ಸರಿಗಮಪ ಫೈನಲ್ ನಲ್ಲಿ : ಋತ್ವಿಕ್ ರಾಜನ್

ಸಂಗೀತ ಎನ್ನುವುದು ಎಲ್ಲರಿಗೂ ಒಲಿಯದ ವಿದ್ಯೆ. ಸಂಗೀತ ಶಾಲೆಯಲ್ಲಿ ಎಷ್ಟೋ ಕಾಲ ಕಳೆದರೂ ಸಂಗೀತ ಅಷ್ಟು ಸುಲಭವಾಗಿ ಬರುವುದಿಲ್ಲ. ಸಂಗೀತ ಶಾಲೆಗಳು ಸಂಗೀತದ ಜ್ಞಾನವನ್ನು ಕೊಡಬಹುದೇ ವಿನಃಹ ಕಲಿತ ಮಾತ್ರಕ್ಕೆ ಕಲಿತವರೆಲ್ಲ ದೊಡ್ಡ ಗಾಯಕರಾಗುತ್ತಾರೆ ಎನ್ನುವುದು ಸುಳ್ಳು. ಚಂದನ್ ಶೆಟ್ಟಿ, ನವೀನ ಸಜ್ಜು ಅವರೆಲ್ಲ ಸಂಗೀತ ಹಿನ್ನೆಲೆಯಿಂದ ಬಂದವರಲ್ಲ. ಅವರದೇ ಶೈಲಿಯಲ್ಲಿ ಎಲ್ಲರ ಮನ ಗೆದ್ದವರು ಇವರು.

bf2fb3_3d4fd1c0f7c94d27967eff33eb377458~mv2.jpg

ಕ್ರೆಡಿಟ್ – ಝೀ ಕನ್ನಡ

ಸಂಗೀತ ಎನ್ನುವುದು ದೈವದತ್ತವಾದ ವಿದ್ಯೆ. ಸರಸ್ವತಿಯ ಕೃಪಾಕಟಾಕ್ಷ ಇದ್ದವರಿಗೆ ಮಾತ್ರ ಸಂಗೀತ ಒಲಿಯಲು ಸಾಧ್ಯ. ಅಂಥವರಲ್ಲಿ ಋತ್ವಿಕ್ ರಾಜನ್ ಕೂಡ ಒಬ್ಬರು. ಋತ್ವಿಕ್ ಆರಂಭದಲ್ಲಿ ಯಾವ ಸಂಗೀತ ಶಾಲೆಗೂ ಹೋಗಲಿಲ್ಲ. ಅವನ ಮಾತು ಸಂಗೀತವಾದಾಗ ಮನೆಯವರು ಪ್ರೋತ್ಸಾಹಿಸಿದರು. ಬಾಲ್ಯದಲ್ಲಿ ಋತ್ವಿಕ್ ಅವರಿಗೆ ಸಂಗೀತವನ್ನು ಕಲಿಸಲು ಬಂದ ಗುರುಗಳ ತಪ್ಪುಗಳನ್ನು, ಋತ್ವಿಕ್ ಅವರೇ ಸರಿ ಮಾಡುತ್ತಿದ್ದರು. ಇವರು ಸರಸ್ವತಿಯ ಪುತ್ರರೇ ಆದ್ದರಿಂದ ಬಾಲ್ಯದಲ್ಲಿ ತಮಗೆ ತಾವೇ ಗುರುಗಳಾಗಿ, ಹಾಡುಗಳನ್ನು ಕೇಳುತ್ತಲೇ ಸಂಗೀತವನ್ನು ಕಲಿತವರು ಇವರು. ಸರಸ್ವತಿ ದೇವಿ ಅವರ ನಾಲಿಗೆಯಲ್ಲಿ ಶಾಶ್ವತವಾಗಿ ನೆಲೆಸಿ ಬಿಟ್ಟಿದ್ದಾಳೆ ಎನ್ನುವುದಕ್ಕೆ ಅವರ ಹಾಡುಗಳನ್ನು ಕೇಳಿದವರಿಗೆ ಗೊತ್ತಾಗುತ್ತದೆ. ಋತ್ವಿಕ್ ಗೆ ಗಂಡಿನ ಧ್ವನಿಯಷ್ಟೇ ವರದಾನವಾಗಿಲ್ಲ. ಅವರು ಹೆಣ್ಣಿನ ಧ್ವನಿಯಲ್ಲೂಅದ್ಭುತವಾಗಿ ಹಾಡಬಲ್ಲರು.

ಝೀ ಕನ್ನಡ ಸರಿಗಮಪ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಋತ್ವಿಕ್ ಇತರೆ ಸ್ವರ್ಧಿಗಳಿಗೆ ದುಸ್ವಪ್ನವಾಗಿ ನಿಂತಿದ್ದಾರೆ. ಅವರು ಹಾಡಲು ಶುರು ಮಾಡಿಕೊಂಡರೆ ಎದುರಿಗಿರುವವರ ಮನಸ್ಸನ್ನು ಕ್ಷಣಾರ್ಧದಲ್ಲಿ ಗೆದ್ದು ಬಿಡುತ್ತಾರೆ. ಇಷ್ಟು ದಿನ ಸರಿಗಮಪ ಮಹಾ ಗುರುಗಳಾದ ಹಂಸಲೇಖ ಅವರಿಗೆ ಅವರ ಹಾಡಿನ ಮೋಡಿ ಮಾಡಿದ್ದಲ್ಲದೆ, ಅವರ ಕಣ್ಣಲ್ಲಿ ಮೆಚ್ಚುಗೆಯ ಕಣ್ಣೀರು ಹರಿಸುವಂತೆ ಮಾಡಿದ್ದರು. ಸರಿಗಮಪದಲ್ಲಿ ಎಲ್ಲ ಥರದ ಹಾಡುಗಳನ್ನು ಹಾಡಬಲ್ಲ ಮೋಡಿಗಾರ. ಅದರಲ್ಲಿಯೂ ಹಂಸಲೇಖ ಅವರ ರಚನೆಯ ಹೆಣ್ಣಿನ ವರ್ಣನೆಯ ಕುರಿತಾದ ಹೆಣ್ಣು ಮೊದಲ,ಗಂಡು ಮೊದಲ… ಹಾಡನ್ನು ಒಂದಲ್ಲ, ಎರಡಲ್ಲ ನೂರು ಬಾರಿ ಆ ಹಾಡನ್ನು ಕೇಳಿ ಅದನ್ನು ವೇದಿಕೆಯ ಮೇಲೆ ಅತ್ಯದ್ಭುತವಾಗಿ ಹಾಡಿ ತೋರಿಸಿದರು. ಅವರ ಆ ಹಾಡಿಗೆ ಎರಡು ಭಾರಿ ಗೋಲ್ಡನ್ ಬಜ್ ರ್ ಮಹಾ ಗುರುಗಳಿಂದ ಸಿಕ್ಕಿತು. ಸರಿಗಮಪದಲ್ಲಿ ಹೆಚ್ಚು ಗೋಲ್ಡನ್ ಬಝರ್ ಸಿಕ್ಕಂತಹ ಸ್ಪರ್ಧಿ ಎಂದರೆ ಋತ್ವಿಕ್. ಶೋನ ಮುಖ್ಯ ತೀರ್ಪುಗಾರರಾದ ಅರ್ಜುನ ಜನ್ಯ, ವಿಜಯ ಪ್ರಕಾಶ್ ಮತ್ತು ರಾಜೇಶ್ ಕೃಷ್ಣ ಅವರಿಂದಲೂ ಕೂಡ ಸಾಕಷ್ಟು ಶಿಳ್ಳೆ, ಚಪ್ಪಾಳೆಗಳು ಸಿಕ್ಕಿವೆ. ಋತ್ವಿಕ್ ಅವರಲ್ಲಿ ಎಸ್.ಪಿ. ಬಾಲಸುಬ್ರಮಣ್ಯಂ ಅಂಶ ಇದೆ ಎಂದು ಎಷ್ಟೋ ಭಾರಿ ಕೇಳುಗರಿಗೂ ಅನ್ನಿಸಿದೆ. ಅದರಂತೆ ಅರ್ಜುನ್ ಜನ್ಯ ಅವರು ಕೂಡ ಈ ಮಾತನ್ನು ಹೇಳಿದ್ದಾರೆ. ಅಲ್ಲಿನ ಜ್ಯೂರಿ ಸದಸ್ಯರಿಂದ ವಾರೇ ವಾಹ್ಹ… ಎನ್ನಿಸಿಕೊಳ್ಳುತ್ತ ಬಂದಿದ್ದಾರೆ. ಪ್ರೇಕ್ಷಕರಿಂದ ವನ್ಸ್ ಮೋರ್…ಎನ್ನುವಷ್ಟು ತಮ್ಮ ಹಾಡಿನ ಬೇಡಿಕೆಯನ್ನು ಇಟ್ಟುಕೊಂಡಿದ್ದಾರೆ.

bf2fb3_f52298cd411f4cfeb10e08d8f6fc94c3~mv2.jpg

ಋತ್ವಿಕ್ ಅವರು ಅಭಿಮಾನಿಗಳನ್ನು ಎಷ್ಟರ ಮಟ್ಟಿಗೆ ಗಳಿಸಿದ್ದಾರೆ ಎಂದರೆ ಅವರು ಎಲ್ಲೇ ನಡೆದು ಕೊಂಡು ಹೋಗಲಿ ಅಭಿಮಾನಿಗಳು ಇವರನ್ನು ಮುತ್ತಿ ಕೊಳ್ಳುತ್ತಾರೆ. ಇತ್ತೀಚಿಗೆ ಗಾಂಧಿ ಬಜಾರನಲ್ಲಿ ಈ ಗಾಯಕ ನಡೆದು ಕೊಂಡು ಹೋಗುವಾಗ ಆಭರಣದ ಅಂಗಡಿಯವ ಇವರನ್ನು ತಮ್ಮ ಅಂಗಡಿಯೊಳಗೆ ಕರೆದುಕೊಂಡು ಹೋಗಿದ್ದಲ್ಲದೆ, ಋತ್ವಿಕ್ ಅವರ ಮೆಚ್ಚಿನ ದೇವರು ಸಾಯಿ ಬಾಬಾ ಅವರ ಬಂಗಾರ ಲೇಪಿತ ಪ್ರತಿಕೃತಿಯನ್ನು ಉಡುಗೊರೆಯಾಗಿ ಅವರಿಗೆ ನೀಡಿದರು. ಋತ್ವಿಕ್ ನ ಜೊತೆಗಿನ ಸೆಲ್ಫಿಗಾಗಿ ಅಭಿಮಾನಿಗಳು ಮುಗಿ ಬೀಳುತ್ತಾರೆ. ಇದು ಸಂಗೀತಕ್ಕೆ ಇರುವ ಶಕ್ತಿ. ಆ ಸಂಗೀತದ ಸೆಲೆಯೇ ಋತ್ವಿಕ್ ರಾಜನ್.

ಅಭಿಮಾನಿಗಳು ಮನಸ್ಸು ಮಾಡಿದರೆ ಒಬ್ಬ ಗಾಯಕನನ್ನು ಬೆಳೆಸಬಲ್ಲರು ಅಥವಾ ಅಳಿಸಬಲ್ಲರು. ಋತ್ವಿಕ್ ಗೆ ಅಭಿಮಾನಿಗಳು ಸಾಕಷ್ಟು ಬೆಳೆಸಿದ್ದಾರೆ, ಪ್ರೀತಿ ಕೊಟ್ಟಿದ್ದಾರೆ. ಅವರ ಪ್ರೀತಿಗೆ ಋತ್ವಿಕ್ ಯಾವಾಗಲು ಆಭಾರಿಯಾಗಿದ್ದಾರೆ.

ಈಗ ಸರಿಗಮಪ ರಿಯಾಲಿಟಿ ಶೋ ಅಂತಿಮ ಘಟಕ್ಕೆ ಬಂದು ನಿಂತಿದೆ. ಈ ಅಂತಿಮ ಸ್ಪರ್ಧೆಯ ಸೆಣಸಾಟದಲ್ಲಿ ಋತ್ವಿಕ್ ಕೂಡ ಒಬ್ಬರಾಗಿದ್ದಾರೆ. ಸಂಗೀತಕ್ಕೆ ಯಾವ ನೆಲೆ, ಯಾವ ಕುಲ ಬೇಕಿಲ್ಲ, ಹಾಡು ಕೇಳಲು ಕಿವಿ ಇದ್ದರೇ ಸಾಲದು. ಹಾಡು ಹೃದಯಕ್ಕೆ ಬಿಟ್ಟ ಬಾಣದಂತೆ ಲಗ್ಗೆ ಹಾಕಬೇಕು. ಅಂದರೆ ಮಾತ್ರ ಹಾಡಿದವ ಹಾಡಿಗೆ ಬೆಲೆ ಸಿಗುವುದು. ಆ ಕೆಲಸವನ್ನು ಋತ್ವಿಕ್ ನಿಷ್ಠೆಯಿಂದ ಮಾಡಿದ್ದಾರೆ. ಮನಸ್ಸು ಬಿಚ್ಚಿ ಹಾಡಿದ್ದಾರೆ. ಪ್ರೇಕ್ಷಕರು ಖುಷಿ ಪಟ್ಟುಕೇಳಿದ್ದಾರೆ, ಕುಣಿದಿದ್ದಾರೆ ಮತ್ತು ಅವರ ಖುಷಿಯಲ್ಲಿ ಭಾಗಿಯಾಗಿದ್ದಾರೆ.

ಋತ್ವಿಕ್ ಗೆ ಸರಿಗಮಪ ಗೆಲ್ಲಲು ಇರುವುದು ಒಂದೇ ಒಂದು ಹೆಜ್ಜೆ. ಆ ಹೆಜ್ಜೆಗೆ ನೀವೆಲ್ಲರೂ ಜೊತೆಯಾಗಬೇಕು. ದಯವಿಟ್ಟು ಋತ್ವಿಕ್ ಗೆ ಓಟ್ ಮಾಡಿ. ಸರಿಗಮಪ ಈ ಸರಣಿಯ ವಿಜೇತರನ್ನಾಗಿ ಮಾಡಿ. ನೀವು ಮಾಡಬೇಕಾದ್ದು ಇಷ್ಟೇ…

ಋತ್ವಿಕ್ ಅವರ ಇನ್ನಷ್ಟು ಹಾಡನ್ನು ಕೇಳಲು ಕೆಳಗಿನ ಲಿಂಕ್ ಒತ್ತಿ :

bf2fb3_90f3133197a2408e8e50f4c733ca019c~mv2.jpg

ಲೇಖನ : ಶಾಲಿನಿ ಪ್ರದೀಪ್

aakritikannada@gmail.com

 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW