‘ಮದಗುಣಿಕೆ’ – ಸುಮನಾ ಮಳಲಗದ್ದೆ
ಮದಗುಣಿಕೆ, ದತ್ತೂರಿ ಅಥವಾ ಉಮ್ಮತ್ತ ಎಲೆಯ ಮಹತ್ವವನ್ನು ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ….

ಮದಗುಣಿಕೆ, ದತ್ತೂರಿ ಅಥವಾ ಉಮ್ಮತ್ತ: ಸ್ವಲ್ಪ ಕೋಲ್ಡ್ ಪ್ರಕೃತಿಯ ಅಭಾಲ ವೃದ್ಧರಿಗೂ ಬರಬಹುದಾದ ಕೆಪ್ಪಟರಾಯ್ ಅಥವಾ ಕಪಾಲಗುರ. ತಡೆದು ಕೊಳ್ಳಲು ಆಗದೆ ಹಲ್ಲು ನೋವೋ, ತಲೆನೋವೋ, ಕಿವಿ ನೋವೋ ಏನಾಗುತ್ತಿದೆ ಎಂದು ಊಹಿಸಲೂ ಕಷ್ಠ ಇದರ ಭಾದೆ. ಟಾರ್ಚ್ ಸಹಾಯದಿಂದ ನೋಡಿದರೆ ಕಿವಿಯಲ್ಲಿ ಬಿಳಿ ಬಣ್ಣದ ಏನೋ ಒಂಥರಾ ಇದೆ ಅಂತ ತಿಳಿಯುತ್ತದೆ. ಇದಕ್ಕೆ ದೇವರು ಕೊಟ್ಟ ವರ ಮದಗುಣಿಕೆ.

ಫೋಟೋ ಕೃಪೆ : google

ಮದಗುಣಿಕೆ ಎಲೆಗಳನ್ನು ಸ್ವಲ್ಪ ಬಿಸಿ ಮಾಡಿ ರಸತೆಗೆದು ನಿಂಬೆರಸ (ದೊಡ್ಲಿ ಹುಳಿ ಒಳ್ಳೆಯದು) ಸ್ವಲ್ಪ ಹಾಕಿ ಸಣ್ಣ ಮಣ್ಣಿನ ಮಡಿಕೆಯಲ್ಲಿ ಸೇರಿಸಿ, ಬಿಸಿ ಮಾಡಿ ಬೆಚ್ಚನೆಯ ರಸವನ್ನು ಕಪಾಲ ಮತ್ತು ಗದ್ದಕ್ಕೆಗಂಟೆಗೆ ಒಮ್ಮೆ ಹಚ್ಚಿ.

ಒಂದು ಚಮಚ ನೀರಿನಲ್ಲಿ ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಕಿವಿಯಲ್ಲಿ ಹಾಕಿ ತಕ್ಷಣ ಬಗ್ಗಿ ಹೊರಹಾಕಿ. ಇದರಿಂದ ನೋವು ಗುಣವಾಗುತ್ತದೆ. ನಂತರ ಕಿವಿಗೆ ತುಳಸಿಯನ್ನು ಮತ್ತು ಕೊಬ್ಬರಿ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಬೇಯಿಸಿ ಗರಿಗರಿಯಾದ ನಂತರ ಸೋಸಿ ಗಾಜಿನ ಬಾಟಲಿಯಲ್ಲಿ ಹಾಕಿ. ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಸ್ವಲ್ಪ ಬೆಚ್ಚಗೆ ಮಾಡಿ ಬಿಡಿ. ಕಾಯಿಲೆ ಮತ್ತೆ ಬರುವುದಿಲ್ಲ.ಇನ್ನೂ ಕಿವಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಅದು ಅಲ್ಲಿಯೇ ಗಟ್ಟಿಯಾಗಿ ಸಮಸ್ಯೆಗೆ ಕಾರಣವಾಗಿದೆ ಎಂದು ಕೆಲವರ ಅಂಬೋಣ.
ಜೀವ ಇರುವ ಎಲ್ಲಾ ಪ್ರಾಣಿಗಳ ದೇಹದ ಉಷ್ಣತೆ ಎಷ್ಟು ಗೊತ್ತಾ. ಫ್ರೀಜರ್ ನಲ್ಲಿ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಇಡಿ ಗಟ್ಟಿಯಾದ ನಂತರ ದೇಹದ ಯಾವುದೇ ಭಾಗದಲ್ಲಿ ಇಟ್ಟುಕೊಂಡು ನೋಡಿ ಅದು ಕರಗಿ ನೀರಾಗುತ್ತದೆ. ಮಾಡಿ ನೋಡಿ ನಂತರ ಉತ್ತರಿಸಿ ಪ್ರತ್ಯಕ್ಷ ಕಂಡರೂ ಪ್ರಮಾಣಿಕರಿಸಿ ನಂತರ ಒಪ್ಪಿಕೊಳ್ಳಿ.


  • ಸುಮನಾ ಮಳಲಗದ್ದೆ
0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW