‘ಮೌಢ್ಯತೆ ಹೆಸರಿನಲ್ಲಿ ಪೂಜೆ-ಪುನಸ್ಕಾರಗಳು ಇರಬಾರದಿತ್ತು…ದೇವರು ನಮಗೆ ಜೆಜಿ ಆಗೇಯೇ ಇರಬೇಕಿತ್ತು…ದೇವರು ಹೀಗಿರಬೇಕು…’ಮುಂದೆ ಓದಿ ಭಾವನೆಗಳಿಲ್ಲದವಳ ದೇವರು…
ಗೆಳೆಯ ದೇವರು ನಮಗೆ ಜೆಜಿ ಆಗೆ ಇರಬೇಕಿತ್ತು.
ಅವನು ದೇವರ ಆಗಬಾರದಿತ್ತು
ಎಲ್ಲವನ್ನು ನಂಬಿ ಕೈಮುಗಿಯುವ ಮನಸ್ಸು ಹಾಗೆ ಇರಬೇಕಿತ್ತು
ಎಲ್ಲವನ್ನು ಪ್ರಶ್ನಿಸಿ ತಿಳಿದುಕೊಳ್ಳ ಬಾರದಿತ್ತು
ಜೆಜಿ ಎನ್ನುವ ಭಯ ಹಾಗೆ ಉಳಿಯಬೇಕಿತ್ತು
ಮೌಢ್ಯತೆ ಹೆಸರಿನಲ್ಲಿ ಪೂಜೆ-ಪುನಸ್ಕಾರಗಳು ಇರಬಾರದಿತ್ತು
ಎಲ್ಲರಲ್ಲೂ ಎಲ್ಲದರಲ್ಲೂ ಎಲ್ಲ ಸಮಯದಲ್ಲೂ ಜೆಜಿ ಎಂದೊಡನೆ ಭಕ್ತಿ ಮೂಡುವ ಕಾಲ ಹಾಗೆ ಇರಬೇಕಿತ್ತು
ದೇವರನ್ನು ಜಾತಿಗಳು ಕಟ್ಟಿ ಹಾಕಬಾರದಿತ್ತು
ಜೆಜಿ ಎಂದೊಡನೆ ಅಲ್ಲಿ ಕೊಡುವ ಪ್ರಸಾದ ಮಾತ್ರ ಕಣ್ಮುಂದೆ ಬರಬೇಕಿತ್ತು
ಅರ್ಚಕರು ಹೇಳುವ ಪೂಜೆ ಗಳ ಪಟ್ಟಿ ಬರಬಾರದಿತ್ತು
ಮನೆಯ ಕೋಣೆಯಲ್ಲಿಯೇ ಅಪ್ಪನ ಪಾದದಲ್ಲಿ ದೇವರು ಜೇಜಿಯಾಗಿ ಉಳಿಯಬೇಕಿತ್ತು
ಹಣಕೊಟ್ಟು ಸಂದರ್ಶನ ಪಡೆಯುವ ಪ್ರಮೇಯ ಬರಬಾರದಿತ್ತು.
ಓ ದೇವರೇ ನೀನು ಜೆಜಿ ಆಗಿಯೇ ಇರಬೇಕಿತ್ತು
ನಿನ್ನೊಳಗಿನ ಭಕ್ತಿ ಹಾಗೆ ಇರಬೇಕಿತ್ತು
- ಕಾವ್ಯನಾಮ – ಭಾವನೆಗಳಿಲ್ಲದವಳು