ನನ್ನೊಲವಿನಾ….ಪರಿಭಾಷೆಯಲಿ ಕುಂಭದಲಿ ತುಂಬಿದಾ ಕವಿತೆಯಾ ಜಾತ್ರೆ’…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಕವನವನ್ನು ತಪ್ಪದೆ ಮುಂದೆ ಓದಿ…
ನೀನಿತ್ತ ಒಲವ …ದಾನಿ
ಖಾಲಿಯಾಗಿದೆ ನಲ್ಲ ನಾ ಸವಿದು
ಜೇನಿನಂತೆ ಮಧುಬನದಿ
ಎಸೆಯಲಾರೆ…
ತುಂಬಲಾರೆ ಮತ್ತೇನನೋ
ಹಾಗೇ ಇರಲಿ ಬಿಡು
ತುಂಬುತ್ತೇನೆ ಹನಿಹನಿಯಾಗಿ
ನಿನ್ನ ಸವಿನೆನಪ ಬಿಂದುಗಳನು
ನೀನು ಹಿಂತಿರುಗುವಷ್ಟರಲಿ
ಭರ್ತಿಯಾಗಬಹುದು ಅದರ ಕೊರಳು
ನಿನಗಾಗಿ ನಾ ವಿರಹದ ಕಹಿಯ
ನೆನಪಿನ ಜೇನ್ ಬೆರೆಸಿ ಚಪ್ಪರಿಸಿದಂತೆ
ನೀನೂ ಸವಿಯುವೆಯಂತೆ ಬೆಂದೆದೆಯು
ರಸಪಾಕಗೊಳಿಸಿದ ಈ ಸವಿಸುಧೆಯ ಒರತೆ…
ಹೀಗೂ ಸನಿಹವಿರು…
ಖಾಲಿಬುರುಡೆಯಾಗಿ
ನೀ ಬಂದೇ ನೋಡಬೇಕಷ್ಟೆ
ನನ್ನೊಲವಿನಾ….ಪರಿಭಾಷೆಯಲಿ
ಕುಂಭದಲಿ ತುಂಬಿದಾ ಕವಿತೆಯಾ ಜಾತ್ರೆ
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಲೇಖಕಿ, ಕೊಡಗು
