ಮುಟ್ಟಿನ ಹೊಟ್ಟೆ ನೋವಿನ ಸಮಸ್ಯೆ ಸೇರಿದಂತೆ ಹಲವಾರು ಮಹತ್ವದ ಕುರಿತು ‘ಗಜ್ಜಗ’ ಗಿಡದ ಮಹತ್ವ ಕುರಿತು ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಬರೆದಿರುವ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಕಾಡಿನ ದೊಡ್ಡ ದೊಡ್ಡ ಮರ ಮರದ ಕೊಂಬೆ ರೆಂಬೆಗಳಿಗೆ ಸುತ್ತಿಕೊಂಡಿರುವ ಸಣ್ಣ ಎಲೆ ಯ ಬಳ್ಳಿ ಬಳ್ಳಿಯಲ್ಲಿ ಮುಳ್ಳಿರುವ ಕಾಯಿ ಎಷ್ಟು ಮುಳ್ಳೆಂದರೆ ನೆಲಕ್ಕೆ ಕಾಲಿಡಲು ಭಯ ಗಜ್ಜಗದ ಮಟ್ಟಿ ಎಂದರೆ ಸಣ್ಣ ವಯಸ್ಸಿನಲ್ಲಿ ನಾವು ಹೋಗಲಾರದ ಜಾಗ ಎಂದು ತೀರ್ಮಾನ.
ಕತ್ತಿಯ ಮೊನೆಯಲ್ಲಿ ಕೆಣಕಿ ಕುಕ್ಕಿತೆಗೆದಾಗ ಮಾತ್ರ ಗಜ್ಜಗದ ಕಾಯಿಯ ದರ್ಶನ ಗೋಲಿ ಆಡಲಂತೂ ಒಳ್ಳೆಯ ಆಟಿಕೆ. ಈಗ ಎಲ್ಲವೂ ಕಮರ್ಷಿಯಲ್ ಲ್ಯಾಂಡ್ ಮೊದಲಿನ ಹಾಗೆ ಗಜ್ಜಗದ ಬಳ್ಳಿನೂ ಇಲ್ಲ ತುಂಬಾ ಅಪರೂಪ ಆದರೆ ಒಳ್ಳೆಯ ಔಷಧೀಯ ಸಸ್ಯ ಗಜ್ಜಗವನ್ನು ಸ್ವಲ್ಪ ಸುಟ್ಟರೆ ಮೇಲಿನ ಸಿಪ್ಪೆ ಒಡೆಯಲು ಸುಲಭ ಒಳಗಿನ ತಿರುಳು ಔಷಧಿಯಾಗಿ ಉಪಯೋಗಿಸುವುದು. ಸೊಪ್ಪಿನಿಂದ ತಂಬುಳಿ ಚಟ್ನಿ ಬಾಳಂತಿಯರಿಗೆ ಮಾಡುವ ವಿಶೇಷ ಕಟ್ಣೆ( ಕೊಬ್ಬರಿ ಹಾಕದೇ ಮಾಡುವ ಚಟ್ನಿ) ಮಾಡಬಹುದು.
ಫೋಟೋ ಕೃಪೆ : google
- ಇದರ ಸೊಪ್ಪು ಆಹಾರವಾಗಿ ಉಪಯೋಗಿಸಬಹುದು ನಂಜು ನಿವಾರಕ ಅಡಿಗೆಯೂ ಕಿರು ಕಹಿ. ಆದರೆ ಒಳ್ಳೆಯ ಆಹಾರಯುಕ್ತ ಔಷಧಿ.
- ಸಿಪ್ಪೆ ತೆಗೆದ ಬೀಜವನ್ನು ಇಂಗಿನೊಂದಿಗೆ ಬೆರೆಸಿ ಪುಡಿಮಾಡಿ ಮಜ್ಜಿಗೆಯಲ್ಲಿ ತೆಗೆದುಕೊಳ್ಳುವುದರಿಂದ ಅಜೀರ್ಣ ಗುಣವಾಗುತ್ತದೆ.
- ಇದರ ಬೀಜದಿಂದ ತೆಗೆದ ಎಣ್ಣೆ ಚರ್ಮರೋಗಕ್ಕೆ ಒಳ್ಳೆಯದು. ಆದರೆ ಮಾಡುವುದು ಕಷ್ಟ.
- ಬೀಜದ ಪುಡಿಯೊಂದಿಗೆ ಲವಂಗದ ಪುಡಿ ಸೇರಿಸಿ ಸೇವಿಸುವುದರಿಂದ ಹೊಟ್ಟೆ ಶೂಲೆ ಮತ್ತು ವಾಂತಿ ನಿಲ್ಲುತ್ತದೆ.
- ಎಲೆಯನ್ನು ಪತ್ರ ಪಿಂಡದಂತೆ ಮಾಡಿ ಎಣ್ಣೆ ಹಚ್ಚಿ ನೋವಿರುವ ಜಾಗಕ್ಕೆ ಶಾಖ ಕೊಡುವುದರಿಂದ ಬೇಗನೆ ಗುಣವಾಗುತ್ತದೆ ಪಾರ್ಶ್ವವಾಯುವಿನಲ್ಲಿ ಹೆಚ್ಚು ಪರಿಣಾಮಕಾರಿ.
- ಬೀಜ ಬೇರು ಎಲೆ ಇವುಗಳನ್ನು ಸೇರಿಸಿ ಚೆನ್ನಾಗಿ ಅರೆದು ಬಾವು ಇರುವ ಜಾಗದಲ್ಲಿ ಹಚ್ಚಿದರೆ ಬಾವು ಗುಣವಾಗುತ್ತದೆ.
- ಬೀಜದ ಚೂರ್ಣದೊಂದಿಗೆ ವಾಯು ವಿಳಂಗ ಸೇರಿಸಿ ಏಳು ದಿನ ತೆಗೆದುಕೊಂಡು ನಂತರ ವಿರೇಚನಕ್ಕೆ ತೆಗೆದುಕೊಳ್ಳುವುದರಿಂದ ಹೊಟ್ಟೆಯ ಎಲ್ಲಾ ಕ್ರಿಮಿಗಳು ನಾಶವಾಗುತ್ತದೆ.
- ಬೀಜದ ಚೂರ್ಣವನ್ನು ಚೆನ್ನಾಗಿ ಹುರಿದು ಕಪ್ಪು ಮಾಡಿ ಅದರಲ್ಲಿ ಅಡಿಕೆ ಪುಡಿ ಮತ್ತು ಪಟಗಾರ ಸೇರಿಸಿ ಹಲ್ಲು ಉಜ್ಜುವುದರಿಂದ ಹಲ್ಲಿನ ಎಲ್ಲಾ ಸಮಸ್ಯೆಗಳು ಗುಣವಾಗುತ್ತದೆ. ಇನ್ನೂ ಅನೇಕ ಮೂಲಿಕೆಗಳನ್ನು ಸೇರಿಸಿ ತಯಾರಿಸಿದ ಹಲ್ಲು ಪುಡಿ ನನ್ನಲ್ಲಿ ಲಭ್ಯವಿದೆ.
ಫೋಟೋ ಕೃಪೆ : google
- ಬೀಜವನ್ನು ಚೆನ್ನಾಗಿ ಅರೆದು ಮುತ್ತುಗದ ಹೂವಿನ ರಸದಲ್ಲಿ 21 ಬಾರಿ ಭಾವನೆಯನ್ನು ಕೊಡಬೇಕು. ಹೂವಿನ ರಸದಲ್ಲಿ ನೆನೆಸುವುದು ಒಣಗಿಸುವುದು ಮತ್ತೆ ನೆನೆಸುವುದು ಮತ್ತೆ ಒಣಗಿಸುವುದು. ಈ ರೀತಿ ಮಾಡುವುದಕ್ಕೆ ಭಾವನೆ ಎನ್ನುತ್ತಾರೆ. ಮತ್ತೆ ಹೂವಿನ ರಸದಲ್ಲಿ ನೆನೆಸಿ ಬತ್ತಿ ತರಹ ಹೊಸೆದು ಕಾಡಿಗೆ ರೀತಿಯಲ್ಲಿ ಕಣ್ಣಿಗೆ ಹಚ್ಚುವುದರಿಂದ ಕಣ್ಣಿನ ಪೊರೆ ಗುಣವಾಗುತ್ತದೆ. ಇದರ ಜೊತೆಯಲ್ಲಿ ಹೊಟ್ಟೆಗೂ ಔಷಧೋಪಚಾರ ಮಾಡಿಕೊಳ್ಳುವುದು ಅಗತ್ಯ.
- ಬೀಜದ ಪುಡಿಯಲ್ಲಿ ಅನೇಕ ಮೂಲಿಕೆಗಳನ್ನು ಸೇರಿಸಿ ಅರೆದು ಒಣಗಿಸಿ ಉಂಡೆ ಮಾಡಿ ಏಳು ಉಂಡೆಗಳನ್ನು ಹೆಣ್ಣು ಮಕ್ಕಳ ಮುಟ್ಟು ಕಟ್ಟು ಎಂದರೆ ಪಿರಿಯಡ್ ಸಮಯದಲ್ಲಿ ಬರುವ ಹೊಟ್ಟೆ ನೋವು ನಮ್ಮಲ್ಲಿ ತಲೆಮಾರಿನಿಂದ ಉಪಯೋಗಿಸಿಕೊಂಡು ಬಂದ ಔಷಧಿಯಾಗಿದೆ. ಇದರಿಂದ ಅನೇಕ ಹೆಣ್ಣು ಮಕ್ಕಳು ಗುಣವಾಗಿದ್ದಾರೆ. ಇನ್ನು ತನಕ ಗುಣವಾಗಿಲ್ಲ ಎನ್ನುವವರು ಇಲ್ಲ.
- ನಾವು ಚಿಕ್ಕವರಿದ್ದಾಗ ಜ್ವರ ಬಂದರೆ ಒಲೆಯಲ್ಲಿ ಎರಡು ಗಜ್ಜುಗ ಹಾಕಿ ಸುಟ್ಟು ಚಚ್ಚಿ ಕೊಟ್ಟರೆ ಜ್ವರ ಮಾಯ ಇದು ನಮ್ಮೆಲ್ಲರ ಆರೋಗ್ಯ ದ ಗುಟ್ಟು ಮತ್ತು ದೀರ್ಘ ಆರೋಗ್ಯ ಕ್ಕೆ ಔಷಧಿ..
- ಸುಮನಾ ಮಳಲಗದ್ದೆ – ನಾಟಿ ವೈದ್ಯರು