ಮನುಕುಲದ ಸಸ್ಯ ಸಂಪತ್ತು : ಕಾವ್ಯಾ ಹೆಗಡೆ

ಗಂಧದ ತವರು ಕರ್ನಾಟಕ.ಕನ್ನಡದಲ್ಲಿ ಶ್ರೀಗಂಧ, ಸಂಸ್ಕೃತದಲ್ಲಿ ಚಂದನ, ತುಳು ಭಾಷೆಯಲ್ಲಿ ಗಂಧದ ಮರ,‌ ಹಿಂದಿಯಲ್ಲಿ ಸರ್ಫೆದ್ ಚಂದನ, ಇಂಗ್ಲಿಷ್ ನಲ್ಲಿ ಸ್ಯಾಂಡಲ್ವುಡ್ ಎಂದು ಕರೆಯುತ್ತಾರೆ. ಸಸ್ಯ ಸಂಪತ್ತಿರುವ ನಮ್ಮ ನಾಡಿನ ಕುರಿತು ಯುವ ಲೇಖಕರಾದ ಕಾವ್ಯಾ ಹೆಗಡೆ ಅವರು ಬೆರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…

ಔಷಧಿ ಗುಣವುಳ್ಳ ಸಸ್ಯ ಸಂಪತ್ತು ನಮ್ಮ ದೇಶದ ಹಿರಿಮೆ. ಇದರ ವೈವಿಧ್ಯ ವಿಸ್ತಾರವಾದದ್ದು. ಪುರಾತನ ಕಾಲದ ಪ್ರಾರಂಭದಿಂದಲೂ ಸಸ್ಯ ಸಂಜೀವಿನಿಗಳಿಗೆ ಅದರದೇ ಆದ ಮಹತ್ವವಿದೆ. ಇಂದಿಗೂ ಆಯುರ್ವೇದ ವಿಜ್ಞಾನ ಸಹಸ್ರಾರು ವರ್ಷಗಳಿಂದ ತನ್ನ ನಿರಂತರತೆಯನ್ನು ಕಾಯ್ದುಕೊಂಡು ಬಂದಿದೆ.

ನಮಗೆ ನಮ್ಮ ನೆಲದ ಬಗ್ಗೆ ಜಲದ ಬಗ್ಗೆ ಎಷ್ಟು ಭಾವನಾತ್ಮಕತೆ ಹಾಗೂ ಅಭಿಮಾನ ಇದೆಯೋ ಅಷ್ಟೇ ಭಾವನಾತ್ಮಕ ಸಂಬಂಧ ಈ ನೆಲದಿಂದ ಬಂದ ಸಸ್ಯ ರಾಶಿಯ ಮೇಲು ಇರಬೇಕು. ಆಹಾರವೇ ಆಗಲಿ ಔಷಧಿಯೇ ಆಗಲಿ ನಮಗೆ ನಮ್ಮದೇ ನೆಲದ ಸಮೃದ್ಧ ಸಸ್ಯ ಸಂಪತ್ತೇ ಸರ್ವಶ್ರೇಷ್ಠ. ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಯಂತೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅದೆಷ್ಟು ಸಸ್ಯ ರಾಶಿಗಳು ಔಷಧಿ ಗುಣಗಳನ್ನ ಹೊಂದಿರುತ್ತವೆ. ಅದರಲ್ಲಿ ಗಂಧದ ಮರ ಅರಿಶಿನ ಕೂಡ ಪ್ರಮುಖವಾದದ್ದು.

ಫೋಟೋ ಕೃಪೆ: ಅಂತರ್ಜಾಲ

ಸುಗಂಧವನ್ನು ಬೀರುವ ಗಂಧದ ಮರ

ಗಂಧದ ತವರು ಕರ್ನಾಟಕ. ಈ ಮರವು ನಮ್ಮ ಅರಣ್ಯದಲ್ಲಿ ಬೆಳೆಯುವ ಅತ್ಯಂತ ಬೆಳೆ ಬಾಳುವ ಮರ. ಕೆಲವರು ಗಂಧದ ಲೋಪವನ್ನು ತಮ್ಮ ಹಣೆಗೆ ಹಚ್ಚಿಕೊಳ್ಳುತ್ತಾರೆ. ಈ ಲೋಪವನ್ನು ಹಣೆಗೆ ಹಚ್ಚುವುದರಿಂದ ತಲೆಯು ಶಾಂತಿತೆಯಿಂದ ಕೂಡಿ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಹಾಗೂ ಸಂಪ್ರದಾಯವೂ ಕೂಡ ಇದೆ. ಈ ಮರವು ಸಸ್ಯ ಜಗತ್ತಿನಲ್ಲಿ ಒಂದು ಶ್ರೇಷ್ಠವಾದ ಸಸ್ಯವಾಗಿದೆ. ಕನ್ನಡದಲ್ಲಿ ಶ್ರೀಗಂಧ, ಸಂಸ್ಕೃತದಲ್ಲಿ ಚಂದನ, ತುಳು ಭಾಷೆಯಲ್ಲಿ ಗಂಧದ ಮರ,‌ ಹಿಂದಿಯಲ್ಲಿ ಸರ್ಫೆದ್ ಚಂದನ, ಇಂಗ್ಲಿಷ್ ನಲ್ಲಿ ಸ್ಯಾಂಡಲ್ವುಡ್ ಎಂದು ಕರೆಯುತ್ತಾರೆ.

ಈ ಮರವು ಸುಮಾರು 33 ಅಡಿ ಎತ್ತರದ ವರೆಗೆ ಬೆಳೆಯುತ್ತದೆ ಮರವು ಸದಾ ಕಾಲ ಎಲೆಗಳಿಂದ ತುಂಬಿ ಹಸಿರಾಗಿರುತ್ತದೆ. ಸಾಮಾನ್ಯವಾಗಿ ಗಂಧದ ಮರದಲ್ಲಿ ಬಿಳಿಚಂದನ ಕೆಂಪು ಚಂದನ ಎಂಬ ಎರಡು ವಿಧಗಳಿವೆ. ಗಂಧದ ಮರ ಕಷಾಯವನ್ನು ಕುಡಿಯುವುದರಿಂದ ಶೂದ್ರಮೇಹ ನಿವಾರಣೆಯಾಗುತ್ತದೆ. ಶ್ರೀಗಂಧವನ್ನು ಅರಿದು ಸಕ್ಕರೆ ಬೆರೆಸಿ ಸೇವಿಸುವುದರಿಂದ ಉರಿ ಮೂತ್ರ ಹಾಗೂ ವಾತರೋಗ ನಿವಾರಣೆಯಾಗುತ್ತದೆ. ನೆಲ್ಲಿಕಾಯಿ ರಸದೊಂದಿಗೆ ಗಂಧವನ್ನು ಸೇವಿಸಿದರೆ ವಾಂತಿಯು ಕೂಡ ಕಡಿಮೆಯಾಗುತ್ತದೆ. ಹೀಗೆ ಶ್ರೀಗಂಧ ಮರವು ತನ್ನದೇ ಆದ ಉಪಯೋಗವನ್ನು ಹೊಂದಿದೆ.

ಫೋಟೋ ಕೃಪೆ: ಅಂತರ್ಜಾಲ

ಹಳದಿ ಬಣ್ಣದಿಂದ ಕಂಗೊಳಿಸುವ ಅರಿಶಿಣ

ಅರಿಶಿಣ ವೇದ ಕಾಲದಿಂದಲೂ ಹೆಸರುವಾಸಿ. ನಮ್ಮ ದೇಶದಲ್ಲಿ ಅರಿಶಿನವಿಲ್ಲದೆ ಯಾವ ಶುಭ ಕಾರ್ಯಗಳು ನಡೆಯುವುದಿಲ್ಲ. ಅಡುಗೆಮನೆಯಿಂದ ಹಿಡಿದು ಮದುವೆ ಮಂಟಪದವರೆಗೂ ಅರಿಶಿಣವು ತನ್ನದೇ ಆದ ಕಾರ್ಯವನ್ನು ನಿರ್ವಹಿಸುತ್ತದೆ. ಹಿಂದಿನ ಕಾಲದಿಂದ ಹಿಡಿದು ಪ್ರಸ್ತುತ ದಿನಮಾನಗಳಲ್ಲಿಯೂ ಹೆಣ್ಣು ಮಕ್ಕಳು ಸೌಂದರ್ಯವರ್ಧಕವಾಗಿ ಅರಿಶಿಣವನ್ನು ಬಳಸುತ್ತಾರೆ. ಅರಿಶಿಣವನ್ನು ಪೂಜೆಗಳಿಗೆ ಅಡುಗೆಗಳಿಗೆ ಹೇರಳವಾಗಿ ಉಪಯೋಗಿಸುತ್ತಾರೆ.

ಕನ್ನಡದಲ್ಲಿ ಅರಿಶಿಣ , ಸಂಸ್ಕೃತದಲ್ಲಿ ಹರಿದ್ರ, ಹಿಂದಿಯಲ್ಲಿ ಹಳದಿ ,‌ ಇಂಗ್ಲೀಷ್ ನಲ್ಲಿ ಟರ್ಮರಿಕ್ ಎಂದು ಕರೆಯುತ್ತಾರೆ. ಹುರಿದ ಅರಿಶಿಣವನ್ನು ಜೇನಿನೊಂದಿಗೆ ಉಪಯೋಗಿಸಿದರೆ ಅಸ್ತಮಾ ಕೆಮ್ಮು ನಿವಾರಣೆಯಾಗುತ್ತದೆ. ಶೀತ ನೆಗಡಿ ಇರುವಾಗ ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಅರಿಶಿಣ ಪುಡಿ ಮತ್ತು ಬೆಲ್ಲ ಸೇವನೆ ಮಾಡಬಹುದು. ಹೀಗೆ ಅರಿಶಿಣ ಕೂಡ ವಿವಿಧ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.


  • ಕಾವ್ಯಾ ಹೆಗಡೆ – ಎಸ್. ಡಿ.ಎಮ್, ಉಜಿರೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW