ಪೂಚಂತೇ ಗ್ರೇಟ್ ಯಾಕಂತೇ? – ರೇಶ್ಮಾ ಗುಳೇದಗುಡ್ಡಾಕರ್

ಲೇಖಕ ನಾಗೇಶ ಹೆಗಡೆ ಅವರ ‘ಪೂಚಂತೇ ಗ್ರೇಟ್ ಯಾಕಂತೇ?’ ಕೃತಿ ಕುರಿತು ಲೇಖಕಿ ರೇಶ್ಮಾ ಗುಳೇದಗುಡ್ಡಾಕರ್ ಅವರು ಪರಿಚಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಕೃತಿ: ಪೂಚಂತೇ ಗ್ರೇಟ್ ಯಾಕಂತೇ?
ಲೇಖಕರು: ನಾಗೇಶ ಹೆಗಡೆ
ಪ್ರಕಾಶಕರು: ಭೂಮಿ ಬುಕ್ಸ್
ಬೆಲೆ: 150

ನಾಗೇಶ ಹೆಗಡೆ ಅವರು ಕನ್ನಡಿಗರಿಗೆ ಚಿರಪರಿಚತರು. ಅವರ ಅನೇಕ ವಿಜ್ಞಾನ ಬರಹಗಳು ಪುಸ್ತಕಗಳಾಗಿ, ಲೇಖನಗಳನ್ನಾಗಿ ಓದುಗರಿಗೆ ಪರಿಚಿತವಾಗಿವೆ ಹಾಗೂ ತಮ್ಮ ವಿಜ್ಞಾನ ಬರಹಗಳಲ್ಲಿ ನಿಸರ್ಗದ ಬಗ್ಗೆ ಕೂತೂಹಲ ಮತ್ತು ಅದರ ಕಾಳಜಿಯನ್ನು ಹೊಂದಿರುವ ಲೇಖನಗಳನ್ನು ಓದುಗರಿಗೆ ನೀಡಿರುತ್ತಾರೆ.

ಇವರ ಈ” ಪೂಚಂತೇ ಗ್ರೇಟ್ ಯಾಕಂತೇ? ” ಎಂಬ ಕೃತಿ ತೇಜಸ್ವಿ ಅವರ ನೆನಪುಗಳೊಂದಿಗೆ ಹಲವು ವೈಜ್ಞಾನಿಕ ಕೌತುಕಗಳನ್ನು ವಿವರಿಸಿದೆ. ಇಲ್ಲಿ ಪ್ರಕಟವಾಗಿರುವ ಲೇಖನಗಳು ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ ವಿಶಾಲವಾಗಿ ಅವುಗಳ ವಿವರಣೆ ಈ ಕೃತಿಯಲ್ಲಿ ತಿಳಿಯಬಹುದಾಗಿದೆ. ಒಟ್ಟು ಹದಿಮೂರು ಅಧ್ಯಯಗಳನ್ನು ಹೊಂದಿರುವ ಈ ಕೃತಿ ನಿಸರ್ಗದ ಹಲವು ವಿಶಿಷ್ಟತೆಗಳನ್ನು ವೈವಿಧ್ಯಮಯವಾಗಿ ಹೇಳುತ್ತದೆ.

ತೇಜಸ್ವಿ ಅವರ ನೆನಪುಗಳೊಂದಿಗೆ ಆರಂಭವಾಗುವ ಕೃತಿಯ ಓದು ಯುವ ಜನತೆಯಲ್ಲಿ ತೇಜಸ್ವಿ ಹುಟ್ಟುಹಾಕಿದ ಪರಿಸರ ಜಾಗೃತಿ ಇದರಿಂದ ಸಂಚಲನಗೊಂಡ ಯುವಜನತೆ ಹವ್ಯಾಸಿ ಚಾರಣಿಗರು, ಫೋಟೋಗ್ರಫಿಯ ಹವ್ಯಾಸಿಗಳಾಗಿ ಕಾಡಿನತ್ತ ಹೆಜ್ಜೆ ಹಾಕುವಂತೆ ಮಾಡಿ ,ನಿಸರ್ಗದ ಅನ್ವೇಷಣೆ ಗೆ ಇಂಬು ಹಚ್ಚಿ ಅವರನ್ನು ಜೀವಂತವಾಗಿಸಿವೆ ಎಂಬುದು ಅಚ್ಚರಿಯಾಗುತ್ತದೆ. ತದನಂತರದ ಓದು ಧುಮ್ಮಿಕ್ಕುವುದು ನಾಗೇಶ ಹೆಗಡೆ ಅವರ ವೈಜ್ಞಾನಿಕ ವಿಶ್ಲೇಷಣೆಯ ಬರಹಗಳತ್ತ ಅನೊಹ್ಯ ಪ್ರಕೃತಿಯ ಕೌತುಕಗಳನ್ನು ಎಳೆ – ಎಳೆಯಾಗಿ ಅವರು ವಿವರಿಸುತ್ತಾ ಹೋಗುತ್ತಾರೆ. ಶಾಲಾ ಪದವಿ ದಿನಗಳಲ್ಲಿ ಇವರ ಬರಹಕ್ಕಾಗಿ ಕಾದು ಕುಳಿತ ದಿನಗಳು ಇದ್ದವು …!

ಮಳೆ ಒಂದೆ ಸಾಕಲ್ಲ ಗುಡುಗು, ಮಿಂಚು ಸಹ ಅವಶ್ಯಕ ಗಿಡ ಮರಗಳಿಗೆ ಎಂಬುದನ್ನು ಸರಳವಾಗಿ ಅರ್ಥೈಸುವುದು ಅಂತೇ ಇಲ್ಲಿ ಕೀಟಲೋಕ,ಆರ್ಕಿಡ್ ಗಳ ವಿಶ್ವ ,ಪರಾಗಸ್ಪರ್ಶ ದ ವಿಸ್ಮಯ, ಜೇಡಲೋಕದ ಕುತೂಹಲ, ಪಕ್ಷಿಗಳ ಅಳಿವು – ಉಳಿವು ಗಳ ಚರ್ಚೆ ಈ ಕೃತಿಯಲ್ಲಿ ಕಾಣಸಿಗುತ್ತದೆ.

ಜೀವ ಸಂಕುಲದಲ್ಲಿ ಪ್ರತಿಯೊಂದು ಜೀವಿ ,ಕ್ರಿಮಿಗಳಿಗೂ ಅದರದ್ದೆ ಆದ ಸ್ಥಾನವಿದೆ. ಆ ಜೀವಿ ನಾಶವಾದರೆ, ಆ ಕಾರ್ಯವನ್ನು ಮಾಡಲು ಮಾನವ ಶಕ್ತನಲ್ಲ .ಆದರೆ ಮಾನವ ದುರಾಸೆ , ನಿಸರ್ಗದ ಬಗ್ಗೆ ಸೂಕ್ತ ತಿಳುವಳಿಕೆ ಇಲ್ಲದೆ ಪ್ರಕೃತಿ ಹೇಗೆ ವಿನಾಶವಾಗುತ್ತದ್ದೆ ಎಂಬುದನ್ನು ಕಣ್ಮರೆಯಾಗುತ್ತಿರುವ ಪಕ್ಷಿ ಸಂಕುಲ ,ನಾವು ಬೆಳೆಗೆ ಹಾಕಿದ ಕೀಟ ನಾಶಕ, ಗೊಬ್ಬರಗಳು ಹಂತ ಹಂತವಾಗಿ ಪಕ್ಷಿಗಳ ಸಮೂಹವೇ ವಿರಳವಾಗುವಂತೆ ಮಾಡಿದ್ದೇವೆ.

ಒಂದು ಆಹಾರ ಸರಪಣಿಯಲ್ಲಿ ವ್ಯತ್ಯಾಸವಾದರೆ ಅದು ಹೇಗೆ ಒಂದು ಜೀವ ಸಂಕುಲಕ್ಕೆ ಮಾರಕವಾಗುತ್ತದೆ ಎಂಬುದನ್ನು ಆಕಾಶ ಚಕ್ರವರ್ತಿಗಳ ಅವಸಾನದಲ್ಲಿ
ಹೇಳಲಾಗಿದೆ. ಸಾರಿಗೆ, ದೂರವಾಣಿ ಇವೆಲ್ಲಾ ನಮ್ಮ ಸಂಪರ್ಕ ವ್ಯವಸ್ಥೆಯ ಮಾರ್ಗಗಳು, ಸಂವಹನ ಎಂಬುದು ಮಾನವರಿಗೆ ಮಾದ್ಯಮ ಇಲ್ಲದೆ ಸಾಗುವದಿಲ್ಲ , ಕಚ್ಚಾ ರಸ್ತೆ, ಗುಂಡಿ , ಇವೇಲ್ಲಾ ಭಾರತಕ್ಕೆ ಸ್ವತಂತ್ರ್ಯ ಬಂದು 75 ವರ್ಷ ಗಳಾದರೂ ಮಹಾನಗರಗಳೇ ಉತ್ತಮ ರಸ್ತೆಗಳನ್ನು ಹೊಂದು ಕಷ್ಟವಾಗಿದೆ ಇನ್ನು ಗ್ರಾಮೀಣ ಭಾಗ ಹೇಳುವದೇ ಬೇಡ . ಆದರೆ ಒಂದು ಕ್ಷಣದಲ್ಲಿ ಮಾಹಿತಿ ರವಾನೆಯಾಗಿ ಪರ ,ವಿರೋಧ ಚರ್ಚೆಗಳು ಬುಗಿಲೇಳುತ್ತವೆ ..! ಇದು ನಮ್ಮ ಅಂತರ್ಜಾಲದ ಸಾಧನೆ. ಒಟ್ಟಾರೆ ಸಂವಹನಕ್ಕೆ ಮಾಧ್ಯಮದ ಅಗತ್ತವಿದೆ ನಮಗೆ.

ಆದರೆ ಯಾವ ಇಮೇಲ್, ವಾಟ್ಸಪ್ ಇಲ್ಲದೇಯೋ ಹನ್ನೆಡು ವರ್ಷಕ್ಕೆ ಒಮ್ಮೆ ಅರಳಿನಿಂತರೂ ತಮ್ಮ ಸಂಭ್ರಮಕ್ಕೆ ಜೇನು ,ಪಕ್ಷಿ ಗಳನ್ನು ಸದ್ದಿಲ್ಲದೆ ಸೇರಿಸುವ ” ನೀಲ ಕುರಿಂಜಿ ” ಹೂವಿನ ಜಗತ್ತು ಒಂದು ವಿಸ್ಮಯ ! ಮನಕುಲಕ್ಕೆ ಒಂದು ಸವಾಲು, ಪ್ರಕೃತಿಯಲ್ಲಿ ಒಂದು ವಿಸ್ಮಯ ನೀಡಿದ ನೀಲಕುರಿಂಜಿ ಸಾಹಿತ್ಯ ಲೋಕದಲ್ಲೂ ತನ್ನ ಇರುವಿಕೆಯನ್ನು ಅನುರಣಿಸಿದೆ … ಹಲವಾರು ಹೆಸರುಗಳಿಂದ ಉಲ್ಲೆಖಗೊಂಡು ತಮಿಳುನಾಡಿನ ಪ್ರಾಚೀನ ಸಾಹಿತ್ಯದಲ್ಲಿ ವಿರಾಜಮಾನವಾಗಿದೆ. ಆದರೆ ನಮ್ಮ ಕನ್ನಡ ದಲ್ಲಿ ಏಕೆ ಇಲ್ಲ ಎಂದು ಲೇಖಕರು ಬೇಸರ ವ್ಯಕ್ತಪಡಿಸುತ್ತಾರೆ.

ಈ ಕೃತಿಯಲ್ಲಿ ಪ್ರಕೃತಿಯ ವಿಸ್ಮಯವನ್ನು ಮಾತ್ರ ದಾಖಲಿಸಿಲ್ಲ ,ಅಳಿದು ಹೋಗುವ ಸಂತತಿಯನ್ನು ಉಳಿಸಿಕೊಂಡ ಮಾನನವನ ಇಚ್ಛಾ ಶಕ್ತಿಯನ್ನು ತಿಳಿಸುತ್ತದೆ .ಅದೇ ಜಗತ್ತಿನ ಮೊತ್ತ ಮೊದಲ “ಸಂರಕ್ಷಿತ ಉದ್ಯಾನ ” ಯೇಲ್ಲೊಸ್ಟೋನ್ ಪಾರ್ಕ್ ( ಅಮೇರಿಕಾ) ಅಧುನಿಕ ಹೆಸರಲ್ಲಿ ಬೆಳೆಯುತ್ತಾ ಅಮೇರಿಕಾ ಖಂಡ ಕೋಟಿಗಟ್ಟಲೇ ಸಂಖ್ಯೆ ” ಪ್ಯಾಸಂಜರ್ ಪೀಜನ್ ” ಸಮಾವೇಶ ಮಾಡಿಕೊಂಡು ಅವುಗಳ ಉಳಿವಿಕೆಗಾಗಿ ಪರಿತಪ್ಪಿಸಿ ಪ್ರಾಣಿ, ಪಕ್ಷಿಗಳು ಇಲ್ಲದೆ ನಿಸರ್ಗದ ಸಮತೋಲನ ಹೇಗೆ ವೈಪರೀತ್ಯವಾಗುತ್ತದೆ ಎಂಬದನ್ನು ಮನದಟ್ಟು ಮಾಡಿಕೊಂಡು ನಿರ್ಮಿಸಿದ ಈ ಪಾರ್ಕ್ ಇಗ ಅದನ್ನೆ ಪಠ್ಯದ ಮಾದರಿಯಾಗಿ ಗುರುತಿಸಿಕೊಂಡಿದೆ ಎಂಬುದು ನಮ್ಮಲ್ಲೂ ಯಾಕೆ ಅಗುತ್ತಿಲ್ಲ ಎಂಬ ಬೇಸರ ಓದುಗರಿಗಾಗುತ್ತದೆ ….

ತೇಜಸ್ವಿಯ ನೆನಪಲ್ಲಿ ಉಂಟಾದ ಪರಿಸರ ಜಾಗೃತಿ ಕಾರ್ಯ ಕೃತಿಯಲ್ಲಿ ಅರಳಿದರೆ ಮಾತ್ರ ಅಲ್ಲ ಕಾರ್ಯದಲ್ಲೂ ಸದ್ದಾಗ ಬೇಕಿದೆ. ಏಕೆಂದರೆ ತೇಜಸ್ವಿ ಒಬ್ಬ ಲೇಖಕ,ಮಾತ್ರವಾಗಿ ಇಲ್ಲ, ಪರಿಸರದ ಜೊತೆಗಾರ ಸಹ ಹೌದು , ಕಂಡದ್ದನ್ನು ಅಳುಕದೆ ಹೇಳಿ ಪ್ರಕೃತಿಯ ಅನೂಹ್ಯ ಜಗದ ಅರ್ತನಾದವ ಕನ್ನಡದಲ್ಲಿ ಬರೆದ ಮೊದಲ ಲೇಖಕ , ಅಂತಯೇ ಅವರಿಗೆ ಮಾಹಿತಿ ತಂತ್ರಜ್ಞಾನ ಕುರಿತು ಹಲವು ಕನಸುಗಳು ಇದ್ದವು. ಇಂದು ಅವೆಲ್ಲವೂ ಸಾಕಾರಗೊಂಡಿದೆ.  ಅವರ ನಿಸರ್ಗದ ಕೂಗು ಮಾತ್ರ ಕೇಳಿದರು, ಕೇಳದಂತಾಗಿ ಪರಿಸರ ಕುರಿತ ಜಾಗೃತಿ , ಹೋರಾಟಗಳು ನೇಪಥ್ಯಕ್ಕೆ ಸರಿದಿರುವುದು ಬಹು ವಿಷಾದನೀಯ. ಪರಿಸರ ಜಾಗೃತಿ ಕುರಿತ ಹಾಡು, ಹೇಳಿಕೆಗಳು, ಬರಹಗಳು ಸದ್ದು ಮಾಡುತ್ತವೆ ಹೊರತು ನಿಸರ್ಗ ಸ್ವಚ್ಛವಾಗುತ್ತಿಲ್ಲ .
ಕಾರಂತರ ಸಮಯದಲ್ಲಿ ಪ್ರಕೃತಿಯೊಂದಿಗೆ ಮಾನವ ಸೆಣಸಾಡಬೇಕಿತ್ತು, ಆದರೆ ಕಾಲ ಬದಲಾಯಿತು. ಈಗ ಪ್ರಕೃತಿಯ ಕಾಪಾಡುವ ಕೆಲಸ ನಮ್ಮದಾಗಿದೆ.

ಈ ಕೆಲಸಕ್ಕೆ ಎಲ್ಲರ ಇಚ್ಛಾಶಕ್ತಿ ಅಗತ್ಯವಿದೆ ಹಾಗೂ ಜರೂರು ಇದೆ. ತೇಜಸ್ವಿಯ ಅವರ ನೆನಪುಗಳೊಂದಿಗೆ ಕೃತಿ ಆರಂಭವಾಗಿ ಹಲವಾರು ಚಿಂತನೆಗಳನ್ನು ಓದುಗರಿಗೆ ನೀಡುತ್ತದೆ .


  • ‌‌‌‌‌‌‌‌ರೇಶ್ಮಾ ಗುಳೇದಗುಡ್ಡಾಕರ್ – ಯುವ ಕವಿಯತ್ರಿ, ಲೇಖಕಿ
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW