ಗಾಣದ ಎಣ್ಣೆ ಬಳಸುವ ಸರಿಯಾದ ಮಾರ್ಗ



ದಿನನಿತ್ಯ ನಾವು ಬಳಸುವ ಎಣ್ಣೆ ಹೇಗಿರಬೇಕು ? ಯಾವುದು ಉತ್ತಮ? ಮತ್ತು ಗಾಣದ ಎಣ್ಣೆಯನ್ನು ಸಂಸ್ಕರಿಸಿ ಬಳಸಲು ಕೆಲವು ವಿಧಾನಗಳಿವೆ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಾರೆ ಆರೋಗ್ಯ ತಜ್ಞ ರಾಜೇಂದ್ರ ಸ್ವಾಮಿ ಅವರು. ಮುಂದೆ ಓದಿ…

ಇತ್ತೀಚಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲೂ ಸಹ ಆರೋಗ್ಯದ ಹೆಸರಿನಲ್ಲಿ ಗಾಣದ ಎಣ್ಣೆ ಪ್ರಚಲಿತವಾಗುತ್ತಿದೆ. ಬಳಸುವ ವಿಧಾನ ತಿಳಿಯದಿದ್ದರೆ ಗಾಣದ ಎಣ್ಣೆ ನಮ್ಮ ಆರೋಗ್ಯಕ್ಕೆ ಕುತ್ತು ತರುತ್ತದೆ.

ಮಾರುಕಟ್ಟೆಯಲ್ಲಿ ಸಿಗುತ್ತಿರುವ ಲಿಕ್ವಿಡ್ ಪ್ಯಾರಾ ಫಿಲೀನ್ ಬಳಸಿರುವ ರಿಫೈನ್ಡ್ ಎಣ್ಣೆಗಳಿಗೆ ಹೋಲಿಸಿದರೆ ಹಾಗೂ ಮಿನರಲ್ ಎಣ್ಣೆಗಳ ಬಳಕೆ ಮಾಡುತ್ತಿರುವ ಎಣ್ಣೆಗಳಿಗೆ ಹೋಲಿಸಿದರೆ… ಗಾಣದ ಎಣ್ಣೆ ಬಳಸಲು ಉತ್ತಮ. ಗಾಣದ ಎಣ್ಣೆಯನ್ನು ಸಂಸ್ಕರಿಸಿ ಬಳಸಲು ಕೆಲವು ವಿಧಾನಗಳನ್ನು ತಿಳಿಸುತ್ತೇನೆ ಅವುಗಳನ್ನು ಅನುಸರಿಸಿ ಬಳಸಿ ಆರೋಗ್ಯದಿಂದಿರಿ.

ಫೋಟೋ ಕೃಪೆ : prajavani

Cold pressed method ಬಳಸಿ ತೆಗೆದ ಗಾಣದ ಎಣ್ಣೆಯು ದಪ್ಪವಾಗಿದ್ದು ಅದರಲ್ಲಿ ಕರಗದ ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಾಗಿರುತ್ತದೆ ಆದಕಾರಣ ಅದನ್ನು ಮನೆಯಲ್ಲಿ ಮೊದಲು ತೆಗೆಯಬೇಕು.

ಗಾಣದ ಎಣ್ಣೆಯನ್ನು ಸಂಸ್ಕರಿಸುವ ವಿಧಾನ :

  • ಗಾಣದ ಎಣ್ಣೆಯನ್ನು ಬಳಸುವವರು ಕನಿಷ್ಠ ಮೂರರಿಂದ ಐದು ಲೀಟರ್ ಅದನ್ನು ಒಮ್ಮೆಲೆ ಖರೀದಿಸಬೇಕು ಅದನ್ನು ಸ್ವಲ್ಪ ಅಗಲವಾದ ಪಾತ್ರೆಯಲ್ಲಿ ಹಾಕಿ ಮಂದಗತಿ ಬೆಂಕಿಯಲ್ಲಿ ನಿಮ್ಮ stove ಮೇಲೆ ಇಡಿ.
  • ಐದಾರು ನಿಮಿಷದಲ್ಲಿ ಎಣ್ಣೆಯ ಮೇಲೆ ಒಳಗಡೆಯಿಂದ ನಿಧಾನವಾಗಿ ಗುಳ್ಳೆಗಳು ಬರುವುದು ಕಾಣುತ್ತದೆ. ಮತ್ತು ಪಾತ್ರೆಯ ಮೇಲಿಂದ ನಿಧಾನವಾಗಿ ಹೊಗೆ ಬರಲು ಶುರುವಾದ ನಂತರ stove ಅನ್ನು ಆಫ್ ಮಾಡಿ.
  • ನಾಲ್ಕೈದು ಗಂಟೆಗಳವರೆಗೆ ಆ ಪಾತ್ರೆಯನ್ನು ಅಲ್ಲಾಡಿಸಬೇಡಿ ಎಣ್ಣೆಯಲ್ಲಿ ಉಳಿದಿರುವ ದೇಹಕ್ಕೆ ಹಾನಿ ಉಂಟುಮಾಡುವ ಪದಾರ್ಥವು ಪಾತ್ರೆಯ ತಳಭಾಗದಲ್ಲಿ ಶೇಖರಣೆ ಯಾಗಿರುತ್ತದೆ ಕನ್ನಡದಲ್ಲಿ ಇದನ್ನು ಚರಟ ಎನ್ನುತ್ತೇವೆ.
  • ನಂತರ ಮೇಲ್ಬಾಗದ ಎಣ್ಣೆಯನ್ನು ಸೋಸಿ ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ ಈ ಎಣ್ಣೆ ಬಳಸಲು ಯೋಗ್ಯವಾಗಿರುತ್ತದೆ.

ಯಾವುದೇ ರಾಸಾಯನಿಕಗಳನ್ನು ಸೇರಿಸದ ಕಾರಣ ಎಣ್ಣೆಯ best before ಅವಧಿಯು ಆರು ವಾರಗಳಿಂದ 8 ವಾರಗಳವರೆಗೆ ಮಾತ್ರ ಇರುತ್ತದೆ ನಂತರ ಬಳಸುವ ಎಣ್ಣೆ ಆರೋಗ್ಯಕ್ಕೆ ಹಾನಿ ಮಾಡುತ್ತದೆ.

ಫೋಟೋ ಕೃಪೆ : naidunia

ಇದು ನೈಸರ್ಗಿಕವಾಗಿ ತಯಾರಿಸಿದ ಎಣ್ಣೆಯಾದ್ದರಿಂದ ಅಡುಗೆ ಮಾಡುವಾಗ ಕಡಿಮೆ ಬೆಂಕಿಯನ್ನು ಮಾಡಿ ಉಪಯೋಗಿಸಬೇಕು. ಬೆಂಕಿಯ ಉರಿ ಹೆಚ್ಚಾದರೆ ಎಣ್ಣೆಯಲ್ಲಿರುವ ಅಂಶವು ಹಾಳಾಗಿ ಹೋಗುತ್ತದೆ.

ಇಷ್ಟಾದ ನಂತರವೂ ಎಣ್ಣೆಯನ್ನು ಕಾಪಾಡಿಕೊಳ್ಳಲು ಒಂದು ಲೀಟರ್ ಎಣ್ಣೆಗೆ 5gram ಸೈಂಧವ ಲವಣವನ್ನು ಸೇರಿಸಿ, ಇದು ಎಣ್ಣೆ ಹಾಳಾಗದಂತೆ preservatives ರೀತಿಯಲ್ಲಿ ತಡೆಯುತ್ತದೆ. ಕರಿಯಲು ಬಳಸಿದ ಎಣ್ಣೆಯು ಮತ್ತೆ ಆಹಾರವಾಗಿ ಮತ್ತೊಮ್ಮೆ ಕರಿಯಲು ಬಳಸಬಾರದು. ಕರಿದ ಎಣ್ಣೆಯನ್ನು ಅಡುಗೆಗೂ ಬಳಸಬಾರದು ಇದು ಆರೋಗ್ಯಕ್ಕೆ ಮಾರಕವಾಗುತ್ತದೆ.

  • ರಾಜೇಂದ್ರ ಸ್ವಾಮಿ  ಅವರನ್ನು ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ : 97389 33566, ದಿ ರಾಯಲ್ ಅಕಾಡೆಮಿ- 7676660113)

  • ರಾಜೇಂದ್ರ ಸ್ವಾಮಿ (ಕೇರಳಿ ಆಯುರ್ವೇದ ಪದ್ಧತಿಯ ಆರೋಗ್ಯ ತಜ್ಞರು, ದಿ ರಾಯಲ್ ಅಕಾಡೆಮಿ ಎಂಬ ಸಂಸ್ಥೆಯ ಮೂಲಕ ಹಲವಾರು ಜೀವನ ಶಿಕ್ಷಣಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದಾರೆ), ದಾವಣಗೆರೆ.

3 2 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW