ಜಗವೆಲ್ಲ ಹಸಿವು ಮುಕ್ತವಾಗಲು, ರೈತ ದೊರೆಯ ಇರುವಿಕೆ ಬಹಳ ಅನಿವಾರ್ಯ..! ಅಶ್ವಾಕ್ ಶಾಹ್ ಕನ್ನಡಿಗ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಅಗೋ ಅಲ್ಲಿ ನೋಡಿ ಒಮ್ಮೆ
ರೈತ ದೊರೆಯು ಬರುತ್ತಿರುವುದು..!
ಯಾವ ದೊರೆಗೇನು ಕಡಿಮೆ ಇಲ್ಲದ ಸರದಾರ..!
ಅವನ ರಥದಲ್ಲಿ ತುಂಬಿದೆ ಭತ್ತದಗುಳು
ಚಿನ್ನದ ರಾಶಿಯಂತೆಯೇ ಗೋಚರಿಸುತ್ತಿವುದು..!!
ಭತ್ತ ಕಣಜದ ರಾಶಿ
ಚಿನ್ನದಂತೆ ಕಂಗೊಳಿಸುವುದು..!
ಒಮ್ಮೆ ಅವನ ಸಾಮ್ರಾಜ್ಯಕ್ಕೆ ಬಂದು ನೋಡಿ..!
ವಿಜಯನಗರದ ಚಿನ್ನದ ಸಂತೆ ಇದೆ ಇನ್ನೂ ಜೀವಂತ
ರೈತನ ಭತ್ತ ಕಣದಲ್ಲೊಮ್ಮೆ ಇಣುಕಿ ನೋಡಿ..!
ಚಿನ್ನದ ಅಗುಳನ್ನು ಒಡೆದು ಬೆಳ್ಳಿ ತೆಗೆಯುವರು
ಹಸಿದಿರುವ ಹೊಟ್ಟೆಗಳಿಗೆ ಅನ್ನವ ಉಣಿಸುವರು..!
ರೈತಾಪಿ ದೊರೆಗಳು ಅಸಾಮಾನ್ಯ ಕರುಣಿಗರು ನೋಡಿ..!
ದೇಶಕ್ಕೆ ಬೆನ್ನೆಲುಬಾಗಿ ಹೊರೆಯ ಹೊರುವವರು
ಅವನ ನೆಮ್ಮದಿಗೆ ಪ್ರಾರ್ಥನೆ ದಯವಿಟ್ಟು ಸಲ್ಲಿಸಿಬಿಡಿ..!
ಜಗವೆಲ್ಲ ಹಸಿವು ಮುಕ್ತವಾಗಲು
ರೈತ ದೊರೆಯ ಇರುವಿಕೆ ಬಹಳ ಅನಿವಾರ್ಯ..!
ಎಲ್ಲರೂ ಹಸಿವ ಮರೆತು ನೆಮ್ಮದಿಯನ್ನು ಕಾಣುವಾಗ
ಅವನು ದಣಿದು ಹಸಿದು ಮಲಗಿರುವನು ಅದೇ ದುರಂತ..!
ಅವನ ಬೆಂಬಲಕ್ಕೆ ನಿಲ್ಲಬೇಕಿದೆ ರೈತದೊರೆಗೆ ಕಾಣಿಕೆ ಸಲ್ಲಿಸಿಬಿಡಿ..!
- ಅಶ್ವಾಕ್ ಶಾಹ್ ಕನ್ನಡಿಗ
