‘ಒಲವು ಮಿಡಿಯಿತು ಹೃದಯ ಹಾರಿತು ಅವಳನು ನೋಡುತ…ಬೇಡಿದನು ಪ್ರೀತಿಗೋಸ್ಕರ ಅವಳ ಪಾದವ ಹಿಡಿಯುತ’…ಯುವ ಕವಿ ವಿಕಾಸ್. ಫ್. ಮಡಿವಾಳರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಓದಿ…
ತೂಗು ದೀಪವು ತೇಲಿ ಬರುತಿದೆ ಮೂಡಣದಲಿ.
ಮಲಗಿಹಳು ರಾಧೆಯು ಮೇಘ ಶ್ಯಾಮನ ನೆನಪಲಿ.
ಒಲವ ಧಾರೆಯೆ ಕನಸು ಕಾಣುತ ಕಣ್ಣನು ಮುಚ್ಚಿಹಳು.
ಕೃಷ್ಣನೆದೆಯಲಿ ಮಲಗಿದಂತೆ ರಾಧೆಯು ನಾಚಿಹಳು
ಅವಳ ತಲೆಯನು ಸವರುತ ಕೂತನು ಯುವರಾಜನು.
ಬಿದ್ದ ಹೃದಯವ ಎತ್ತಿ ಹಿಡಿದು ಲಾಲಿಯ ಹಾಡಿದನು.
ಬೀಸಿ ಬರುವ ಗಾಳಿಯು ಅವಳ ಉಸಿರನು ತಾಕಲು.
ಗಾಳಿಯೆ ಸುಮ್ಮನಿರು, ಅವಳೆಂದು ನನ್ನವಳು
ಒಲವು ಮಿಡಿಯಿತು ಹೃದಯ ಹಾರಿತು ಅವಳನು ನೋಡುತ.
ಬೇಡಿದನು ಪ್ರೀತಿಗೋಸ್ಕರ ಅವಳ ಪಾದವ ಹಿಡಿಯುತ.
ಮುಗುಳು ನಗೆಯ ಅಂಚಿನಲ್ಲಿ ಇವನನಾಕೆ ಸೆಳೆದಳು.
ಹೂವು ಹಾಸಿಗೆಯಲ್ಲಿ ಕನಸು ಕಾಣುತ, ರಾಧೆಯು ಮಲಗಿಹಳು
- ವಿಕಾಸ್. ಫ್. ಮಡಿವಾಳರ – ಯುವ ಲೇಖಕ