ಜ್ಯೋತಿರ್ಲಿಂಗಗಳ ವಿಸ್ಮಯಕಾರಿ ಜಗತ್ತು- ಡಾ. ಪ್ರಕಾಶ ಬಾರ್ಕಿ



ಶಿವಲಿಂಗಗಳ ಬೆನ್ನಿಗೆ ಬಿದ್ದಾಗ ಸಿಕ್ಕ ಉತ್ತರಗಳು. ನನ್ನ ಸರ್ವಕಾಲದ ಅಲೆದಾಟದಲ್ಲಿ ಸೆಳೆದು ರೋಮಾಂಚನಗೊಳಿಸುವ ವಿಸ್ಮಯಕಾರಕ ಸ್ಥಳಗಳೆಂದರೆ, ಮುಗುಮ್ಮನೆ ಮುಗಿಲೆತ್ತರಕ್ಕೆ ನಿಂತು ಕಾಡುವ ಮಲೆನಾಡ ಕಾಡು ಮತ್ತೊಂದು ದಿವ್ಯ ತೇಜಸ್ಸಿನ ಒಳಹರಿವಿರುವ, ಗಂಗೆಯ ಮಾತೃ ಮಡಲಿನಲ್ಲಿ ಬರಸೆಳೆದಪ್ಪುವ ಮುಕ್ತಿ ನಗರಿ ಕಾಶಿ. ಕುರಿತು ಇನ್ನಷ್ಟು ಕುತೂಹಲಕಾರಿ ವಿಷಯಗಳನ್ನು ಲೇಖಕರು ಡಾ. ಪ್ರಕಾಶ ಬಾರ್ಕಿ ಅವರು ತಿಳಿಸಿ ಕೊಟ್ಟಿದ್ದಾರೆ…

ಕೊರೋನಾ ಕಾಡಾಟದ ಹೊಡೆತಕ್ಕೆ ನಲುಗಿದ ಈ ಸಮಯದಲ್ಲಿ “ಕಾಶಿ”ಯತ್ತ ನಡೆಯಲಾಗಿಲ್ಲ. ಆದರೆ ಶಿವಲಿಂಗದ ತೀವ್ರ ಭಾವಾತೀರೇಕದ ಸೆಳೆತದಿಂದ ನನಗೆ ಎಂದಿಗೂ ಹೊರಬರಲಾಗಲ್ಲ.

ಶಿವಲಿಂಗ ದಿಟ್ಟಿಸಿದಾಗಲೆಲ್ಲ ನನ್ನೆದೆಗೆ ಬಿದ್ದದ್ದು ನೂರಾರು ಪ್ರಶ್ನೆಗಳು. ಅದರಲ್ಲಿನ ಕೆಲ ಪ್ರಶ್ನೆಗಳಿವು : 

  • ಶಿವಲಿಂಗ ಇದೇ ಆಕಾರಕ್ಕೆ ಏಕಿದೆ?
  • ಶಿವನ ಚಿತ್ರ ಬಿಟ್ಟು ಆತನ ಸಂಕೇತದಂತೆ “ಶಿವಲಿಂಗ” ಏಕೆ ಸ್ಥಾಪಿಸಲಾಗಿದೆ?
  • ಶಿವಲಿಂಗವನ್ನು ಅರ್ಧಪ್ರದಕ್ಷಿಣೆ ಮಾತ್ರ ಹಾಕುವಂತೆ ಪುರಾಣಗಳಲ್ಲಿ ಅದೇಕೆ ಕಟ್ಟಪ್ಪಣೆ ಮಾಡಲಾಗಿದೆ?
  • ಶಿವಲಿಂಗ ಪೂಜೆಗೆ ಮೂರ್ದಳದ ಬಿಲ್ವ ಪತ್ರೆ, ಬೇಲಿಯಲ್ಲಿ ಬೆಳೆಯುವ ಎಕ್ಕೆ ಹೂವು, ಧತ್ತೂರದ ಹೊವುಗಳೇ ಏಕೆ?
  • ಎಲ್ಲ ದೇವರಿಗೂ ಪೂಜೆಯಲ್ಲಿ ಬಳಸುವಂತೆ ಇಲ್ಲಿ ಕುಂಕುಮ ಬಳಸುವುದಿಲ್ಲ ಏಕೆ?
  • ಭಸ್ಮ, ಶ್ರೀಗಂಧ ಲೇಪನ ಏಕೆ?
  • ನಿರಂತರವಾಗಿ ನೀರು ಶಿವಲಿಂಗದ ಮೇಲೆ ಬೀಳುವಂತೆ “ತೂತಿನ ಮಡಕೆ” ಯಾಕೆ ಕಟ್ಟಬೇಕು?
    ಇನ್ನು ಅನೇಕ ನಿಗೂಢ ಪ್ರಶ್ನೆಗಳು.

ಹಲವು ದಿನಗಳ ಕಾಲ ಕ್ಷಣಕ್ಷಣಕ್ಕೂ ಕಾಡಿದ ನನ್ನೆದೆಗೆ ಬಿದ್ದ ಅಷ್ಟೂ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟಾಗ, ಸಿಕ್ಕ ಸಿಕ್ಕ ಪುಸ್ತಕ, ಗೂಗಲಮ್ಮ, ಫೇಸ್ ಬುಕ್ ಮಾಯಾಜೀವಿಗಳು ಮತ್ತು ಕೆಲವು ಅಧ್ಯಯನ ಪ್ರಬಂಧಗಳು ಸಹಾಯಕ್ಕೆ ಬೆನ್ನಿಗೆ ನಿಂತವು. ಅವುಗಳೆಲ್ಲವುಗಳಿಂದ ಕ್ರೂಢಿಕರಿಸಿದ ಅಧ್ಯಯನದ ಸಾರಾಂಶ ನೀವು ಓದಿ.

ಮಹಾದೇವ, ಭೋಲೆನಾಥ, ದುಷ್ಟರ ನಾಶಕ ಎಂದೆಲ್ಲಾ ನಾಮಧೇಯ ಹೊಂದಿರುವ ಸರ್ವೋಚ್ಚ ಜೀವಿಯೇ ಶಿವ. ನಾವು ಶಿವನನ್ನು ಪೂಜಿಸುವುದು “ಶಿವಲಿಂಗ”ದ ರೂಪದಲ್ಲಿಯೆ.
ಹಿಂದೂಗಳು ಸಾಮಾನ್ಯವಾಗಿ “ಜ್ಯೋತಿರ್ಲಿಂಗ” ಎಂಬ ಪದ ಕೇಳಿಯೇ ಇರುತ್ತೇವೆ. “ಜ್ಯೋತಿರ್ಲಿಂಗ” ಯಾತ್ರೆ, ದರ್ಶನ ಹಿಂದೂಗಳಲ್ಲಿ ಅತ್ಯಂತ ಪೂಜನೀಯ ಮತ್ತು ಪವಿತ್ರವಾಗಿದೆ.
“ಜ್ಯೋತಿರ್ಲಿಂಗ” ದರ್ಶನದಿಂದ ಮುಕ್ತಿ ದೊರೆಯುತ್ತದೆ ಎಂಬುದು ಹಿಂದೂಗಳ ಅಗಾಧ ನಂಬಿಕೆ.

ಮೂಲತಃ ಜ್ಯೋತಿರ್ಲಿಂಗಗಳು ಇರುವುದು ಒಟ್ಟು ೬೪ . ಅವುಗಳಲ್ಲಿ ಹೆಚ್ಚು ಪವಿತ್ರ, ಶುಭದಾಯಕ ಮತ್ತು ಪೂಜನೀಯವಾದದ್ದು ೧೨  ಜ್ಯೋತಿರ್ಲಿಂಗಗಳೆಂದು ಆಳವಾಗಿ ನಂಬಲಾಗಿದೆ.

