ಹಸಿವಿನಿಂದ ಅಳುವ ತಮಟೆಗೆ ಬೆಂಕಿಯ ಕಾವು ಬೇರೆ,ಶೃತಿ ಪೆಟ್ಟಿಗೆ ಕಾದು ಕೂತಿದೆ…ವೈ ಜಿ ಅಶೋಕ್ ಕುಮಾರ್ ಅವರ ಲೇಖನಿಯಲ್ಲಿ ಅರಳಿದ ಒಂದು ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಅದೇ ಹಳೆಯ ಹಾಡೆಂದು ತೂಕಡಿಸದಿರು
ಧ್ಯಾನಿಸಿ ಕೇಳು
ಎದೆ ಬಡಿತದ ಏರಿಳಿತ
ಒಂದೇ ವೀಣೆಯ ತಂತಿಯಾದರೂ ನುಡಿಯುತಿತ್ತು
ಎಲ್ಲ ಸ್ವರಗಳನು
ಎತ್ತರದ ಸ್ತರದಲಿ
ಇನ್ನೂ ತಂಬೂರಿಯ
ಶೃತಿ ಹಿಡಿಯಬೇಕಿದೆ ಧೂಳೊರೆಸಿ
ಶೃತಿ ಪೆಟ್ಟಿಗೆ
ಕಾದು ಕೂತಿದೆ
ಗಂಟಲು ಸರಿಪಡಿಸಿ
ಉಡುಗೆಯ
ಕಳಚಿದೆ ತಬಲ
ಎಷ್ವು ರಮಿಸಿದರೂ
ವಿರಹ ಮುಗಿದಿಲ್ಲ ಈ
ಒಂಟಿ ಪಿಟೀಲಿಗೆ
ಹಸಿವಿನಿಂದ ಅಳುವ ತಮಟೆಗೆ ಬೆಂಕಿಯ ಕಾವು ಬೇರೆ, ಇದಕ್ಕಂತೂ ನಿತ್ಯ ಕಾಯಕ
ಜಗಲಿಯಲ್ಲೇ ನಿಂತಿದೆ
ಶೂದ್ರ ಸನಾದಿ
ಹೋಗಲಿ ಬಿಡು ಈಗೇತಕೆ ಚಿಂತೆ
ಸಂಗೀತ ಕಛೇರಿಯ
ಜನರು ಅಂತರ
ಕಾಯ್ದುಕೊಂಡಿದ್ದಾರೆ
- ವೈ ಜಿ ಅಶೋಕ್ ಕುಮಾರ್ – ಪತ್ರಕರ್ತರು , ಲೇಖಕರು, ಕವಿಗಳು
