‘ಕಮಲ ವದನೆ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ.




ಅವಳ ನೋಟಕ್ಕೆ ಮನಸ್ಸೆಲ್ಲ ಹೇಗೆಲ್ಲ ಸಂತೋಷ ಪಡುತ್ತದೆ ಒಂದು ಕವನದಲ್ಲಿ ಕಟ್ಟುಕೊಟ್ಟಿದ್ದಾರೆ, ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು, ಮುಂದೆ ಓದಿ…

ಸನಿಹ ಸುಳಿದು ಸಿಹಿಯ ಗಾಳಿ
ಅವಳ ನೆನಪು ತರಿಸಿತು
ಸಂಜೆ ಹೊತ್ತು ಮುಗುಳು ನಗೆಯು
ಗುಳಿಯ ಕೆನ್ನೆ ಅರಳಿತು

ತಿರೆಯ ಮೇಲೆ ಸುರೆಯ ಅಂದ
ಇವಳ ನೋಡಿ ಕೂಡಿತು
ಸಿರಿಯನೆಲ್ಲ ಇವಳೆ ಹೊದ್ದು
ಹಸಿರು ಚೆಲುವು ಮೂಡಿತು

ಇವಳ ಮನೆಯ ಮಾಡಿನಲ್ಲಿ
ಗಿಳಿಯ ಮರಿಯು ಕುಳಿತಿತು
ಇವಳ ನುಡಿಯ ಕೇಳಿ ನಲಿದು
ತಾನು ಕೂಡ ಉಲಿದಿತು

ನವಿಲು ಇವಳ ಕಣ್ಣ ನೋಡಿ
ಬಳಿಗೆ ‌ಕುಣಿಯ ಬಂದಿತು
ಅವಳ ಹೊಳೆವ ರೂಪ ಕಂಡು
ರೆಕ್ಕೆ ಬಿಚ್ಚಿ ಕುಣಿದಿತು

ಹಂಸವನದಿ ನಡೆದರಿವಳು
ಮನಸು ಧ್ವಂಸ ವಾಯಿತು
ಕಮಲವದನೆ ಮನದ ಮದನೆ
ಶಾಂತಿ ಮನಸಿಗಾಯಿತು.


  • ಚನ್ನಕೇಶವ ಜಿ ಲಾಳನಕಟ್ಟೆ  (ಕವಿಗಳು, ಲೇಖಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading