ಕುಂದುರ್ಪಿ ಗ್ರಾಮದ ಪುರಾತನ ಹೆಸರು ಕುಸುಮಗಿರಿ

ಆಂಧ್ರಪ್ರದೇಶದ ರಾಯಲಸೀಮೆಯ ಅನಂತಪುರಂ ಜಿಲ್ಲೆಯ ಕಲ್ಯಾಣದುರ್ಗ ತಾಲ್ಲೂಕಿನ ಕುಂದುರ‌್ಪಿ ಗ್ರಾಮದ ಬೆಟ್ಟಕ್ಕೆ ಲೇಖಕರು ಡಾ.ವಡ್ಡಗೆರೆ ನಾಗರಾಜಯ್ಯ ಅವರು ಭೇಟಿ ನೀಡಿದ ಸಂದರ್ಭದಲ್ಲಿ ತಗೆದಂತಹ ಫೋಟೋದ ಜೊತೆಗೆ ಮಹತ್ವವಾದ ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಕುಂದುರ‌್ಪಿ ಗ್ರಾಮದ ಪುರಾತನ ಹೆಸರು ಕುಸುಮಗಿರಿ.

ಪೂರ್ವದಲ್ಲಿ ಕುಸುಮಗಿರಿ ಎಂದು ಹೆಸರಾಗಿದ್ದ ಕುಂದುರ್ಪಿ ಎಂಬ ಪುರಾತನ ನಗರಿಯಲ್ಲಿ… ರಾಯಲಸೀಮೆಯ ಅನಂತಪುರಂ ಜಿಲ್ಲೆಯ ಕಲ್ಯಾಣದುರ್ಗ ತಾಲ್ಲೂಕಿನ ಅಮರಾಪುರಂ ಮಂಡಲದ ಕುದುರ್ಪಿಯ ಪುರದೇವತೆ ಕುಂದಿರ‌್ಪಮ್ಮ ಕುಂದುರ್ಪಿ ಬೆಟ್ಟದ ಪಾದದಲ್ಲಿ ನೆಲೆಸಿದ್ದಾಳೆ.

ಹನ್ನೊಂದನೇ ಶತಮಾನದಲ್ಲಿ ನಮ್ಮೂರು ವಡ್ಡಗೆರೆಯು ವರಪುರ ಎಂಬ ಹೆಸರಿನ ಪಟ್ಟಣವಾಗಿತ್ತು. ವಡ್ಡಗೆರೆ ಗ್ರಾಮದ ಪುರದೇವತೆಯಾದ ವಡ್ಡಗೆರೆ ನಾಗಮ್ಮ ಮತ್ತು ಸಾಂಸ್ಕೃತಿಕ ನಾಯಕನಾದ ನಾಗಣ್ಣನ ಮದುವೆಯ ಕಾಲದಲ್ಲಿ ಚಿನ್ನ ಬೆಳ್ಳಿಯ ಒಡವೆಗಳನ್ನು ತಯಾರಿಸಲು ಕುಂದುರ‌್ಪಿ ಪಟ್ಟದಿಂದ ಅಕ್ಕಸಾಲಿಗರನ್ನು ವಡ್ಡಗೆರೆಗೆ ಕರೆಸಿಕೊಳ್ಳಲಾಗಿತ್ತೆಂದು ಜಾನಪದ ಕಾವ್ಯದಲ್ಲಿ ಉಲ್ಲೇಖವಿದೆ. ನಾಗಣ್ಣನ ಅಜ್ಜ ಅಜ್ಜಿಯರಾದ ಬೈಚಪ್ಪ ಮತ್ತು ಪದುಮವ್ವನವರು ಕುಂದುರ‌್ಪಿಯ ಅಕ್ಕಸಾಲಿಗರನ್ನು ವಡ್ಡಗೆರೆಗೆ ಕರೆಸಿಕೊಂಡಿದ್ದರೆಂದು ಜಾನಪದ ಕಾವ್ಯದಿಂದ ತಿಳಿದುಬರುತ್ತದೆ. ಪುರಾತನ ನಗರಿ ಕುಂದುರ‌್ಪಿಯೊಳಗೆ ಇವತ್ತು ನಾನು ಸುತ್ತಾಡುವಾಗ ನಾನು ತೆಗೆದ ಕೆಲವು ಫೋಟೋಗಳಿವು…

This slideshow requires JavaScript.


  • ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು), ಬೆಂಗಳೂರು .

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW