ಎಸ್ ದಿವಾಕರ್ ಅವರಿಗೆ 80 ರ ಸಂಭ್ರಮ

ಉತ್ತಮ ಓದುಗ, ವಿಮರ್ಶಕ, ಕಥೆಗಾರರಷ್ಟೇ ಅಲ್ಲದೆ ಉತ್ತಮ ಕವಿಯೂ ಆಗಿರು ಸಾಮಥನಹಳ್ಳಿ ದಿವಾಕರ್ ಅವರಿಗೆ ೮೦ ನೆಯ ವರ್ಷದ ಸಂಭ್ರಮ. ಅವರ ಕುರಿತು ಕವಿ, ಕಲಾವಿದ ಜಬೀವುಲ್ಲಾ ಎಂ. ಅಸದ್ ಅವರು ಬರೆದ ಒಂದು ಪುಟ್ಟ ಲೇಖನವನ್ನು ತಪ್ಪದೆ ಮುಂದೆ ಓದಿ…

ನಾನು ಆರೋ, ಏಳನೇಯ ತರಗತಿಯೋ ಓದುತ್ತಿದ್ದ ಬಾಲ್ಯದ ದಿನಗಳವು. ಆಗ ಆ ವಯೋಮಾನಕ್ಕೆ ತಕ್ಕಂತೆ ಕಥೆಗಳನ್ನು ಓದುವ ಹವ್ಯಾಸವೊಂದು ನನ್ನಲ್ಲಿ ಹುಟ್ಟಿಕೊಂಡಿತ್ತು. ಹಾಗಾಗಿ ನನ್ನೂರು ಮೊಳಕಾಲ್ಮುರಿನ ಗ್ರಂಥಾಲಯದಲ್ಲಿ ಸದಸ್ಯತ್ವ ಪಡೆದು ಕಥೆ ಪುಸ್ತಕಗಳನ್ನು ಮನೆಗೋಯ್ದು ಓದಿ, ಅಲ್ಲಿ ಬರುವ ಪಾತ್ರಗಳನ್ನು, ಕಥನವನ್ನು ನನ್ನ ಕಲ್ಪನೆಯಲ್ಲಿ ಭ್ರಮಿಸಿಕೊಂಡು ಸಂಭ್ರಮಿಸುತ್ತಿದ್ದೆ.

ಜಬೀವುಲ್ಲಾ ಎಂ. ಅಸದ್ ಅವರ ಕೈಯಲ್ಲಿ ಅರಳಿದ ಸಾಮಥನಹಳ್ಳಿ ದಿವಾಕರ್

 

ಒಮ್ಮೆ ಎಂದಿನಂತೆ ಗ್ರಂಥಾಲಯದಲ್ಲಿ ಪುಸ್ತಕ ಅರಸುವಾಗ ಕಥಾ ಜಗತ್ತು ಎಂಬುವ ದಪ್ಪನೆಯ ಪುಸ್ತಕವೊಂದು ಕಣ್ಣಿಗೆ ಬಿತ್ತು. ಅರೆ… ಎಷ್ಟೊಂದು ದಪ್ಪ ಪುಸ್ತಕ, ಎಷ್ಟೆಲ್ಲಾ… ಏನೆಲ್ಲಾ… ಇಡೀ ಜಗತ್ತಿನ ಕಥೆಗಳಿರಬಹುದು ಎಂದು ಕುತೂಹಲದಿಂದ ಮನೆಗೋಯ್ದು ಓದಿದಾಗ ಹೊಸದೊಂದು ಜಗತ್ತಿನ ಪರಿಚಯವಾದದ್ದು ಸುಳ್ಳಲ್ಲ. ಕಥೆಗಳೆಂದರೆ ಹೀಗೂ ಇರುತ್ತವೆಯಾ ಎಂದು ಬೆರಗಾಗಿದ್ದೆ. ನೊಬೆಲ್ ಪ್ರಶಸ್ತಿ ಪಡೆದ ಜಗತ್ತಿನ ವಿವಿಧ ಕಥೆಗಾರರ ಕಥೆಗಳು ನನ್ನ ಓದಿನ ದಿಕ್ಕನ್ನೇ ಬದಲಾಯಿಸಿದವು. ಅದು ಸಾಧ್ಯವಾದದ್ದು ಸಾಮಥನಹಳ್ಳಿ ದಿವಾಕರ್ ಸರ್ ಅವರಿಂದ. ಆನಂತರ ಜಗತ್ತಿನ ಅತೀ ಸಣ್ಣ ಕಥೆಗಳು, ಶತಮಾನದ ಸಣ್ಣ ಕಥೆಗಳು, ವಿಮರ್ಶ ಬರಹಗಳು ನನ್ನ ಅರಿವನ್ನು ವಿಸ್ತರಿಸಿದವು. ಅಷ್ಟೇ ಅಲ್ಲ ಒಂದು ಸಮಯದಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಭಾನುವಾರದಂದು ಪ್ರಕಟವಾಗುತ್ತಿದ್ದ ಎಸ್. ದಿವಾಕರ್ ಸರ್ ಅವರ ಬರಹಗಳನ್ನು ತಪ್ಪಿಸದೆ ಓದುತ್ತಿದ್ದೆ, ಪತ್ರಿಕೆಯೇನಾದರೂ ಸಿಗದಿದ್ದರೆ ಪೆಚಾಡುತ್ತಿದ್ದೆ. ಅವುಗಳ ಕಟಿಂಗ್ಸ್ ನ್ನು ಒಂದು ಫೈಲ್ ಮಾಡಿಕೊಂಡಿದ್ದೆ. ಅದು ಇಂದಿಗೂ ನನ್ನಲ್ಲಿದೆ. ಆ ನಂತರ ಆ ಬರಹಗಳೆಲ್ಲಾ “ಮರೆಯಾದ ಗ್ರಾಮಫೋನ್ ಮತ್ತಿತರೆ ಪ್ರಬಂಧಗಳು” ಎಂಬ ಕೃತಿಯ ರೂಪದಲ್ಲಿ ಒಟ್ಟಾಗಿ ದಕ್ಕಿದವು. ದಿವಾಕರ್ ಸರ್ ಕೇವಲ ಉತ್ತಮ ಓದುಗ, ವಿಮರ್ಶಕ, ಕಥೆಗಾರರಷ್ಟೇ ಅಲ್ಲದೆ ಉತ್ತಮ ಕವಿಯೂ ಆಗಿರುವುದು ಅವರ ಬಹುಮುಖಿ ಪ್ರತಿಭೆಗೆ ಸಾಕ್ಷಿಯಾಗಿದೆ.

ದಿವಾಕರ್ ಸರ್ ಅವರಿಗೆ 70 ವಸಂತಗಳು ತುಂಬಿದ ಸಂದರ್ಭದಲ್ಲಿ ವಿಜಯ್ ದಾರಿ ಹೋಕ ಅವರು ಆನ್ಲೈನ್ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ನನ್ನ ಮತ್ತು ದಿವಾಕರ್ ಸರ್ ನಡುವಿನ ಪರೋಕ್ಷ ನಂಟಿನ ಕಥನ ಕೇಳಿ ಬೆರಗಾಗಿ, ಅವರೊಂದಿಗೆ ನನ್ನ ನೆನಪುಗಳನ್ನು ಹಂಚಿಕೊಳ್ಳಲು ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಿದ್ದರು.

ನಿನ್ನೆಯ ದಿನ ರಘುನಾಥ್ ಚಹಾ ಸರ್ ಕರೆ ಮಾಡಿ, “ಜಬೀಯವರೇ ನಿಮ್ಮ ಕೆಲವು ಚಿತ್ರಗಳನ್ನು ಎಸ್. ದಿವಾಕರ್ ಅವರ ಕೃತಿಗೆ ನಿಮ್ಮನ್ನು ಕೇಳದೆ ಬಳಸಿದ್ದೇವೆ, ಹಾಗಾಗಿ ತಿಳಿಸಲು ಕರೆ ಮಾಡಿದೆ. ಬರುವ ಭಾನುವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ, ತಪ್ಪದೇ ಬನ್ನಿ” ಎಂದು ಹೇಳಿದಾಗ, ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ನನ್ನ ನೆಚ್ಚಿನ, ಅಚ್ಚುಮೆಚ್ಚಿನ ಬರಹಗಾರರ ಕೃತಿಯಲ್ಲಿ ನನ್ನ ಚಿತ್ರಗಳು ಇರುತ್ತವೆ ಎಂದು ಕನಸು ಕಂಡವನಲ್ಲ, ಕಾಣದ ಕನಸೊಂದು ನನಸಾದ ಸಂಭ್ರಮ ಇಂದು ನನ್ನದಾಗಿದೆ. ಅದು ಹೆಮ್ಮೆಯ ಸಂಗತಿಯೂ ಹೌದು.


  • ಜಬೀವುಲ್ಲಾ ಎಂ. ಅಸದ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW