ಹುಳಿ ಖಾರ್ ಚಟ್ ಪಟ್; ತಿನ್ನಿ, ಬಾಯಲ್ಲಿ ನೀರು ಗ್ಯಾರಂಟಿ…

ಅಡುಗೆಗೆ ಉಪ್ಪು,ಹುಳಿ,ಖಾರ ಸಮ ಪ್ರಮಾಣದಲ್ಲಿದ್ದರೇ ಮಾತ್ರ ಅಡುಗೆ ರುಚಿಕರವಾಗಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಹುಳಿಯನ್ನೇ ಜಾಸ್ತಿಯಾಗಿಟ್ಟುಕೊಂಡು ಮಾಡಿದ ಅಡುಗೆಯ ರುಚಿ ಹೇಗಿರಬಹುದು ಎಂದು ನೀವು ಊಹೆ ಮಾಡಿ ನೋಡಿ. ಹುಳಿ ಎಂದಾಕ್ಷಣ ಗರ್ಭಿಣಿಯರಿಗೆ ಅಷ್ಟೇ ಈ ಅಡುಗೆ ಅಂದುಕೊಳ್ಳಬೇಡಿ.

ಹಲ್ಲಿರುವರಿಂದ ಹಲ್ಲಿಲ್ಲದವರೆಗೂ ಬಾಯಲ್ಲಿ ನೀರು ಭರಿಸುವ ಈ ಅಡುಗೆ ಹೆಸರು ‘ಹುಳಿ ಖಾರ ಚಟ್ ಪಟ್’. ಈ ಅಡುಗೆಯನ್ನು ಹೇಳಿಕೊಟ್ಟವರು ಶಿಲ್ಪ ಮಲ್ಲಿಕಾರ್ಜುನ್ ಅವರು. ಮೊದಲ ಬಾರಿಗೆ ನಮಗೆಲ್ಲಈ ಚಟ್ ಪಟ್ ನ್ನು ಉಣಬಡಿಸಿದಾಗ ನಮ್ಮ ಬಾಯಲ್ಲಿ ನೀರು ಹರಿದಿತ್ತು. ಅನಂತರ ಅವರಿಂದಲೇ ನಾವು ಈ ಹುಳಿ ಖಾರ್ ಚಟ್ ಪಟ್ ನ್ನು ಕಲಿತೆವು. ಈಗ ನಿಮ್ಮ ಸರದಿ..

ಬೇಕಾಗುವ ಸಾಮಾನುಗಳು :
೧.ಹುಣಸೆಹಣ್ಣಿನ ರಸ – ಒಂದು ಬಟ್ಟಲು

೨.ಮೆಂತೆ ಕಾಳುಗಳು – ಸ್ವಲ್ಪ೩

.ಸಣ್ಣಗೆ ಹೆಚ್ಚಿದ ಹಸಿಮೆಣಸಿನ ಖಾಯಿ – ಒಂದು ಬಟ್ಟಲು

೪.ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – ಒಂದು ಬಟ್ಟಲು

೫.ಒಣಮೆಣಸಿನ – ಸ್ವಲ್ಪ

೬.ಸಾಸಿವೆ -ಸ್ವಲ್ಪ೭

.ಜೀರಿಗೆ – ಸ್ವಲ್ಪ

೮.ಅರಿಶಿನ ಪುಡಿ- ಸ್ವಲ್ಪ

೯.ರುಚಿಗೆ ತಕ್ಕಷ್ಟು ಉಪ್ಪು

೧ ಒಂದು ಪಾತ್ರೆಯಲ್ಲಿ ಹುಣಸೆ ಹಣ್ಣನ್ನು ನೀರು ಹಾಕಿ ಸ್ವಲ್ಪ ಹೊತ್ತು ನೆನೆಯಿಡಿ. ಅದೇ ರೀತಿ ಇನ್ನೊಂದು ಪಾತ್ರೆಯಲ್ಲಿ ಒಣಮೆಣಸಿನಕಾಯಿಯನ್ನು ನೀರು ಹಾಕಿ ನೆನೆಯಿಡಿ.

೨. ಸ್ಟೋವ್ ಮೇಲೆ ಬಾಣಲೆಯನ್ನಿಟ್ಟು ಎಣ್ಣೆ ಹಾಕದೆ ಸಾಸಿವೆ, ಮೆಂತೆ ಕಾಳು ಮತ್ತು ಜೀರಿಗೆಯನ್ನು ಹಾಕಿ ಹುರಿದುಕೊಳ್ಳಿ.

೩.ಹುಣಸೆ ಹಣ್ಣು ಚನ್ನಾಗಿ ನೆನೆದ ಮೇಲೆ ಅದರ ರಸವನ್ನು ಚನ್ನಾಗಿ ಹಿಂಡಿ ರಸ ತಗೆಯಬೇಕು. ಅನಂತರ ಅದನ್ನುಸ್ಟೋವ್ ಮೇಲೆ ಇಟ್ಟು ಚನ್ನಾಗಿ ಕುದಿಸಬೇಕು.

೪.ಇತ್ತ ಕಡೆ ನೆನೆಯಿಟ್ಟ ಮೆಣಸಿನಕಾಯಿಯನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ಅದರೊಳಗೆ ಹಸಿ ಬೆಳ್ಳುಳ್ಳಿ ಮತ್ತು ಹುರಿದ ಸಾಸಿವೆ, ಜೀರಿಗೆ, ಮೆಂತೆ ಕಾಳು,ಸ್ವಲ್ಪ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಬೇಕು.

೫.ಹುಣಸೆ ಹಣ್ಣಿನ ರಸವನ್ನು ಕುದಿಸಿದ ಮೇಲೆ ಆರಲು ಬಿಡಬೇಕು. ಆರಿದ ನಂತರ ಅದರೊಳಗೆ ಹೆಚ್ಚಿದ ಬೆಳ್ಳುಳ್ಳಿ,ಹಸಿ ಮೆಣಸಿನಕಾಯಿ, ಮತ್ತು ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿಕೊಳ್ಳಬೇಕು.

೬. ಎಲ್ಲವನ್ನು ಸೇರಿಸಿದಾಗ ರುಚಿಕರ,ಹುಳಿ ಖಾರ ಚಟ್ ಪಟ್ ರೆಡಿ ಆಗುತ್ತದೆ.

ಈ ‘ಹುಳಿ ಖಾರ್ ಚಟ್ ಪಟ್’ ಅನ್ನದ ಜೊತೆಗೆ, ಚಪಾತಿಯ ಜೊತೆಗೆ ರುಚಿಕರವಾಗಿರುತ್ತದೆ. ನೀವು ಮಾಡಿ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಈ ಅಡುಗೆ ಸೂತ್ರಧಾರಿ :

ಶಿಲ್ಪ ಮಲ್ಲಿಕಾರ್ಜುನ

aakritikannada@outlook.com

Home
News
Search
All Articles
Videos
About
%d bloggers like this:
Aakruti Kannada

FREE
VIEW