ಡಾ. ಕೆ.ಎಸ್. ಪವಿತ್ರ ಅವರು ಮನೋವೈದ್ಯರು. ನೃತ್ಯ ಕಲಾವಿದರು ಹಾಗೂ ಲೇಖಕರಾಗಿದ್ದಾರೆ. ಇದುವರೆಗೂ ೨೫ ಪುಸ್ತಕಗಳನ್ನು ಪ್ರಕಟಿಸಿದ್ದು, ಇವರಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ಅವರ ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ! ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿ : ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ!
ಲೇಖಕರು: ಡಾ. ಕೆ.ಎಸ್. ಪವಿತ್ರ
ಪ್ರಕಾಶನ : ಸ್ನೇಹಾ ಪಬ್ಲಿಕೇಷನ್ಸ್ ಹೌಸ್ ಬೆಂಗಳೂರು.
ಮುದ್ರಣದ ವರ್ಷ: ೨೦೧೮.
ಪುಟಗಳು: ೧೩೨.
ಬೆಲೆ: ರೂ. ೧೦೦ .
ಮಹಿಳೆಯರ ಆರೋಗ್ಯ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಅದರಲ್ಲೂ ಮಾನಸಿಕ ಆರೋಗ್ಯದ ಬಗ್ಗೆ ಹೇಗೆಲ್ಲಾ ಎಚ್ಚರ ವಹಿಸ ಬೇಕು ಎನ್ನುವ ಬಗ್ಗೆ ಇಲ್ಲಿನ ಲೇಖನಗಳು ಬೆಳಕು ಚೆಲ್ಲುತ್ತವೆ. ತಮ್ಮ ಬಳಿ ಚಿಕಿತ್ಸೆಗೆಂದು ಬರುವ ಮಹಿಳೆಯರ ನೋವು ಹಾಗೂ ಅವರನ್ನು ಅರ್ಥ ಮಾಡಿ ಕೊಳ್ಳಲು ಸೋಲುವ ಸಮಾಜ ಇವು ತಮ್ಮ ಲೇಖನಗಳಿಗೆ ಸ್ಫೂರ್ತಿ ಎಂಬುದಾಗಿ ಲೇಖಕಿ ಹೇಳಿದ್ದಾರೆ.

ಈ ಕೃತಿಯನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ್ದಾರೆ. *ಮೊದಲ ಭಾಗದಲ್ಲಿ ಜೀವನ ಶೈಲಿಯ ಕುರಿತದ್ದಾಗಿದೆ. ಡೈರಿ ಬರೆಯುವ ಅಭ್ಯಾಸ ಹೊಂದಿದ್ದರೆ ಒಳ್ಳೆಯದು. ಸ್ವಂತ ಅಭಿಪ್ರಾಯ ಅನುಭವ ಗಳನ್ನು ಬರೆಯುವುದರ ಮೂಲಕ ಹಲವು ಮಾನಸಿಕ ಅಡೆ ತಡೆಗಳು ಒಡೆದು ಹೋಗಿ ಮೆದುಳಿನ ಸಾಮರ್ಥ್ಯ ಹೆಚ್ಚುವುದು. ಭಾಷಾ ಕೌಶಲ್ಯ ವನ್ನೂ ಚುರುಕು ಗೊಳಿಸಿ ಭಾವನೆಗಳನ್ನು ಹೊರಹಾಕುತ್ತದೆ. ಆದ್ದರಿಂದ ಡೈರಿ ಬರೆಯುವ ಮೂಲಕ ಮನಸ್ಸಿ ನೊಂದಿಗೆ ಮಾತನಾಡಿ ಹಗುರಾಗಿ ಎಂದಿದ್ದಾರೆ.
- ಮನೋವೈಜ್ಞಾನಿಕವಾಗಿ ಮನುಷ್ಯನಲ್ಲಿ ಅಲ್ಪಸ್ವಲ್ಪ ಹೊಟ್ಟೆಕಿಚ್ಚು ಸಹಜ . ಆದರೆ ಅದು ಅತಿಯಾದಾಗ ಸಂಬಂಧಗಳು ಹದಗೆಡುತ್ತದೆ. ಹೊಟ್ಟೆಕಿಚ್ಚು ಗೆಲ್ಲುವುದು ಅಂದರೆ ಅದು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವ ನಮ್ಮ ಮನಸ್ಸನ್ನು ನಾವು ಒಳ ಹೊಕ್ಕು ನೋಡುವ ಪ್ರಕ್ರಿಯೆ. ಕಹಿಯಾಗಿ ಮಾತನಾಡುವುದು, ಕೋಪ ಇವುಗಳಿಂದ ದೂರವಿರಲು ಪ್ರಯತ್ನಿಸಿ, ಮುಕ್ತ ಸಂವಹನ ದಿಂದ ಅವನ್ನು ಗೆಲ್ಲಲು ಪ್ರಯತ್ನಿಸಿ ಎನ್ನುತ್ತಾರೆ ಡಾಕ್ಟರು.
- ನಮ್ಮ ಸುಪ್ತ ಮನಸ್ಸು ಕನಸು ಕಾಣುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದರೆ ಎಲ್ಲವೂ ನಿಜವಾಗಿ ಬಿಡುತ್ತದೆ ಎಂಬ ಮೂಢ ನಂಬಿಕೆ ಸಲ್ಲದು.
- ಹಗಲಿನಲ್ಲಿ ಮಾಡುವ ೧೫ ನಿಮಿಷದ ಚಿಕ್ಕ ನಿದ್ದೆ ಹೆಚ್ಚಿನ ಜನರಲ್ಲಿ ಏಕಾಗ್ರತೆ, ನೆನಪಿನ ಶಕ್ತಿ ಮತ್ತು ಕ್ರಿಯಾತ್ಮಕ ವಾಗಿ ಯೋಚಿಸುವ ಸಾಮರ್ಥ್ಯ ವನ್ನು ಹೆಚ್ಚಿಸು ತ್ತವೆ ಎಂಬುದು ನಿರೂಪಿತವಾಗಿದೆ. ಅದರೊಂದಿಗೆ ಹೃದಯ ಸಂಬಂಧೀ ಕಾಯಿಲೆಗಳನ್ನು ತಡೆಯುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆಂದು ಕಂಡು ಬಂದಿದೆ. ಆದರೆ ಈ ಎಲ್ಲ ಲಾಭಗಳು ಸಾಧ್ಯವಾಗುವುದು ನೀವು ರಾತ್ರಿ ನಿದ್ರೆಯನ್ನೂ ಸರಿಯಾಗಿ ಮಾಡಿದಲ್ಲಿ ಮಾತ್ರ ಎಂಬುದು ಕುತೂಹಲಕಾರಿ ಸಂಗತಿ.
- ಏಕಾಗ್ರತೆ ಎಂಬುದು ಸುಲಭದ ಮಾತಲ್ಲ. ಅದು ಮನಸ್ಸಿನೊಂದಿಗೆ ಸಂವಾದದಲ್ಲಿ ಧ್ಯಾನಿಸುವ ಸ್ಥಿತಿ. ಆದರೆ ಕುಳಿತು ಕಣ್ಮುಚ್ಚಿ ಮಾಡುವುದೊಂದೇ ಧ್ಯಾನವಲ್ಲ. ನಾವು ಮಾಡುವ ಪ್ರತೀ ಕಾರ್ಯವನ್ನೂ ಪ್ರೀತಿಯಿಂದ, ಕುತೂಹಲದಿಂದ ಮಾಡುವ ಮೂಲಕ ನಿಜ ಅರ್ಥದಲ್ಲಿ ಧ್ಯಾನಸ್ಥರಾಗುವುದೇ ಒಳ್ಳೆಯದು.
ಒತ್ತಡದ ಸನ್ನಿವೇಶಗಳಲ್ಲಿ ತಾಳ್ಮೆ ಉಪಯುಕ್ತ. ತಾಳ್ಮೆ ಬೆಳೆಸಿ ಕೊಳ್ಳಲು ಆದಷ್ಟು ‘ಕ್ಯೂ’ ಗಳಲ್ಲಿ ನಿಲ್ಲುವಂತೆಯೂ ಮನೋ ವಿಜ್ಞಾನದ ಸಂಶೋಧನೆಗಳು ಶಿಫಾರಸ್ಸು ಮಾಡು ತ್ತವೆಯಂತೆ.!! ತಾಳ್ಮೆಯಿಂದ ಕೋಪ ಕಡಿಮೆಯಾಗಿ ಸೃಜನಶೀಲತೆ ಹೆಚ್ಚಿ ಆರೋಗ್ಯ ಸಮಸ್ಯೆಗಳು ಇಲ್ಲವಾಗುತ್ತದೆ.

