ಇದು ಕಸವಲ್ಲ, ನಿಮಗೆ ತಿಳಿದಿರಲಿ

ನಮ್ಮ ಸುತ್ತಲೂ ಕಸ ಎಂದು ಎಷ್ಟೋ ಗಿಡಗಳನ್ನು ಕಿತ್ತು ಬಿಸಾಕುತ್ತೇವೆ. ಆ ಕಸದ ಜೊತೆಗೆ ಔಷಧೀಯ ಗಿಡವನ್ನು ಕಿತ್ತು ಹಾಕುತ್ತಿದ್ದೇವೆ ಎನ್ನುವ ಪರಿಕಲ್ಪನೆಯು ನಮಗೆ ಇರುವುದಿಲ್ಲ. ನಮಗೆ ಬೇಡವೆಂದಾಗ ಆ ಗಿಡ ಕಸವಾಗಿ ಹೋಗುತ್ತದೆ. ಹಾಗೆ ಕಸವೆಂದುಕೊಂಡ ಗಿಡದಲ್ಲಿ ಔಷಧೀಯ ಗುಣವನ್ನು ಹೊಂದಿದೆ ಎಂದು ತಿಳಿಯುವುದು ಮುಖ್ಯ. ಅದರ ಮಹತ್ವವನ್ನು ತಿಳಿದಾಗ ನೀವು ಖಂಡಿತವಾಗಿಯೂ ಆ ಗಿಡವನ್ನು ಜೋಪಾನ ಮಾಡುತ್ತೀರಾ.

97071578_1061252307608487_3798392995531718656_o

ಈ ಗಿಡವು ಕೂಡ ಕಸದಲ್ಲಿಯೇ ಬೆಳೆಯುತ್ತದೆ. ಆದರೆ ಕಸವಲ್ಲ. ಅದರ ಹೆಸರು ಹಾಲು ಗೌರಿ. ಹೆಸರೇ ಹೇಳುವಂತೆ ಗಿಡವನ್ನು ಮುರಿದಾಗ ಹಾಲು ಬಿಡುತ್ತದೆ. ಆ ಹಾಲಿನ ರಸವನ್ನು ನರುಳ್ಳೆ ಇರುವ ಜಾಗದಲ್ಲಿ ಸವರಿದರೆ ಮೂರೂ ನಾಲ್ಕು ದಿನದಲ್ಲಿ ಈ ಸಮಸ್ಯೆ ಇಲ್ಲದಂತಾಗುವುದು. ನಮ್ಮ ಸುತ್ತ ಮುತ್ತಲಿನಲ್ಲೆಯೇ ಹಲವು ಔಷಧೀಯ ಗುಣಗಳನ್ನು ಹೊಂದಿರುವಂತ ಹಲವು ಸಸ್ಯಗಳಿರುತ್ತವೆ. ಅವುಗಳ ಬಗ್ಗೆ ಸರಿಯಾಗಿ ತಿಳಿದು ಅದರ ಉಪಯೋಗಗಳನ್ನು ಪಡೆದುಕೊಳ್ಳುಬೇಕು.

ನರುಳ್ಳೆ ದೇಹದ ಮೇಲೆ, ಕುತ್ತಿಗೆ ಮೇಲೆ, ಮುಖದ ಮೇಲೆ ಇನ್ನು ಹಲವು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ಈ ಗಿಡ ಎರಡು – ಮೂರೂ ದಿನದಲ್ಲಿ ನಿವಾರಿಸಬಲ್ಲದು. ಅದು ಹೇಗೆ? ಅನ್ನೋದನ್ನ ತಿಳಿಯೋಣ.

daughter

ಈ ಗಿಡವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗ್ರಾಮೀಣ ಭಾಗದ ಜನರಿಗೆ ಇದರ ಪರಿಚಯ ಚನ್ನಾಗಿರುತ್ತದೆ. ಹೊಲ, ಗದ್ದೆಗಳ ಬಳಿಯಲ್ಲಿ ಹಾಗು ಮನೆಯ ಸುತ್ತಲಿನ ತೇವಾಂಶದ ವಾತಾವರಣದಲ್ಲಿ ಬೆಳೆಯುವಂತ ಗಿಡ ಇದಾಗಿದೆ. 

ಈ ಗಿಡವು ಆಯುರ್ವೇದದಲ್ಲಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಈ ಗಿಡಕ್ಕೆ ಹಲವು ಹೆಸರುಗಳಿಂದ ಕರೆಯುಲಾಗುತ್ತದೆ. ಕೆಂಪು ನೆನೆ ಅಕ್ಕಿಯ ಸೊಪ್ಪಿನ ಗಿಡ, ಬಿಳಿ ಚಿತ್ರಫಲ, ನರಹುಲಿ, ಹಾಲು ಗೌರಿ,  ಹಚ್ಛೆ ಗಿಡ, ದೊಡ್ಡ ಹಾಲುಕುಡಿ, ಮರಿಜೀವನಿಗೆ ಹೀಗೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಈ ಗಿಡವು ಹಲವು ಔಷಧೀಯ ಗುಣಗಳನ್ನು ಹೊಂದಿದೆ.

arunima

ಬಾಯಿ ಹುಣ್ಣಿಗೆ ಇದರ ತಂಬುಳಿಯನ್ನಾಗಿ ಕೆಲವರು ಉಪಯೋಗ ಮಾಡಿದರೆ, ಇದು ತಿನ್ನಲು ಉಪಯೋಗವಿಲ್ಲ ಎಂದು ಇನ್ನು ಕೆಲವರ ಅಭಿಪ್ರಾಯ ಪಡುತ್ತಾರೆ. ಆದರೆ ಇದರ ಹಾಲಿನಿಂದ ಖಂಡಿತವಾಗಿಯೂ ನರುಳ್ಳೆ ಹೋಗುತ್ತದೆ. ನಿಮಗೆ ಈ ಗಿಡದ ಮಹತ್ವ ತಿಳಿದಿರಲಿ. ನಿಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿ. 

  • ಶಾರದಾ ಜಯರಾಮ್
0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW