ಕನ್ನಡ ಪುಸ್ತಕ ಪ್ರಧಿಕಾರ ಹೊರತಂದಿರುವ ಲೇಖಕರಾದ ಸುರೇಶ್ ಕುಲಕರ್ಣಿ ಅವರ ಪಕ್ಷಿ ಸಂಕುಲ ಕುರಿತು ರೇಷ್ಮಾ ಗುಳೇಡಗುಡ್ಡಕರ್ ಅವರು ಬರೆದಿರುವ ಪುಟ್ಟ ಪರಿಚಯ. ತಪ್ಪದೆ ಓದಿ…
ಕೃತಿ : ಪಕ್ಷಿ ಸಂಕುಲ
ಲೇಖಕರು: ಸುರೇಶ್ ಕುಲಕರ್ಣಿ
ಬೆಲೆ : 150/
ಪ್ರಕಾಶನ : ಕನ್ನಡ ಪುಸ್ತಕ ಪ್ರಧಿಕಾರ
ಮನೆಯಲ್ಲಿ ಆಕಸ್ಮಿಕವಾಗಿ ಮೇಲಿನ ಕಪಾಟು ತೆಗೆದು ಕೆಲ ವಸ್ತುಗಳ ಹುಡುಕಾಟ ಮಾಡುತ್ತಿರುವಾಗ ಕಂಡ ಕೃತಿ ಇದು. ಕನ್ನಡ ಪುಸ್ತಕ ಪ್ರಧಿಕಾರ ಪ್ರಕಟಣೆ ಮಾಡಿರುವ ಈ ಕೃತಿ ಮಕ್ಕಳಿಗಾಗಿ ರಚಿಸಿರುವ ಅಪೂರ್ವ ಹೊತ್ತಿಗೆ.
ಲೇಖಕರು ಶ್ರೀ ಸುರೇಶ ಕುಲಕರ್ಣಿ ಅವರು. ರೇಖಾ ಚಿತ್ರಗಳಿಂದ ಸರಳವಾಗಿ ಪಕ್ಷಿಗಳ ಬಗ್ಗೆ ವಿವರಣೆ ಮಾಡಲಾಗಿದೆ ಹಾಗೂ ಓದುಗರಿಗೆ ಸುಲಭವಾಗಲು ಪಕ್ಷಿಗಳ ಹೆಸರನ್ನು ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿಯೂ ಹೆಸರಿಸಿದ್ದಾರೆ. ಪಕ್ಷಿಗಳನ್ನು 3 ಭಾಗಗಳಾಗಿ ವಿಂಗಡಿಸಿ ಅವುಗಳ ವಾಸ ಸ್ಥಳ, ಆಹಾರ ಗೂಡಿನ ರಚನೆ ಎಲ್ಲವನ್ನು ವಿವರಿಸಲಾಗಿದೆ. ಮಕ್ಕಳಿಗೆ ಒಂದು ಉತ್ತಮ ಕೃತಿಯಾಗಿದೆ. ಅವರ ಜ್ಞಾನ ಬುತ್ತಿಯನ್ನು ಹೆಚ್ಚಿಸುತ್ತದೆ. ಈಗ ಈ ಕೃತಿ ಲಭ್ಯ ಇದೆಯೋ, ಇಲ್ಲವೋ ತಿಳಿದಿಲ್ಲ.
ಬಹು ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಮಾಹಿತಿಯನ್ನು ಒಳಗೊಂಡಿರುವ ಕೃತಿ ಇದು ಮಕ್ಕಳಿಗೆ ಹಾಗೂ ಪಕ್ಷಿ ಪ್ರಿಯರಿಗೆ ಉಡುಗೊರೆ ನೀಡಬಹುದಾದ ವಿಷೇಶ ಕೃತಿ ಹೌದು.
ಇಂತಹ ವಸ್ತುನಿಷ್ಠ ವಿಷಯ ಕುರಿತ ವೈವಿಧ್ಯಮಯ ಕೃತಿಗಳ ಪ್ರಕಟಣೆ ಹೆಚ್ಚಾದರೆ, ನಮ್ಮ ಜೀವಸಂಕುಲ ಮತ್ತು ಪರಿಸರದ ಬಗ್ಗೆ ತಿಳಿಯಲು ಅವುಗಳ ಉಳಿವಿಗೆ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ.
ಕೃತಿ ರಚನೆಕಾರರಿಗೆ ಹಾಗೂ ಪುಸ್ತಕ ಪ್ರಕಟಿಸಿದ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಧನ್ಯವಾದಗಳು.
- ರೇಷ್ಮಾ ಗುಳೇಡಗುಡ್ಡಕರ್