ ಮೂಳೆ ವೈದ್ಯರು ಸಲಹೆ ನೀಡಿದಾಗಲೂ ನಾವು ನೆಚ್ಚಿಕೊಂಡಿದ್ದು, ನಮ್ಮ ನೆಚ್ಚಿನ ಆಯುರ್ವೇದ ಡಾಕ್ಟರ್. ಅವರ ನಲವತ್ತೈದು ದಿನಗಳ oil ಮಸಾಜ್. ಕೈಯ recovery ನೋಡಿ ಮೂಳೇ ಡಾಕ್ಟರ್ ಗೇ ಆಶ್ಚರ್ಯವಾಗಿ ಹೋಗಿತ್ತು. ನಮಗೆ ಆಯುರ್ವೇದಿಕ್ ಡಾಕ್ಟರ್ ನಮ್ಮ family ಡಾಕ್ಟರ್. She is also our family member ಅನ್ನೋ ಅಷ್ಟು ಅವರು ನಮಗೆ ಹತ್ತಿರ.

ಈ ಕೊರೋನಾ ಎಲ್ಲಾ ಕಡೆ ಆವರಿಸಿ , ಎಲ್ಲೆಲ್ಲೂ ಭಯದ  ವಾತಾವರಣ ಇದ್ದರೂ ನಾನು ಮಾತ್ರ ಯಾವುದೇ ಭಯ ಇಲ್ಲದೇ ಆರಾಮವಾಗಿ ಇದ್ದೇನೆ. ಕಾರಣ ನಮ್ಮ ಆಯುರ್ವೇದಿಕ್ ಡಾಕ್ಟರ್. ಅವರ ಧೈರ್ಯ ನಮಗೆ ಶಕ್ತಿ.

Thank you doctor…. ನಮ್ಮ ಕುಟುಂಬದಂತೇ ಹಲವಾರು ಕುಟುಂಬಗಳ ಆಸರೆಯಾಗಿರುವ ನಿಮಗೆ ಧನ್ಯವಾದಗಳು…

doctor day ಶುಭಾಶಯಗಳು …

ಲೇಖನ : ಮಾಲತಿ ಗಣೇಶ ಭಟ್

amma

0 0 votes
Article Rating

Leave a Reply

2 Comments
Inline Feedbacks
View all comments
Raghav Hegde

ಬರವಣಿಗೆ ಇಷ್ಟವಾಯಿತು. ಹಾಗೆ ಫೋಟೊದ ಜೊತೆಗೆ ಲೇಖನದ ಯಾವ ಭಾಗದಲ್ಲಾದರೂ ವೈದ್ಯರ ಹೆಸರನ್ನು ಬರೆದಿದ್ದರೆ ಇನ್ನೂ ಅರ್ಥಪೂರ್ಣವಾಗಿ ಇರುತ್ತಿತ್ತು….

Vani Raj

ನೂರಕ್ಕೆ ನೂರು ಸತ್ಯ

Home
News
Search
All Articles
Videos
About
2
0
Would love your thoughts, please comment.x
()
x
%d
Aakruti Kannada

FREE
VIEW