ಯಾರನ್ನಾದರೂ ಬಹಳ ಸಮಯದ ನಂತರ ಭೇಟಿಮಾಡಿದಾಗ ಅವರ ವೈಯಕ್ತಿಕ ವಿಷಯಗಳು, ಅವರ ಸಂಬಳದ ಬಗ್ಗೆ, ಅವರ ವಯಸ್ಸು, ಅವರ ಹಿಂದಿನ ಜೀವನದ ಬಗ್ಗೆ ನಾವಾಗಿ ನಾವೇ ಕೇಳಬಾರದು ಅವರೇ ಹೇಳಿದರೆ ಕೇಳಿ ಸುಮ್ಮನಾಗಬೇಕು. ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಬಿಟ್ಟಿ ಸಲಹೆಗಳನ್ನು ಕೊಡಬಾರದು. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಜೀವನದಲ್ಲಿ ಕೆಲವು ಅನುಭವದಲ್ಲಿ ಕಂಡ ಸತ್ಯ. ಕೆಲವು ನಿಯಮಗಳನ್ನು ನಾವು ಪಾಲಿಸಬೇಕಾದ್ದು ಬಹು ಮುಖ್ಯ ಸಂಗತಿ. ಕೆಲವರು ವಯಸ್ಸಿನಲ್ಲಿ ದೊಡ್ಡವರಾಗಿದ್ದರೂ ಬುದ್ಧಿ ಇರುವುದಿಲ್ಲ. ಕಿರಿಯರಿಗೆ ಗೊತ್ತಾಗದಿರಬಹುದು. ಕೆಲವು ನಿಯಮಗಳ ಪಾಲಿಸಲು ಹಿರಿಕಿರಿಯರೆಂಬ ಬೇಧವೇನು ಬೇಕಿಲ್ಲ. ನಾವು ಸಾಮಾನ್ಯವಾಗಿ ತಿಳಿದುಕೊಂಡಿರಬೇಕಾದ್ದು ನಮ್ಮ ಘನತೆ ಹಾಗು ಗೌರವ ಹೆಚ್ಚುವಂತಿರಬೇಕು. ನೇರವಾದ ಬೇಸರ ತರಿಸದ ಮಾತುಗಳಾಗಿರಬೇಕು ಒಮ್ಮೊಮ್ಮೆ ರಾಜತಾಂತ್ರಿಕ (diplomatic) ಎಂದು ಏನು ಹೇಳುತ್ತೇವೆ ಅದು ಬಹಳ ಮುಖ್ಯವಾಗಿರುತ್ತದೆ.

ಫೋಟೋ ಕೃಪೆ : google
ಇಂಗ್ಲೀಷಲ್ಲಿ ಒಂದು ಮಾತಿದೆ Don’t poke your dirty nose in my business ಅಂತ ಯಾರೋ ಬಹಳ ತಿಳಿದವರೇ ಈ ರೀತಿ ಹೇಳಿರಬೇಕು. ವಿನಾಕಾರಣ ಒಬ್ಬರ ಬಗ್ಗೆ ಮಾತನಾಡುವುದು, ಅಪಪ್ರಚಾರ ಮಾಡುವುದು, ಇಬ್ಬರ ನಡುವೆ ಸ್ನೇಹ ಒಡೆಯುವುದು ಹೀಗೆ ಒಬ್ಬರ ಜೀವನದಲ್ಲಿ ಬೇಸರ ತರಿಸುವಂತೆ ನಡೆ ನುಡಿ ಇರಬಾರದು. ಹೀಗೆ ಕೆಲವು ವಿಷಯಗಳನ್ನು ಎಷ್ಟು ವಯಸ್ಸಾದರೂ ತಿಳಿದುಕೊಳ್ಳಬೇಕಾದ ಸಂಗತಿಗಳು.
ಯಾರನ್ನಾದರೂ ಬಹಳ ಸಮಯದ ನಂತರ ಭೇಟಿಮಾಡಿದಾಗ ಅವರ ವೈಯಕ್ತಿಕ ವಿಷಯಗಳು, ಅವರ ಸಂಬಳದ ಬಗ್ಗೆ, ಅವರ ವಯಸ್ಸು, ಅವರ ಹಿಂದಿನ ಜೀವನದ ಬಗ್ಗೆ ನಾವಾಗಿ ನಾವೇ ಕೇಳಬಾರದು ಅವರೇ ಹೇಳಿದರೆ ಕೇಳಿ ಸುಮ್ಮನಾಗಬೇಕು. ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಬಿಟ್ಟಿ ಸಲಹೆಗಳನ್ನು ಕೊಡಬಾರದು.
ಯಾರಾದರೂ ನಿಮ್ಮ ಜೊತೆ ಮಾತನಾಡುತಿದ್ದರೆ ಅವರು ನಿಮ್ಮ ಪ್ರತಿಕ್ರಿಯೆಗಾಗಿ ಕಾದು ಕುಳಿತಿದ್ದರೆ, ಅವರಿಗೆ ಬೇಸರ ತರದಂತೆ ಫೋನ್ ಆಗಲಿ ಅತ್ತಿತ್ತ ನೋಡುವುದಾಗಲಿ ಮಾಡಿದಾಗ ಮಾತನಾಡುತ್ತಿರುವ ವ್ಯಕ್ತಿಗೆ ಅವಮಾನ ಮಾಡಿದಂತೆ ಹಾಗು ಅವರ ಮಾತು ನಿಮಗೆ ಹಿಡಿಸುತ್ತಿಲ್ಲ ಎನ್ನುವ ವರ್ತನೆ ಖಂಡಿತ ಬೇಸರ ತರಿಸುತ್ತದೆ. ಅದು ನಿಮ್ಮ ವರ್ತನೆ ಅವರನ್ನು ಉದಾಸೀನ ಮಾಡುವ ರೀತಿ ಇದ್ದರೂ ಕೊನೆಗೆ ನೀವೇ ಅವಮಾನ ಹೊಂದುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಯಾರೊಬ್ಬರನ್ನು ದೈಹಿಕವಾಗಿ ಆಡಿಕೊಳ್ಳಬಾರದು. ಅವರು ದಪ್ಪ ಇರಲಿ, ಸಣ್ಣ ಇರಲಿ, ಕಪ್ಪಗಿರಲಿ, ಬೆಳ್ಳಗಿರಲಿ ಅವರನ್ನು ಹೀಯಾಳಿಸಿ ನಗುವುದು ಥರವಲ್ಲ. ಸ್ನೇಹಿತರು ಹಣ ಕಾಸಿನ ವಿಷಯದಲ್ಲಾಗಲಿ ಅಥವಾ ಅವರ ಮನೆಯ ಪರಿಸ್ಥಿತಿಯ ಬಗ್ಗೆಯಾಗಲಿ ಅವರನ್ನು ಕುರಿತು ಆಡಿಕೊಳ್ಳಬಾರದು.

ಯಾರ ಮನೆಗಾದರೂ ಹೋಗಿ ಬಂದಾಗ ಅವರು ನೀಡಿದ ಆತಿಥ್ಯದ ಬಗ್ಗೆಯಾಗಲಿ, ಊಟದ ರುಚಿಯ ಬಗ್ಗೆಯಾಗಲಿ ಖಂಡಿತವಾಗಿಯೂ ಮಾತನಾಡಬಾರದು. ಬೇರೆಯವರ ಮನೆಯ ಊಟವೇ ನಮ್ಮ ಜೀವನ ನಡೆಸಬಲ್ಲ ಆಹಾರವಲ್ಲ. ಅವರು ಒಂದು ವಿಶ್ವಾಸದಿಂದ ಅತಿಥಿ ಸತ್ಕಾರ ಮಾಡಿದ್ದು ಆ ಅನ್ನದ ಋಣ ಎಲ್ಲರ ಮೇಲಿರುತ್ತದೆ.
ಸ್ನೇಹಿತರಾಗಲಿ, ಬಂಧುಗಳಾಗಲಿ ನಿಮಗೆ ಪರಿಚಯ ಇರುವ ವೈದ್ಯರ ಬಗ್ಗೆ ಕೇಳಿದಾಗ ಅವರಿಗೆ ಏಕೆ? ಯಾರಿಗೆ? ಎಂದು ಮರು ಪ್ರಶ್ನೆ ಮಾಡದೆ, ನಿಮಗೆ ಗೊತ್ತಿರುವ ವೈದ್ಯರ ಬಗ್ಗೆ ಮಾಹಿತಿ ಕೊಟ್ಟರೆ ಸಾಕು. ಅಥವಾ ಅವರಾಗಿಯೇ ಹೇಳಿದರೆ ಇಂಥವರಿದ್ದಾರೆ ಹೋಗಿ ಅವರನ್ನು ಹೋಗಿ ಕಾಣಿ ಎಂದು ಹೇಳಬೇಕು.
ಇನ್ನು ಕೆಲವು ನಿಜಕ್ಕೂ ಬೇಸರ ತರಿಸುವ ವಿಷಯಗಳೆಂದರೆ ಇನ್ನು ಏಕೆ ಮದುವೆ ಆಗಿಲ್ಲ, ಇನ್ನೂ ಮನೆ ಕಟ್ಟಿಲ್ಲವಾ ಎಂದು ಕೇಳುವವರಿದ್ದಾರೆ ಅವರಿಗೇನಾಗಬೇಕು ಹೇಳಿ ಕೇಳಿದವರು ಮದುವೆ ಮಾಡಿಸುತ್ತಾರ, ಮನೆ ಕಟ್ಟಿಸಿ ಕೊಡುತ್ತಾರ.
ಇನ್ನು ಮಕ್ಕಳಾಗದ ದಂಪತಿಗಳಿದ್ದರೆ ಯಾಕೆ ಮಗು ಆಗಲಿಲ್ಲ ಒಳ್ಳೆ ಕಡೆ ತೋರಿಸಲಿಲ್ಲವಾ, ನಮಗೆ ಗೊತ್ತಿರುವ ಒಳ್ಳೆ ಡಾಕ್ಟರ್ ಗೊತ್ತಿದಾರೆ ಬನ್ನಿ ಪರಿಚಯ ಮಾಡಿಕೊಡುತ್ತೇನೆ ನಿಮಗೆ ಒಳ್ಳೆ ಟ್ರೀಟ್ಮೆಂಟ್ ಕೊಡುತ್ತಾರೆ ….ಹೀಗೆ ಹಲವಾರು ಬೇಡದ ಸಲಹೆಗಳು. ಅವರ ಪರಿಸ್ಥಿತಿ ಏನೋ ಅದನ್ನು ಅರಿತು ಸುಮ್ಮನಿದ್ದರೆ ಸಾಕು, ಸುಮ್ಮನಿರುವ ಜಾಯಮಾನವಲ್ಲದವರು.
ಇನ್ನೊಂದು ಬಹು ಮುಖ್ಯವಾದ ವಿಷಯ ಅಂದರೆ ನಾವು ಯಾವುದಾದರೂ ಫೋಟೋ ತೋರಿಸಲು ನಮ್ಮ ಮೊಬೈಲ್ ಫೋನ್ ಬೇರೆಯವರಿಗೆ ಕೊಟ್ಟಾಗ ಅದನ್ನು ನೋಡಿ ಹಿಂತಿರುಗಿಸುವ ಬದಲು ಮುಂದೆ ಅಥವಾ ಹಿಂದೆ ಸ್ಕ್ರಾಲ್ ಮಾಡಿಕೊಂಡು ಫೋಟೋಗಳನ್ನು ನೋಡುತ್ತಾರೆ ಇದು ನಿಜಕ್ಕೂ ಶೋಭೆ ತರುವ ವಿಷಯವಲ್ಲ. ಅವರೇ ಖುದ್ದಾಗಿ ಮುಂದೂ ಫೋಟೋಗಳಿವೆ ನೋಡಿ ಎಂದು ಹೇಳುವವರೆಗೂ ನಾವು ನೋಡಬಾರದು.
ಇದೆಲ್ಲಾ ಸಣ್ಣ ವಿಷಯಗಳಿರಬಹುದು ಆದರೆ ಇಂಥಹ ವಿಷಯಗಳೆ ಬಹಳ ನೋವುಂಟು ಮಾಡುತ್ತದೆ ಹಾಗು ಪಾಠ ಕಲಿಸುತ್ತದೆ. ಇದೆಲ್ಲ ಅರಿತು ನಡೆದಾಗ ಮಾತ್ರ ನಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಹಾಗು ಗೌರವ ತಾನಾಗಿ ಮೂಡುತ್ತದೆ.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
