ಕನ್ನಡದ ಖ್ಯಾತ ನಟಿ ಅಕ್ಷತಾ ಪಾಂಡವಪುರ ಅವರು ಇಂಡಿಯನ್ ಫಿಲಂ ಫೆಸ್ಟಿವಲ್ ಮೆಲ್ಬೋರ್ನ್ (ಐ ಎಫ್ ಎಫ್ ಎಂ) ೨೦೨೩ ರ ಪ್ರಶಸ್ತಿಗೆ ‘ಕೋಳಿ ಎಸ್ರು’ ಸಿನಿಮಾದ ಅಭಿನಕ್ಕಾಗಿ ಅತ್ಯುತ್ತಮ ನಟಿ ನಾಮ ನಿರ್ದೇಶಿತರಗಳ ಪಟ್ಟಿಯಲ್ಲಿ ಅವರು ಕೂಡಾ ಆಯ್ಕೆಯಾಗಿದ್ದಾರೆ, ತಪ್ಪದೆ ಮುಂದೆ ಓದಿ…
ಇಂಡಿಯನ್ ಫಿಲಂ ಫೆಸ್ಟಿವಲ್ ಮೆಲ್ಬೋರ್ನ್ ೨೦೨೩ ರ ಪ್ರಶಸ್ತಿ ಕೊಡಮಾಡುವ ಅತ್ಯುತ್ತಮ ನಟಿ ವಿಭಾಗದಲ್ಲಿ ಕನ್ನಡದ ನಟಿ ಅಕ್ಷತಾ ಪಾಂಡವಪುರ ಅವರು ನಾಮ ನಿರ್ದೇಶಿತರಾಗಿ (ನಾಮಿನಿ) ಆಯ್ಕೆಯಾಗಿದ್ದಾರೆ, ಇದು ಕನ್ನಡಿಗರು ಹೆಮ್ಮೆ ಪಡುವ ಸಂಗತಿ.
ಐಶ್ವರ್ಯ ರಾಯ್, ರಾಣಿಮುಖರ್ಜಿ, ಭೂಮಿ ಪೇಡ್ನೆಕರ್, ಸಾಹಿಪಲ್ಲವಿ, ಸತ್ಯ ಮಲ್ಹೋತ್ರ, ಕಾಜೋಲ್, ನೀನಾ ಗುಪ್ತಾ ಹೀಗೆ ದೊಡ್ಡ ದೊಡ್ಡ ನಟಿಮಣಿಯರ ಮಧ್ಯೆ ನಮ್ಮ ಕನ್ನಡದ ಬಹುಮುಖ ಪ್ರತಿಭೆ ‘ಕೋಳಿ ಸಾರು’ ಸಿನಿಮಾದಲ್ಲಿನ ಅಭಿನಯಕ್ಕೆ ಅಕ್ಷತಾ ಪಾಂಡವಪುರ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಗೆ ನಾಮ ನಿರ್ದೇಶಿತ (ನಾಮಿನಿ)ರಾಗಿ ಆಯ್ಕೆಯಾದ ಕುರಿತು ನಟಿ ಅಕ್ಷತಾ ಪಾಂಡವರಪುರವರಿಗೆ ಆಕೃತಿಕನ್ನಡ ಮಾತನಾಡಿಸಿದಾಗ ‘ ಬಾಲ್ಯದಲ್ಲಿ ಟಿವಿ ಮುಂದೆ ಕೂತು ಈ ದೊಡ್ಡ ದೊಡ್ಡ ನಟಿಯರನ್ನು ನೋಡುತ್ತಾ ಬೆಳೆದೆ. ರಾಣಿ, ಕಾಜಲ್ ದೊಡ್ಡ ಫ್ಯಾನ್ ಆಗಿದ್ದೆ , ಇನ್ನೂ ನೀನಾ ಗುಪ್ತ ಜೀ ಅವರ ನನಗೆ ತುಂಬಾ ಅಚ್ಚುಮೆಚ್ಚು. ಸಾಹಿಪಲ್ಲವಿ, ಐಶ್ವರ್ಯ ರೈ ಇವರೆಲ್ಲ ನಂಬರ್ ಒನ್ ನಟಿಯರು. ಇಂತಹ ದಿಗ್ಗಜರ ಮಧ್ಯೆ ನನ್ನ ಒಂದು ಫೋಟೋ ನೋಡಿ ಪ್ರಶಸ್ತಿ ಕೈಗೆ ಸಿಕ್ಕಷ್ಟೇ ಖುಷಿ ಆಯ್ತು. ‘ಕೋಳಿ ಎಸ್ರು’ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟ ನಿರ್ದೇಶಕಿ ಚಂಪಾ ಶೆಟ್ಟಿ ಅವರಿಗೆ ತುಂಬು ಹೃದಯದ ಧನ್ಯವಾದಗಳು’ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಕನ್ನಡ, ಅದರಲ್ಲಿಯೂ ಮಹಿಳಾ ನಿರ್ದೇಶಕಿ ಚಂಪಾ ಶೆಟ್ಟಿ ಹಾಗೂ ಅಕ್ಷತಾ ಪಾಂಡವಪುರ ಅವರಂತ ಅದ್ಬುತ ಪ್ರತಿಭೆಯಿಂದ ಇಂದು ಕನ್ನಡ ‘ಇಂಡಿಯನ್ ಫಿಲಂ ಫೆಸ್ಟಿವಲ್ ಮೆಲ್ಬೋರ್ನ್ – ೨೦೨೩’ ಪ್ರಶಸ್ತಿವರೆಗೂ ಹೋಗಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ.
ನಿರ್ದೇಶಕಿ ಚಂಪಾ ಶೆಟ್ಟಿ , ನಟಿ ಅಕ್ಷತಾ ಪಾಂಡವಪುರ ಹಾಗೂ ಇಡೀ ಚಿತ್ರರಂಗಕ್ಕೆ ಆಕೃತಿ ಕನ್ನಡ ಶುಭಕೋರುತ್ತಾ, ಕನ್ನಡ ಸಿನಿಮಾಗಳು ವಿಶ್ವಾದಾದ್ಯಂತ ಪಸರಿಸಲಿ ಎಂದು ಆಶೀಸುತ್ತೇನೆ …
- ಆಕೃತಿ ನ್ಯೂಸ್