ಭಾಗ-೨
ಇಲ್ಲಿ ಮಹಿಳೆಯರಲ್ಲಿ ಕಂಡು ಬರುವ ದೈಹಿಕ /ಮಾನಸಿಕ ಅನಾರೋಗ್ಯ, ಅದರ ಚಿಕಿತ್ಸೆಗೆ ಕುಟುಂಬದ ವಾತಾವರಣ, ಸಾಮಾಜಿಕ ಧೋರಣೆ ಇವುಗಳಲ್ಲಿ ಸುಧಾರಣೆ ಅತ್ಯಗತ್ಯ. ಇದರ ಲಾಭ ಕೇವಲ ಮಹಿಳೆಗಲ್ಲ, ಬದಲಾಗಿ ಕುಟುಂಬಕ್ಕೂ- ಸಮಾಜಕ್ಕೂ ಎನ್ನುತ್ತಾರೆ. ಗೃಹಿಣಿ ಮತ್ತು ಉದ್ಯೋಗಸ್ಥ ಮಹಿಳೆಯರ ಕುರಿತು ಗಹನ ವಿಚಾರಗಳನ್ನು ಇಲ್ಲಿನ ಲೇಖನಗಳಲ್ಲಿ ನಾವು ಓದಿ ತಿಳಿಯಬಹುದು.
ಭಾಗ-೩
ಮಹಿಳೆಯರ ಮಾನಸಿಕ ಆರೋಗ್ಯದ ಜೊತೆಗೇ ದೈಹಿಕವಾಗಿ ಆಕೆ ಎದುರಿಸುವ ಮುಟ್ಟು- ಬಸಿರು- ಬಾಣಂತನ- ಗರ್ಭಪಾತ- ಋತುಭಂದ ಇವುಗಳ ಬಗ್ಗೆ ವಾಸ್ತವಿಕತೆಗೆ ಹತ್ತಿರವಾದ ವೈಜ್ಞಾನಿಕ ಲೇಖನಗಳಿವೆ.
ಭಾಗ-೪
ಮಾನಸಿಕ ಕಾಯಿಲೆಗಳು, ನಿದ್ರಾ ಹೀನತೆ, ಮಾತ್ರೆಗಳು, ಆತ್ಮ ಹತ್ಯೆಗಳನ್ನು ತಡೆಗಟ್ಟುವಿಕೆ, ಸ್ವಸ್ಥತೆಯನ್ನು ಕಾಪಾಡುವ ಬಗೆ ಹೀಗೆ ಅನೇಕ ವಿಷಯಗಳ ಬರಹವಿದೆ.
ಕೊನೆಯಲ್ಲಿ ಲೇಖಕರು ಹೇಳಿದಂತೆ
” ಮನಸ್ಸಿಗೆ ಬೇಸರವಾದರೆ- ಸಿಟ್ಟು ಬಂದರೆ ತಕ್ಷಣ ಪ್ರತಿಕ್ರಿಯಿಸ ಬೇಡಿ. ಸಂಬಂಧಗಳನ್ನು ಉಳಿಸಿ ಕೊಳ್ಳಲು ಪ್ರಯತ್ನಿಸಿ” ಎನ್ನುವ ಮಾತನ್ನು ಪಾಲಿಸಲು ಪ್ರಯತ್ನಿಸುತ್ತಾ
ಕ್ರಮಿಸೋಣ. ಅಲ್ಲವೇ?….
ಸಂಗ್ರಹಯೋಗ್ಯ ಪುಸ್ತಕ ನೀವೂ ಓದಿ…
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ‘ಅರಣ್ಯಕಾಂಡ’ ಕೃತಿ ಪರಿಚಯ
- ‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ
- ‘ಸುನೀತಗಳು’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
