BDD ಎಂದರೆ Body Dysmorphic Disorder. ಇದೊಂದು ಮಾನಸಿಕ ಸಮಸ್ಯೆಯಾಗಿದ್ದು, ಈ ಸಮಸ್ಯೆಯಿಂದ ಬಳಲುತ್ತಿರುವವರು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ ಮತ್ತು ಆತ್ಮಹತ್ಯೆಯ ಆಲೋಚನೆಗಳು ಬರುವ ಸಾಧ್ಯತೆ ಇರುತ್ತದೆ, ಇದಕ್ಕೆ ಪರಿಹಾರ ಏನು ಎಂಬುದನ್ನು ಆಪ್ತಸಮಾಲೋಚಕಿ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಸಮನ್ವಿತಾ… ಇದು ಮನಸುಗಳ ಸಂವಹನ
ಬಾಡಿ ಡಿಸ್ಮೋರ್ಫಿಕ್ ಡಿಸೋರ್ಡರ್ (BDD)
Body Dysmorphic Disorder (BDD) ಅಥವಾ ದೇಹದೃಷ್ಟಿ ವೈಕಲ್ಯ ಒಂದು ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಇದರಲ್ಲಿ ವ್ಯಕ್ತಿಗೆ ತನ್ನ ದೇಹದ ರೂಪ ಅಥವಾ ಬದ್ಧತೆಯ ಬಗ್ಗೆ ಅಮಿತವಾದ ಆತಂಕ ಇರುತ್ತದೆ. ಇತರರಿಗೆ ಅದು ಗಂಭೀರವಾಗಿ ಕಾಣಿಸದಂತಹ ಅಂಶವಾಗಿರಬಹುದು ಆದರೆ ಅವರ ಮಾನಸಿಕ ಸ್ಥಿತಿ ಬಹಳ ಗಂಭೀರವಾಗಿರುತ್ತದೆ.

ಮುಖ್ಯ ಲಕ್ಷಣಗಳು:
ದೈಹಿಕ ಅಂಶದ ಬಗ್ಗೆ ಅಮಿತವಾದ ಚಿಂತೆ: ಉದಾ: ಮೂಗು, ಚರ್ಮ, ಕೂದಲು, ತೂಕ, ಇತ್ಯಾದಿ. ಇದರ ಬಗ್ಗೆ ಅತೀ ಯೋಚಿಸುವುದು.
ಅದೇ ಅಂಶವನ್ನು ಮತ್ತೆ ಮತ್ತೆ ನೋಡುವುದು ಅಥವಾ ಮರೆ ಮಾಚುವುದು:
ಕನ್ನಡಿಯಲ್ಲಿ ನಿರಂತರವಾಗಿ ತಮಗೆ ತೋರುವ ರೂಪವನ್ನು ನೋಡುತ್ತಿರುವುದು ಅಥವಾ ಅದನ್ನು ಮುಚ್ಚಲು (makeup, ಉಡುಪು ಅಥವಾ ಶಸ್ತ್ರಚಿಕಿತ್ಸೆ ಪ್ರಯತ್ನಿಸುತ್ತಾರೆ). ಹೆಚ್ಚಾದ ಸಮಯವು ಅದರ ಬಗ್ಗೆ ಚಿಂತೆ ಮಾಡುವುದರಲ್ಲಿ ಕಳೆಯುವುದು. ಸಾಮಾಜಿಕ ಬದುಕಿಗೆ ಅಡ್ಡಿಯಾಗುವುದು: ವ್ಯಕ್ತಿಗಳು ಹೊರಗೆ ಹೋಗುವುದು, ಫೋಟೋ ತೆಗೆಯುವುದು ಅಥವಾ ಸಂಬಂಧಗಳನ್ನು ಬೆಳೆಸುವುದು ತಳ್ಳಿಹಾಕಬಹುದು. ಆತ್ಮವಿಶ್ವಾಸದ ಕೊರತೆ ಮತ್ತು ದುಃಖಭಾವನೆ ಕಾಡುತ್ತದೆ.
ಹೆಚ್ಚಾಗಿ ಯಾವ ಭಾಗಗಳು ಲಕ್ಷ್ಯವಾಗುತ್ತವೆ?
ಮೂಗು, ಮುಖದ ಚರ್ಮ, ಕೂದಲು (ಉದುರುವಿಕೆ, ಬಿಳಿ ಕೂದಲಿನ ಬಗ್ಗೆ ಗಮನ) ತೂಕ / ತೂಕದ ಕಳವಳ,ಗಾತ್ರ (ಮೇಲು ಅಂಗ/ಕೆಳ ಅಂಗ)
ಇದಕ್ಕೆ ಕಾರಣಗಳು:
ಮಕ್ಕಳಲ್ಲಿ ಅಥವಾ ಬಾಲ್ಯದಲ್ಲಿ ಮಾನಸಿಕ ತುಳಿತ ಅಥವಾ ಅವಮಾನಸಿದ ಘಟನೆ. ಸಾಮಾಜಿಕ ಹಾಗು ಮಾಧ್ಯಮದ ಒತ್ತಡ. ಪೋಷಕರ ಅಥವಾ ಇತರರ ನಿರಂತರ ಟೀಕೆಗಳು
ದೈಹಿಕ ಅಂಶಗಳ ಬಗ್ಗೆ ಆಂತರಿಕ ಅಭಾವ.
ಇದಕ್ಕೆ ಚಿಕಿತ್ಸೆ:
ಸೈಕೋಥೆರಪಿ (CBT – Cognitive Behavioral Therapy): ಅತಿಯಾದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನಿಯಂತ್ರಿಸಲು ಸಹಾಯಮಾಡುತ್ತದೆ.
ಔಷಧೋಪಚಾರ: ಕೆಲವೊಮ್ಮೆ ಔಷಧಿಗಳ ಮೂಲಕ ಪರಿಹರಿಸಲು ಕೆಲವು ಥೆರಪಿಗಳನ್ನು ಉಪಯೋಗಿಸುತ್ತಾರೆ.
- ಮನೆಮಟ್ಟದ ಬೆಂಬಲ: ಕುಟುಂಬ ಹಾಗೂ ಸ್ನೇಹಿತರಿಂದ ಸಹಾನುಭೂತಿ ಮತ್ತು ಪ್ರೋತ್ಸಾಹ.
- ಸಾಮಾಜಿಕ ಮಾಧ್ಯಮದ ಬಳಕೆ ನಿಯಂತ್ರಣ.
ಗಮನಿಸಬೇಕಾದ ಅಂಶ:
BDD ಕೂಡಲೇ ಗುರುತಿಸಿ ಚಿಕಿತ್ಸೆ ನೀಡಿದರೆ, ಇದು ಉತ್ತಮವಾಗಬಹುದು. ಆದರೆ ನಿರ್ಲಕ್ಷೆ ಮಾಡಿದರೆ ಆತ್ಮಹತ್ಯೆಯ ಆಲೋಚನೆಗಳು ಅಥವಾ ಮಾನಸಿಕ ಏರು ಪೇರು, ಜನರೊಂದಿಗೆ ಬೆರಿಯದೆ ತೊಂದರೆಗಳು ಬರುವ ಸಾಧ್ಯತೆ ಇದೆ. ನೀವು ಅಥವಾ ನಿಮಗೆ ಪರಿಚಿತರಾದ ಯಾರಿಗಾದರೂ ಇಂತಹ ಲಕ್ಷಣಗಳು ಕಂಡುಬರುತ್ತಿದ್ದರೆ, ತಕ್ಷಣ ವೈದ್ಯಕೀಯ ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಬಹುಮುಖ್ಯ.

Body Dysmorphic Disorder (BDD) ಇರುವವರಿಗೆ ಆಪ್ತಸಾಮಾಲೋಚನೆ (supportive counseling) ತುಂಬಾ ಪರಿಣಾಮಕಾರಿಯಾಗಬಹುದು ವಿಶೇಷವಾಗಿ ಅವರು ವೈದ್ಯಕೀಯ ಚಿಕಿತ್ಸೆ (ಜೀವನ ಶೈಲಿ ಬದಲಾವಣೆ, ಔಷಧೋಪಚಾರ, CBT) ಜೊತೆಗೆ ನಿರಂತರ ಭಾವನಾತ್ಮಕ ಬೆಂಬಲವೂ ಬೇಕಾಗಿರುತ್ತದೆ.
ಇಲ್ಲಿ BDD ಇರುವವರಿಗೆ ಆಪ್ತರು (ತಾಯಿ-ತಂದೆ, ಸ್ನೇಹಿತರು, ಸಂಗಾತಿಗಳು) ನೀಡಬಹುದಾದ ಮಾರ್ಗದರ್ಶನದ ಕೆಲವು ಹಂತಗಳು ಇವೆ:
ಆಪ್ತಸಾಮಾಲೋಚನೆಗಾಗಿ ಮಾರ್ಗದರ್ಶಿ ಸೂತ್ರಗಳು:
“ನೀನು ಹೀಗೆ ಭಾವಿಸುವುದೆಂದರೆ ಅದು ನಿಜವಾಗಿಯೂ ಕಠಿಣವಾಗಿರಬಹುದು” ಎಂಬ ಭಾವನೆಯಿಂದ ಮಾತನಾಡಬೇಕು. ಅವರ ಭಾವನೆಗಳನ್ನು ತಳ್ಳಿಹಾಕಬಾರದು (ಉದಾಹರಣೆಗೆ “ಅದು ನಿನ್ನ ಕಲ್ಪನೆ ಮಾತ್ರ” ಎಂಬುದನ್ನು ಹೇಳುವುದು ತಪ್ಪು). ಬದಲಿಗೆ ಧೈರ್ಯ ನೀಡಬೇಕು, ಖಂಡಿಸಬಾರದು, “ನೀನು ಒಳ್ಳೆಯ ಸಾರ್ಥಕ ಜೀವನದಿಂದ ಬದುಕಬಹುದು – ಈ ಸಮಸ್ಯೆಯೇ ನಿನ್ನನ್ನು ನಿರ್ಧರಿಸಲ್ಲ.” ಎಂದು ಮನೋಬಲ ತುಂಬಬೇಕು.
“ನೀನು ಇಷ್ಟು ಸಮಯ ಕನ್ನಡಿಯಲ್ಲಿ ನೋಡುತ್ತಿದ್ದೀಯಾ ಇದರಿಂದ ಏನು ನಿನ್ನ ಮನಸ್ಸನ್ನು ಕಾಡುತ್ತಿದೆ?” ಎಂದು ನೇರವಾಗಿ ಕೇಳಬಹುದು. ವೈದ್ಯಕೀಯ ಸಹಾಯಕ್ಕೆ ಪ್ರೋತ್ಸಾಹಿಸಬೇಕು.
“ಇದಕ್ಕೆ ಚಿಕಿತ್ಸೆ ಇದೆ. ನಾವು ಒಟ್ಟಿಗೆ ಒಂದು ಮನಃಪರಿಶೋಧಕರನ್ನು ನೋಡೋಣವೇ?” ಎನ್ನುವಂತೆ ಸಲಹೆ ನೀಡಬೇಕು. ಯಾರಾದರೂ ಒಬ್ಬರು ನಿಮ್ಮ ಜೊತೆಗೆ ಇದ್ದರೆ ವೈದ್ಯರ ಬಳಿಗೆ ಹೋಗಲು ಧೈರ್ಯ ಇರುತ್ತದೆ ಎಂದು ಹೇಳಬಹುದು.
ತುಂಬು ಸಹಾನುಭೂತಿ ಮತ್ತು ಸ್ಥಿರತೆ ತೋರಿಸಬೇಕು:
BDD ಇರುವವರು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ, ಆತ್ಮಹತ್ಯೆಯ ಆಲೋಚನೆಗಳೂ ಬರುವ ಸಾಧ್ಯತೆ ಇದೆ. ಅದನ್ನು ತಪ್ಪಿಸಲು ಧ್ಯಾನ, ನಿತ್ಯ ವ್ಯಾಯಾಮ, ಯೋಗಭ್ಯಾಸ, ಯಾವುದಾರು ಅವರಿಗಿಷ್ಟವಾದ ಹವ್ಯಾಸದಲ್ಲಿ ತೊಡಗಬಹುದಾಗಿ ಉತ್ತೇಜಿಸಬಹುದು.
ಪ್ರತಿದಿನವೂ ನಿರಂತರ ಪ್ರೋತ್ಸಾಹ ನೀಡಬೇಕು – “ನೀನು ಇದರಿಂದ ಒಟ್ಟಾಗಿ ಹೊರಬರುವೆ.” ಎಂಬ ಸಕಾರಾತ್ಮಕ ನುಡಿಗಳು ಅವರಿಗೆ ಧೈರ್ಯ ಬರುತ್ತದೆ. ಆತ್ಮ-ಶ್ರದ್ಧೆ ಬೆಳೆಸಲು ಸಹಾಯ ಮಾಡಬೇಕು. ಅವರ ಭಾಹ್ಯ ಸೌಂದರ್ಯದ ಬದಲು, ಅವರ ವ್ಯಕ್ತಿತ್ವ, ಪ್ರತಿಭೆ ಮತ್ತು ಮೌಲ್ಯಗಳ ಬಗ್ಗೆ ಗಮನ ಹರಿಸಲು ಹೇಳಬೇಕು.
ಕೊನೆಯದಾಗಿ ಹೇಳುವುದಾದರೆ ಶಸ್ತ್ರಚಿಕಿತ್ಸೆ ಅಥವಾ ಪ್ಲಾಸ್ಟಿಕ್ ಸರ್ಜರಿ ಮಾಡುವ ನಿರ್ಧಾರಗಳನ್ನು ಮಾಡಬಾರದು ಹಾಗು ಪ್ರಕೃತಿಗೆ ವಿರುದ್ಧವಾಗಿ ಹೋಗುವ ಯಾವುದೇ ವಿಧಾನಗಳನ್ನು ಅನುಸರಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಬೇಕು ಆದರೆ ತೀರ್ಮಾನ ಅವರಿಗೇ ಬಿಡಬೇಕು. ಯಾವುದೇ ಆತ್ಮಹಾನಿ ಸೂಚನೆಗಳು ಇದ್ದರೆ ತಕ್ಷಣವೇ ವೈದ್ಯಕೀಯ ತಜ್ಞರಿಗೆ ಅಥವಾ ಸ್ಥಳೀಯ ಮಾನಸಿಕ ಆರೋಗ್ಯ ಸಹಾಯ ಪಡೆದು ತಮ್ಮ ಜೀವನವನ್ನು ಸರಳ ಹಾಗು ಸುಂದವಾಗಿ ಇಟ್ಟುಕೊಳ್ಳಬಹುದು.
- ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೯)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಮಾನಸ….ಇದು ಮನಸಿನ ಮಾತು (ಭಾಗ-೧೮)
- ಮಾನಸ….ಇದು ಮನಸಿನ ಮಾತು (ಭಾಗ-೧೯)
- ಮಾನಸ….ಇದು ಮನಸಿನ ಮಾತು (ಭಾಗ-೨೦)
- ಮಾನಸ….ಇದು ಮನಸಿನ ಮಾತು (ಭಾಗ-೨೧)
- ಮಾನಸ….ಇದು ಮನಸಿನ ಮಾತು (ಭಾಗ-೨೨)
- ಮಾನಸ….ಇದು ಮನಸಿನ ಮಾತು (ಭಾಗ-೨೫)
- ಮಾನಸ….ಇದು ಮನಸಿನ ಮಾತು (ಭಾಗ-೨೬)
- ಮಾನಸ….ಇದು ಮನಸಿನ ಮಾತು (ಭಾಗ-೨೭)
- ಮಾನಸ….ಇದು ಮನಸಿನ ಮಾತು (ಭಾಗ-೨೮)
- ಮಾನಸ….ಇದು ಮನಸಿನ ಮಾತು (ಭಾಗ-೨೯)
- ಮಾನಸ….ಇದು ಮನಸಿನ ಮಾತು (ಭಾಗ-೩೦)
- ಮಾನಸ….ಇದು ಮನಸಿನ ಮಾತು (ಭಾಗ-೩೧)
- ಮಾನಸ….ಇದು ಮನಸಿನ ಮಾತು (ಭಾಗ-೩೨)
- ಮಾನಸ….ಇದು ಮನಸಿನ ಮಾತು (ಭಾಗ-೩೩)
- ಮಾನಸ….ಇದು ಮನಸಿನ ಮಾತು (ಭಾಗ-೩೪)
- ಮಾನಸ….ಇದು ಮನಸಿನ ಮಾತು (ಭಾಗ-೩೫)
- ಮಾನಸ….ಇದು ಮನಸಿನ ಮಾತು (ಭಾಗ-೩೬)
- ಮಾನಸ….ಇದು ಮನಸಿನ ಮಾತು (ಭಾಗ-೩೭)
- ಮಾನಸ….ಇದು ಮನಸಿನ ಮಾತು (ಭಾಗ-೩೮)
- ಮಾನಸ….ಇದು ಮನಸಿನ ಮಾತು (ಭಾಗ-೩೯)
- ಮಾನಸ….ಇದು ಮನಸಿನ ಮಾತು (ಭಾಗ-೪೦)
- ಮಾನಸ….ಇದು ಮನಸಿನ ಮಾತು (ಭಾಗ-೪೧)
- ಮಾನಸ….ಇದು ಮನಸಿನ ಮಾತು (ಭಾಗ-೪೨)
- ಮಾನಸ….ಇದು ಮನಸಿನ ಮಾತು (ಭಾಗ-೪೩)
- ಮಾನಸ….ಇದು ಮನಸಿನ ಮಾತು (ಭಾಗ-೪೪)
- ಮಾನಸ….ಇದು ಮನಸಿನ ಮಾತು (ಭಾಗ-೪೫)
- ಮಾನಸ….ಇದು ಮನಸಿನ ಮಾತು (ಭಾಗ-೪೬)
- ಮಾನಸ….ಇದು ಮನಸಿನ ಮಾತು (ಭಾಗ-೪೭)
- ಮಾನಸ….ಇದು ಮನಸಿನ ಮಾತು (ಭಾಗ-೪೮)
- ಮಾನಸ….ಇದು ಮನಸಿನ ಮಾತು (ಭಾಗ-೪೯)
- ಮಾನಸ….ಇದು ಮನಸಿನ ಮಾತು (ಭಾಗ-೫೦)
- ಮಾನಸ….ಇದು ಮನಸಿನ ಮಾತು (ಭಾಗ-೫೧)
- ಮಾನಸ….ಇದು ಮನಸಿನ ಮಾತು (ಭಾಗ-೫೨)
- ಮಾನಸ….ಇದು ಮನಸಿನ ಮಾತು (ಭಾಗ-೫೩)
- ಮಾನಸ….ಇದು ಮನಸಿನ ಮಾತು (ಭಾಗ-೫೪)
- ಮಾನಸ….ಇದು ಮನಸಿನ ಮಾತು (ಭಾಗ-೫೫)
- ಮಾನಸ….ಇದು ಮನಸಿನ ಮಾತು (ಭಾಗ-೫೬)
- ಮಾನಸ….ಇದು ಮನಸಿನ ಮಾತು (ಭಾಗ-೫೭)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
