ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಆರನೇ ಪುಸ್ತಕ ‘ಕೇಳದೆ ನಿಮಗೀಗ’ ಪುಸ್ತಕ ಬಿಡುಗಡೆ ಸಮಾರಂಭ. ಸಂತೆಬೆನ್ನೂರು ಹೊಂಡದ ಹಸಿರು ಹುಲ್ಲಿನ ಹಾಸಿನಲ್ಲಿ, ಎಲ್ಲರಿಗೂ ಆದರದ ಸ್ವಾಗತ…
ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ಪ್ರೇಮಕವಿ. ಅವರ ಕಥಾವಸ್ತು ಪ್ರೇಮವಾದರೂ ಎಲ್ಲಿಯೂ ಬೇಸರ, ಏಕತಾನತೆ ಕಾಣದಂತೆ ಸೂಕ್ಷ್ಮವಾಗಿ ತಮ್ಮ ಕವನಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಐದು ಕೃತಿ ಲೋಕಾರ್ಪಣೆ ಮಾಡಿರುವ ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ಇದೀಗ ಆರನೇ ಪುಸ್ತಕ ತಮ್ಮ ಹುಟ್ಟೂರಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಅಧ್ಯಾಪಕರಾಗಿದ್ದಾರೆ.
ಅವರು ಕತೆ, ಕವಿತೆ, ಪ್ರಬಂಧ, ಆಧುನಿಕ ವಚನ, ಚುಟುಕಗಳು ಸೇರಿದಂತೆ ಸಾಹಿತ್ಯಲೋಕದಲ್ಲಿ ತಮ್ಮದೇಯಾದ ಛಾಪೊಂದನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯ ಕೃಷಿಗೆ ‘ಸಂಚಯ ಕಾವ್ಯ ಪುರಸ್ಕಾರ’, ‘ಹಾಮಾನಾ ಕಥಾ ಪುರಸ್ಕಾರ’, ‘ಸ್ನೇಹಶ್ರೀ ಪ್ರಶಸ್ತಿ’, ‘ಗುರುಕುಲಶ್ರೀ ಪ್ರಶಸ್ತಿ’, ‘ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಗೌರವ ಸಂದಿದ್ದು, ಅವರ ಕತೆ ಮಹಾರಾಷ್ಟ್ರ ರಾಜ್ಯದಲ್ಲಿ ಪಠ್ಯ ಪುಸ್ತಕವಾಗಿರುವುದು ಹೆಮ್ಮೆಯ ವಿಷಯ.
ಇದೀಗ ಫೈಜ್ ಅವರ ಪ್ರೇಮ ಕಾವ್ಯ ಕೃತಿ ‘ ಕೇಳದೆ ನಿಮಗೀಗ ‘ ಲೋಕಾರ್ಪಣೆಗೊಳ್ಳಲಿದ್ದು, ಸಮಾರಂಭದಲ್ಲಿ ಸಂತೆಬೆನ್ನೂರು ಗ್ರಾಮಸ್ಥರು, ಶಿಕ್ಷಣ ಇಲಾಖೆಯ ಅಧಿಕಾರಿವರ್ಗ ಹಾಗು ಅಪಾರ ಅಭಿಮಾನಿ ಬಳಗ ಸೇರಲಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ.
ಕಾರ್ಯಕ್ರಮದ ವಿವರ :
ಕೃತಿ: ಕೇಳದೇ ನಿಮಗೀಗ
ಕವಿ : ಸಂತೆಬೆನ್ನೂರು ಫೈಜ್ನಟ್ರಾಜ್
ಪುಸ್ತಕ ಬಿಡುಗಡೆ : ಶ್ರೀ ಎಸ್.ಬಿ.ತಿಪ್ಪೇಸ್ವಾಮಿ (ಅಂಚೆ ಇಲಾಖೆ, ದಾವಣಗೆರೆ)
ಕಾರ್ಯಕ್ರಮದ ಮುಖ್ಯ ಅತಿಥಿಗಳು : ಶ್ರೀಮತಿ ಮಮತ (ಶಿಕ್ಷಕರು, ದಾವಣಗೆರೆ)
ಕೃತಿ ಕುರಿತ ಮಾತು : ಶ್ರೀಮತಿ ಸಿ.ಪಿ ಅನಿತಾ (ವಕೀಲರು ದಾವಣಗೆರೆ)
ದಿನಾಂಕ : ೨೪-೦೨-೨೦೨೧
ಸಮಯ : ಬುಧವಾರ ೪.೦೦ ಗಂಟೆ
ಸ್ಥಳ : ಸಂತೆಬೆನ್ನೂರು ಹೊಂಡದ ಹಸಿರು ಹುಲ್ಲಿನ ಹಾಸಿನ ಮೇಲೆ