ಜ್ಯೋತಿರ್ಲಿಂಗಗಳು ಜಗದ ಉಚ್ಚ ಶಕ್ತಿ “ಶಿವನ” ವಿಭಿನ್ನ ಅಭಿವ್ಯಕ್ತಿಗಳೆಂದು ಪರಿಗಣಿಸಲಾಗಿದೆ. ಈ ಎಲ್ಲಾ ಲಿಂಗಗಳ ಪ್ರಾಥಮಿಕ ಸಾಮಾನ್ಯ ಚಿತ್ರಣವೆಂದರೆ “ಲಿಂಗ”ವೇ ಪ್ರಾರಂಭ ಮತ್ತು ಅಂತ್ಯದ ಸ್ತಂಭ. ನಂತರದ್ದು ಅಗಲವಾದ ಶಕ್ತೀಪೀಠ, ಭೂಮಿಗೆ ಹುದುಗಿದ ಆಕಾರ ಬ್ರಹ್ಮ ಪೀಠ. ಒಟ್ಟಾರೆ ಇದು ಶಿವನ ಅನಂತ ಸ್ವರೂಪವನ್ನು ಪ್ರತಿನಿಧಿಸುತ್ತದೆ.

ಈ ಜ್ಯೋತಿರ್ಲಿಂಗಗಳನ್ನು ನಿರ್ಧಿಷ್ಟ ದೂರ ಮತ್ತು ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಹಿಂದಿನ ರಹಸ್ಯ ಉದ್ದೇಶ ಕೆದಕಿದರೆ ಇವೇನೋ ಮಹಾನ್ ಶಕ್ತಿಗಳನ್ನು ಹೊಂದಿರಬಹುದು ಎಂಬುದು ಖಚಿತವಾಗುತ್ತೆ. ಈ ವಿಚಾರ ಹಲವು ವಿಜ್ಞಾನಿ ಮತ್ತು ಕೂತೂಹಲಿಗಳ ನಿದ್ದೆಗೆಡಿಸಿದೆ.

ಶಿವಲಿಂಗದ ಹಿಂದಿನ ರಹಸ್ಯದ ಬಗ್ಗೆ ನನ್ನೊಳಗಿದ್ದು.. ಕೆದಕುತ್ತಿದ್ದ ಪ್ರಶ್ನೆಗಳಿಗೆ ಉತ್ತರವಾಗಿದ್ದು. ಮುಂಬೈನ “ಬಾಬಾ ಆಟೋಮಿಕ್ ರಿಸರ್ಚ ಸೆಂಟರ್”ನ(BARC) ಹೊರ ರಚನೆ.
ಅದು ಸಹ ಥೇಟ್ ಶಿವಲಿಂಗದ ತರಹ ರಚನೆ ಹೊಂದಿದೆ. “ಲಿಂಗ”ದ ಪ್ರತಿರೂಪವೆ ಅನ್ನಬಹುದು. ನಂತರ “ಭಾರತದ ವಿಕಿರಣಶೀಲ ನಕ್ಷೆ”(Radioactive map) ನೋಡಲಾಗಿ, ಭಾರತದ ಪ್ರಮುಖ ಎಲ್ಲಾ ” ವಿಕಿರಣಶೀಲ” ಪ್ರದೇಶಗಳಲ್ಲಿ “ಜ್ಯೋತಿರ್ಲಿಂಗ”ಗಳಿವೆ. ೧೨ ಜ್ಯೋತಿರ್ಲಿಂಗಗಳಲ್ಲಿ “ವಿಕಿರಣಗಳು” ಕಂಡುಬರುತ್ತವೆ.ಹಾಗಾದರೆ “ಜ್ಯೋತಿರ್ಲಿಂಗ”ಗಳು ಪರಮಾಣು ರಿಯಾಕ್ಟರ್’ಗಳೇ?

ಇಂದಿನ ಪರಮಾಣು ರಿಯಾಕ್ಟರ (Nuclear Reactor) ಗಳು ಎಲ್ಲರಿಗೂ ತಿಳಿದಿರುವ ವಿಚಾರವೆ ಆದರೆ ಭಾರತದ ಅತ್ಯಂತ ಪುರಾತನ “ನ್ಯೂಕ್ಲಿಯರ್ ರಿಯಾಕ್ಟರ್”‘ಗಳ ಬಗ್ಗೆ ಸುಮಾರು ಜನರಿಗೆ ತಿಳಿದಿರದ ವಿಚಾರ.

ಜ್ಯೋತಿರ್ಲಿಂಗ “ನ್ಯೂಕ್ಲಿಯರ್ ರಿಯಾಕ್ಟರ್” ಇದ್ದೀರಬಹುದು ಎಂಬ ವಿಚಾರಕ್ಕೆ ಪುಷ್ಠಿ ದೊರೆತಿದ್ದು, ಕಾಶಿಯಲ್ಲಿ ಪತ್ತೆಯಾದ “ಯುರೇನಿಯಂ”(Uranium) ಧಾತುವಿನಿಂದ.
ಯುರೇನಿಯಂ ಅತ್ಯಂತ ಪ್ರಬಲ ವಿಕಿರಣಶೀಲ ಧಾತು. “ನ್ಯೂಕ್ಲಿಯರ್ ರಿಯಾಕ್ಟರ್”ಗಳಲ್ಲಿ ಶಕ್ತಿ (ವಿದ್ಯುತ್) ಉತ್ಪಾದನೆಯಲ್ಲಿ ಪ್ರಮುಖ “ಇಂಧನ”ವಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೇ “ಅಣುಬಾಂಬ್” ಮತ್ತು “ವೈದ್ಯಕೀಯ ರೋಗ ಪತ್ತೆ”ಕಾರ್ಯದಲ್ಲಿ ಬಳಸಲಾಗುತ್ತೆ. ಯುರೇನಿಯಂ ಜಗತ್ತಿನ ಅತೀ ದುಬಾರಿ ಧಾತು.

Internation Research journal of Environment Sciences [vol.4(6), 70- 74, June 2015] ರಿಸರ್ಚ್ ಪತ್ರಿಕೆಯಲ್ಲಿ ಪ್ರಕಟವಾದ ಪ್ರಾಥಮಿಕ ಅಧ್ಯಯನದಿಂದ ಕಾಶಿ, ಮತ್ತು ಇನ್ನಿತರೆ ಪ್ರದೇಶಗಳ ಅಂತರ್ಜಲವನ್ನು “ಕೈ ಪಂಪ್” ನ ಮೂಲಕ ಪಡೆದು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಅವುಗಳಲ್ಲಿ ೧೧ ರಿಂದ ೬೩ micro gram per litre ಯುರೇನಿಯಂ ಪತ್ತೆಯಾಗಿದೆ‌‌.
ಹಾಗಾದರೆ ಈ ಪವಿತ್ರ ಪ್ರದೇಶದಲ್ಲಿ “ಪುರಾತನ ಸಮಯದಲ್ಲಿ” ಬೃಹತ್ “ನ್ಯೂಕ್ಲಿಯರ್ ರಿಯಾಕ್ಟರ್” ಇದ್ದಿರಲೆಬೇಕು.

ಪ್ರಸಿದ್ದ ಇತಿಹಾಸಕಾರ ದಿವಂಗತ “ಪುರುಷೋತ್ತಮ ನಾಗೇಶ್ ಓಕ್” (P.N Oak) ತನ್ನ ಪ್ರಸಿದ್ಧ ಪುಸ್ತಕ “ವೈದಿಕ ವಿಶ್ವ: ರಾಷ್ಟ್ರ ಕಾ ಇತಿಹಾಸ” ನಲ್ಲಿ ವಿವರಿಸಿದಂತೆ “ಪ್ರಾಚೀನ ಭಾರತದ ೧೨ “ಪರಮಾಣು ಶಕ್ತಿ ಕೇಂದ್ರ”(Molecular energy centre) ಗಳನ್ನು ವಿವರಿಸಿದ್ದಾರೆ‌. ಅವೆಲ್ಲವೂ ಇವಾಗಿನ ೧೨ ಜ್ಯೋತಿರ್ಲಿಂಗಗಳಲ್ಲಿದ್ದವು.

ಅವು ಈ ಕೆಳಗಿನಂತಿವೆ : 

  • ಸೋಮನಾಥ (ಗುಜರಾತ್)
  • ಮಲ್ಲಿಕಾರ್ಜುನ (ಆಂಧ್ರಪ್ರದೇಶ)
  • ಮಹಾಕಾಲ (ಮಧ್ಯಪ್ರದೇಶ)
  • ಓಂಕಾರೆಶ್ವರ್ (ಮಧ್ಯ ಪ್ರದೇಶ)
  • ಕೇದಾರನಾಥ್ (ಉತ್ತರಾಖಂಡ)
  • ಭೀಮಾಶಂಕರ್ (ಮಹಾರಾಷ್ಟ್ರ.)
  • ಕಾಶಿ ವಿಶ್ವನಾಥ್ (ಉತ್ತರ ಪ್ರದೇಶ)
  •  ತ್ರ್ಯಂಬಕೇಶ್ವರ (ಮಹಾರಾಷ್ಟ್ರ)
  • ಬೈದ್ಯನಾಥ (ಮಹಾರಾಷ್ಟ್ರ )
  • ನಾಗೇಶ್ವರ (ಗುಜರಾತ್)
  • ರಾಮೇಶ್ವರ (ತಮಿಳುನಾಡು)
  • ಘ್ರೀಶ್ಣೇಶ್ವರ (ಮಹಾರಾಷ್ಟ್ರ)

ಈ ಎಲ್ಲಾ ಜ್ಯೋತಿರ್ಲಿಂಗಗಳು ನೀರಿನ ಪ್ರದೇಶದಲ್ಲಿದ್ದು, ನೆಲಮಟ್ಟಕ್ಕಿಂತ ಕೆಳಗೆ ಇವೆ‌. ಮತ್ತೊಂದು ವಿಚಾರ “ಕೆಳಗೆ ಚಿಕ್ಕ ರಂದ್ರವಿರುವ “ತಾಮ್ರದ ಮಡಕೆ”ಯನ್ನ ನೇರವಾಗಿ ಶಿವಲಿಂಗದ ಮೇಲೆ ನೇತುಹಾಕಿರುತ್ತಾರೆ. ಮಡಕೆಯ ಚಿಕ್ಕ ರಂಧ್ರದಿಂದ ಹನಿ ಹನಿಯಾಗಿ ನೀರು ನಿರಂತರ ಹರಿಯುತ್ತಿರುತ್ತದೆ.(ಶಿವನ ತಲೆ ಮೇಲೆ ಗಂಗೆ ಮತ್ತು ಅರ್ಧಚಂದ್ರವಿರುವ ಚಿತ್ರ ಸಹ). ಇವೆಲ್ಲವು ಘನೀಕರಣ ಸಾಧನ(Condensation device)ಗಳನ್ನು ಸೂಚಿಸುತ್ತವೆ.

ಒಂದು ವೇಳೆ ಶಿವಲಿಂಗ ಶಕ್ತಿಯನ್ನು ಉತ್ಪಾದಿಸುವ ಸಾಧನವಲ್ಲ ಅನ್ನುವುದಾದರೆ… ತಾಮ್ರದ ಮಡಕೆಯಿಂದ ನೀರು ಹರಿಯುವಿಕೆ, ಶಿವನ ತಲೆಯ ಮೇಲಿರುವ ಅರ್ಧ ಚಂದ್ರ ಸಂಕೇತ ಇಷ್ಟೇಲ್ಲಾ Condensation (ಘನೀಕರಣ) ಸಾಧನಗಳೇಕೆ???

  • ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆ ವಿಕಿರಣದಿಂದ ರಕ್ಷಿಸುವ (Radioprotective) ಗುಣ ಹೊಂದಿದೆ. ಅಂದರೆ… ಶಿವಲಿಂಗ “ವಿಕಿರಣಶೀಲ”(Radioactive) ಸಾಧನ.
  • ಪುರಾಣದಲ್ಲಿನ ಈ ಶ್ಲೋಕದಿಂದ ಶಿವಲಿಂಗ ಪ್ರದಕ್ಷಿಣೆ ತಿಳಿಯುವುದು.

“ಏಕಾ ಚಂಡಾ ರವೆ: ಸಪ್ತ ತ್ರಿಸ್ತ್ರ: ಕಾರ್ಯಾ ವಿನಾಯಕಃ||
ಹರೇಶ್ಚತ್ರಸ್ತ್ರ: ಕರ್ತವ್ಯಾ: ಶಿವಸ್ಯಾ ಅರ್ಧಪ್ರದಕ್ಷಿಣಾ||”

ಸಂಪ್ರದಾಯದಂತೆ ಭಕ್ತರು ಶಿವಲಿಂಗವನ್ನು ಕೇವಲ ೩/೪ ಭಾಗವನ್ನು ಮಾತ್ರ ಸುತ್ತಬೇಕು, ಅರ್ಧಪ್ರದಕ್ಷಿಣೆ ಮಾತ್ರ. ಆದರೆ “ಶಕ್ತಿ ಪೀಠ”ದಿಂದ ಹೊರಚಾಚಿದ ಕೊಳವೆಯಂತ ಭಾಗವನ್ನು ದಾಟಬಾರದು. ಶಿವಲಿಂಗದ ಮೆಲೆ ಬಿದ್ದು ಹರಿಯುವ ನೀರನ್ನು ದಾಟಬಾರದು. ಏಕೇಂದರೆ ಶಿವಲಿಂಗ “ವಿಕಿರಣಶೀಲ” ಗುಣವನ್ನು ಹೊಂದಿದ್ದು, ಅದರ ಮೇಲೆ ಸುರಿದ ನೀರು “ವಿಕಿರಣಶೀಲ ತ್ಯಾಜ್ಯ”(Radioactive waste). ಆದ್ದರಿಂದಲೆ ಆ ನೀರನ್ನು ದಾಟಬಾರದು.

  • ಜ್ಯೋತಿರ್ಲಿಂಗ ಎಂಬ ಪದದ ಅರ್ಥ ನೋಡುವುದಾದರೆ. ಸಂಸ್ಕೃತ ಪದ “ಜ್ಯೋತಿ” ಎಂದರೆ ಬೆಳಕು, ದೀಪ ಮತ್ತು “ಲಿಂಗ” ಎಂದರೇ “ಚಿಹ್ನೆ, ಸಂಕೇತ.
    ಜ್ಯೋತಿರ್ಲಿಂಗ ಅಂದರೆ “ಬೆಳಕಿನ ಸಂಕೇತ”. ಜ್ಯೋತಿರ್ಲಿಂಗಗಳೆಲ್ಲವು ನದಿಯ ದಡದಲ್ಲಿಯೆ ಸ್ಥಾಪಿತವಾಗಿವೆ ಮತ್ತು ಶಿವಲಿಂಗದ ಮೇಲೆ ನಿರಂತರ ನೀರು ಸುರಿಯಲಾಗುತ್ತದೆ.
    ಇನ್ನು ಶಿವನಿಗೆ ಅರ್ಪಿಸುವ ಮೆಚ್ಚಿನ ಬಿಲ್ಲ, ಅರ್ಕ, ಧತ್ತೂರ, ಮುಂತಾದ ಸಸ್ಯಗಳು ಅತ್ಯತ್ತಮ “ಶಕ್ತಿ ಹೀರುವ” ಸಾಧನಗಳು. (Energy absorber). ಮತ್ತೆ ಇವುಗಳೆಲ್ಲ ಘನೀಕರಣ (Condensation) ಪ್ರಕ್ರಿಯೆಯನ್ನು ಸಂಕೇತಿಸುತ್ತವೆ.

ಶಿವಲಿಂಗದ ಶಿಲೆಯ ಮೇಲಿನ “ಪುರುಷ ಸಂಕೇತ” ನ್ಯೂಕ್ಲಿಯಸ್ (Nucleus). ಪ್ರೋಟಾನ್ ಮತ್ತು ನ್ಯೂಟ್ರಾನ್ ಕಣಗಳ ಸಂಗಮ. ಅದರ ಸುತ್ತ “ಎಲೆಕ್ಟ್ರಾನ” ತರಂಗಗಳು ಸುತ್ತುತ್ತಿರುತ್ತವೆ.
ಭಗವಾನ್ ಶಿವನು “ಪರಮಾಣು ಶಕ್ತಿ”ಯಂತೆ ಜಗದೋದ್ದಾರಕ ಮತ್ತು ವಿನಾಶಕಾರಿ ಸಹ. ಶಿವನು ನಿಷ್ಕಪಟ ಮತ್ತು ವರದಾಯಕ, ಆದ್ದರಿಂದಲೇ ಜಗದೋದ್ದಾರಕನು. ಕೋಪಗೊಂಡು ಮೂರನೆಯ ಕಣ್ಣು ತೆರೆದರೆ ಜಗವು ಸರ್ವನಾಶವಾಗುವುದು. ಆದ್ದರಿಂದ ಶಿವಲಿಂಗ “Nuclear Reactor”

ಶಿವನ ಕಲ್ಯಾಣಕಾರಿ ವರದಿಂದ ನಮ್ಮ ಪೂರ್ವಜ ವಿಜ್ಞಾನಿಗಳಾದ ಋಷಿಗಳು ಆಘಾತಕಾರಿಯಲ್ಲದ ಕೇವಲ ಅತ್ಯುತ್ತಮ ಶಕ್ತಿ ಬಿಡುಗಡೆಯಾಗುವಂತ ಶಿವಲಿಂಗ ನಿರ್ಮಾಣ ಮಾಡಿದ್ದು. ಆದ್ದರಿಂದಲೇ ಜ್ಯೋತಿರ್ಲಿಂಗಗಳು ಪೂಜನೀಯ ಮತ್ತು ಪವಿತ್ರ ಕ್ಷೇತ್ರಗಳು.

ಶಿವ ಮೂರನೆಯ ಕಣ್ಣು ತೆರೆದರೆ ಸರ್ವಸ್ವವು ನಾಶವಾಗುವುದು ಎಂಬ ನಂಬಿಕೆಯಿದೆ, ಈ ನಂಬಿಕೆ “ಪರಮಾಣು ಶಸ್ತ್ರಾಸ್ತ್ರ” (Atomic bomb) ಸಾಮರ್ಥ್ಯವನ್ನು ನಿರೂಪಿಸುತ್ತದೆ.
ಆದ್ದರಿಂದ ಜ್ಯೋತಿರ್ಲಿಂಗಗಳು ಇರುವ ಸ್ಥಳಗಳಲ್ಲಿ ಖಂಡಿತವಾಗಿಯೂ “ಪರಮಾಣು ವಿದ್ಯುತ್ ಕೇಂದ್ರ”ಗಳಿದ್ದವು ಎನಿಸುತ್ತದೆ. ಇದಕ್ಕೆಲ್ಲಾ ಸಾಕ್ಷಿಯಂತೆ ಕಾಶಿಯ ನೀರಿನಲ್ಲಿ ಯುರೆನಿಯಂ ದೊರೆತದ್ದು.

ಮಹಾಭಾರತದ ಪಾಂಡವರು ಮತ್ತು ಕೌರವರ ಮಧ್ಯೆ ಕುರುಕ್ಷೇತ್ರದಲ್ಲಿ ಯುದ್ದ ನಡೆಯಿತು. ಈ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರ ಬಳಸಲಾಗಿದೆ ಎಂಬುದು ಹಲವರ ಅಭಿಪ್ರಾಯ. “ಬ್ರಹ್ಮಾಸ್ತ್ರ” ವೆಂದರೆ ಅಣುಬಾಂಬ್.



ಮಾಹಿತಿಗೆ ಓದಿ :
https://www.speakingtree.in/allslides/weapons-from-mahabharata/m-lite

ಆದ್ದರಿಂದಲೇ ಇಂದಿಗೂ ಕುರುಕ್ಷೇತ್ರ ಮತ್ತು ಸುತ್ತಮುತ್ತ ಪ್ರದೇಶದಗಳ ಮಣ್ಣು ಮತ್ತು ಕಲ್ಲಿನಲ್ಲಿ “ವಿಕಿರಣಶೀಲ”ತೆ(Radiation) ಹೆಚ್ಚು ಇರುವುದು ಪತ್ತೆಯಾಗಿದೆ. ಇದರ ಬಗೆಗೆ ಅಧ್ಯಯನ ನಡೆಸಿ ಸಂಶೋಧನಾ ಪ್ರಬಂಧ ಸಹ ಮಂಡಿಸಲಾಗಿದೆ.
Indian journal of pure and applied Physics Vol.40, September 2002, pp.670- 673.

ಪ್ರಸಿದ್ದ ಇತಿಹಾಸಕಾರ ದಿವಂಗತ ಪಿ.ಎನ್. ಓಕ್ ದಾಖಲಿ‌ಸಿರುವಂತೆ, ಮಹಾಭಾರತದ ಕುರುಕ್ಷೇತ್ರ ಯುದ್ದದ ಅವಧಿಯಲ್ಲಿ ಈ ೧೨ ಪರಮಾಣು ರಿಯಾಕ್ಟರ್‌ಗಳು(12 ಜ್ಯೋತಿರ್ಲಿಂಗಗಳು) ಶಕ್ತಿಯನ್ನು(Energy) ಉತ್ಪಾದಿಸುತ್ತದ್ದವು.

ಶಿವ ಸರ್ವಶಕ್ತ. ಆತ ಜಗವನ್ನು ಉದ್ದರಿಸುವವನು ಹೌದು ಮತ್ತು ಜಗದ ಸರ್ವನಾಶಕ್ಕೆ ಕಾರಣೀಕರ್ತ. ಭಗವಾನ್ ಶಿವನ ಅತ್ಯುನ್ನತ ಸಂಕೇತವೆ “ಜ್ಯೋತಿರ್ಲಿಂಗ”ಗಳು. ಜ್ಯೋತಿರ್ಲಿಂಗಗಳು “ಪರಮಾಣು ರಿಯಾಕ್ಟರ”ಗಳಾಗಿದ್ದವು. ಪುರಾತನ ಕಾಲದಲ್ಲಿ ಇಲ್ಲಿಂದಲೇ “ಅತ್ಯುನ್ನತ ಶಕ್ತಿ” ಉತ್ಪಾದನೆಯಾಗುತಿತ್ತು.

ಶಿವಲಿಂಗದ ಸಂಪೂರ್ಣ ಕೆತ್ತನೆ “ಪರಮಾಣು ರಿಯಾಕ್ಟರ್” ನಂತೆ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ನಿರಂತರ ಶಕ್ತಿ ಉತ್ಪಾದನೆಯಾಗುತ್ತಿದೆ. ಮನುಷ್ಯನ ಮತ್ತು ಜಗದ ಉದ್ಧಾರಕ್ಕೆ ಮೂಲ ಭುನಾದಿ‌ಯಾಗಿದೆ. ಆದ್ದರಿಂದಲೇ ಅಲ್ಲವೇ ಜ್ಯೋತಿರ್ಲಿಂಗ ದರ್ಶನ, ಯಾತ್ರೆ ಹಿಂದೂ ಧರ್ಮದಲ್ಲಿ ಅತೀ ಪವಿತ್ರ ಕಾರ್ಯವಾಗಿರೋದು‌.

ಹಿಂದೂ ಧರ್ಮದ ಪ್ರತಿ ಸಂಪ್ರದಾಯವು ತನ್ನೊಳಗೆ ಊಹೆಗೂ ನಿಲುಕದ “ವೈಜ್ಞಾನಿಕ ವಿವರಣೆ” ಹೊಂದಿದೆ. ಹಿಂದೂ ಧರ್ಮಾಚರಣೆ, ವೈಜ್ಞಾನಿಕ ಆಚರಣೆ ಅಲ್ಲದೆ ಮತ್ತೇನೂ ಅಲ್ಲ.!!!


  • ಡಾ. ಪ್ರಕಾಶ ಬಾರ್ಕಿ  , ಕಾಗಿನೆಲೆ

3.5 2 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW