‘Mother I Never Knew’ ಪುಸ್ತಕದ ವಿಮರ್ಶೆ- ರೇಶ್ಮಾ ಗುಳೇದಗುಡ್ಡಾಕರ್



ಸುಧಾ ಮೂರ್ತಿ ಅವರ ಕತೆಗಳಲ್ಲಿ ಮಾನವೀಯ ಸಂಬಂಧಗಳು, ಬದುಕಿನ ಒಳನೋಟಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಅಂತಹದ್ದೇ ಅವರು ಬರೆದ ‘Mother I Never Knew’ ಪುಸ್ತಕ. ಓದುಗರಿಗೆ ಸಂತೋಷ ನೀಡುವುದರ ಜೊತೆಗೆ ಸಂಬಂಧಗಳಲ್ಲಿ ಗಟ್ಟಿತನವನ್ನು ಮೂಡಿಸುತ್ತದೆ ಎಂದು ಲೇಖಕಿ ರೇಶ್ಮಾ ಗುಳೇದಗುಡ್ಡಾಕರ್ ಈ ಪುಸ್ತಕದ ಕುರಿತು ನಾಲ್ಕು ಸಾಲುಗಳು ಇಲ್ಲಿವೆ…

ಪುಸ್ತಕ : ದ ಮದರ್ ಐ ನೆವರ್ ನ್ಯೊ ( ಕಾದಂಬರಿ)
ಲೇಖಕಿ : ಸುಧಾ ಮೂರ್ತಿ
ಪ್ರಕಾಶನ : ಪೆಂಗ್ವಿನ್‌‌ ಪುಸ್ತಕ

ಬದುಕಿನ ಮಾನವೀಯ ಸಂಬಂಧಗಳು ಮತ್ತು ಅವುಗಳಲ್ಲಿನ ಒಳನೋಟ ಕಾಣುವಲ್ಲಿ ಸುಧಾ ಮೂರ್ತಿ ಅವರ ಕತೆಗಳಲ್ಲಿ ಹೆಚ್ಚಿನ ಮಹತ್ವ ಇದೆ. ಮನೆಯೊಳಗಿನ ಸದ್ದು ಸಮಾಜದಲ್ಲಿ ಪ್ರತಿಧ್ವನಿಸುತ್ತದೆ. ಪ್ರತಿ‌ ಮನೆಯು ಒಂದು ಪುಟ್ಟ ಸಮಾಜ ಇಲ್ಲಿ‌ನ‌ ಒಗ್ಗಟ್ಟು, ಒಡನಾಟ ಬಾಂಧವ್ಯಗಳು‌ ಸಮಾಜಕ್ಕೆ ಅನುಕರಣೀಯವಾಗುತ್ತವೆ. ಹಾಗೂ ಆದರ್ಶವಾಗುತ್ತವೆ. ಇಲ್ಲದಿದ್ದಲ್ಲಿ ಕಂಟಕವಾಗಿ ಸಾಮಾಜಿಕ‌ ಅಸಮತೋಲನಕ್ಕೆ ಕಾರಣವಾಗುತ್ತವೆ .

ಫೋಟೋ ಕೃಪೆ : Frontlist

ಶ್ರೀ ಮಂತಿಕೆಯ ಲೆಕ್ಕಚಾರದ ಒಪ್ಪಂದದ ಬಂಧನಗಳು‌ ಮತ್ತು ಸ್ವಾರ್ಥ ಕ್ಕೆ ಬಲಿಯಾಗಿ ಗಳಿಸುವಿಕೆಯಲ್ಲೇ ಕರಗಿ ಕೃಷವಾದ ಜನರು‌ ಒಂದೆಡೆಯಾದರೆ, ಬದುಕಿನ ಎಲ್ಲ ತಿರುವುಗಳಲ್ಲಿಯೂ ಜೀವನದ ಆತ್ಮೀತೆಯನ್ನು ಉಳಿಸಿಕೊಂಡು ಉನ್ನತ ಆಲೋಚನೆಗಳಿಂದ ಮನಸ್ಸನ್ನು‌ ಶ್ರೀಮಂತವಾಗಿರಿಸಿಕೊಂಡು ಕೊರಗದೆ ನಗುತ್ತ ಬಾಳುವ ಜನರು ಇವರ ಕಾದಂಬರಿಯಲ್ಲಿ ಕಾಣುತ್ತಾರೆ . ಸರಳವಾಗಿ ಓದಿಕೊಂಡು ಹೋಗುವ ಈ ಕಾದಂಬರಿ ಹಂತ ಹಂತವಾಗಿ ಓದುಗರಲ್ಲಿ ಕುತೂಹಲ ಮೂಡಿಸುತ್ತದೆ. ಕಥಾನಾಯಕ ವೆಂಕಟೇಶ್ ಮತ್ತು ಅವನ ಕುಟುಂಬ ಇಲ್ಲಿ ಪ್ರಮುಖವಾಗಿ ಕಾಣುತ್ತದೆ.

ಬ್ಯಾಂಕ್ ನ ಉದ್ಯೋಗಿಯಾಗಿ ಸರಳ ಮತ್ತು ಮೌಲ್ಯಯುಕ್ತ ಜೀವನ ಸಾಗಿಸುವ ವೆಂಕಟೇಶ್ ಗೆ ವಾಣಿಜ್ಯಾತ್ಮಕ ದೃಷ್ಟಿ ಕೋನ‌ಉಳ್ಳ ಹೆಂಡತಿ ಶಾಂತ‌, ಆಕೆಯ ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿ ಸಂಬಂಧಗಳನ್ನು ಹಣಕಾಸಿನ ಲೆಕ್ಕಾಚಾರದಲ್ಲೆ ಅಳೆಯುವ ಮಗ ರವಿ ,ಅಪ್ಪನ ನಿಗೆ ತಾಯಿಯಾಗಿ ,ಗೆಳತಿಯಾಗಿ ಅಪ್ಪನಿಗಿಂತಲೂ ವಾಸ್ತವವನ್ನು ಅರಿತುಕೊಂಡು ಯಾವ ಭದ್ರಕೋಟೆಗಳಲ್ಲಿಯೂ ಸಿಲುಕದೆ ಹೆಜ್ಜೆ ಹಾಕುವ ಮಗಳು ಗೌರಿ .

ಈ ಕುಟುಂಬದಲ್ಲಾಗುವ ರೋಚಕ ತಿರುವು,‌ ಮತ್ತು ಅದಕ್ಕೆ ಪ್ರತಿಕ್ರಿಯೆ ನೀಡುವ ಸಂಬಂಧಗಳ ಚರ್ಚೆ ಇಲ್ಲಿನ ಕಥಾವಸ್ತು. ಹಣ ಎಷ್ಟಿದ್ದರೂ ಸಾಲದು ಆಸ್ತಿ, ‌ಎಷ್ಟು ಮಾಡಿದರು ಕಡಿಮೆ ಎಂಬ ಜಿದ್ದಿಗೆ ಬಿದ್ದು ಓಡುತ್ತಿರುವ ಹೆಂಡತಿ, ಕಾಂಚಾಣದ ಒಲವಿಗಾಗಿ ಹಂಬಲಿಸುವ ಬದುಕು. ಇವುಗಳಿಂದ ನಿರ್ಲಿಪ್ತವಾಗಿ ಜನರಿಗೆ ಆಪ್ತವಾಗಿ ಬದುಕುವ ವೆಂಕಟೇಶ್ .

ಶಾಂತ ತನ್ನ ಘನತೆ ವೀದೇಶದಿಂದ ಹಿಂತಿರುಗಿ ಬಂದ ಮಗನಿಗೆ ತಕ್ಕ ಹೆಣ್ಣನ್ನು ಹುಡುಕುವ ತವಕದಲ್ಲಿರುತ್ತಾಳೆ ವಾಸ್ತವವಾಗಿ ಮದುವೆಯ ವ್ಯಾಪಾರದಲ್ಲಿ ತಾಯಿ ಮಗ ಹೆಚ್ಚು ಗಮನ ಹರಿಸಿರುತ್ತಾರೆ. ವೆಂಕಟೇಶ್ ಮತ್ತು ಅತನ ಯೋಚನೆಗಳು ಇವರಿಗೆ ತೀರಾ ” ಪೆದ್ದುತನ “ವಾಗಿ ದಿನ ದಿನಕ್ಕೂ ಗೋಚರಿಸುತ್ತದೆ.



ಇಂತಹ ಸಮಯದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ವೆಂಕಟೇಶ್ ವರ್ಗಾವಣೆ ಯಾಗುತ್ತಾನೆ .ಹೆಂಡತಿಯ ಮೂಲಕ ಅತನ ವರ್ಗಾವಣೆ ಬದಲಾಯಿಸಿಕೊಳ್ಳ ಬಹುದಾಗಿದ್ದರು ಆ ಸಾಹಸಕ್ಕೆ ಆತ ಕೈಹಾಕದೆ ಹುಬ್ಬಳ್ಳಿಗೆ ಹೋಗಲು ನಿರ್ಧರಿಸುತ್ತಾನೆ . ಮನೆಯಲ್ಲಿ ಆತನಿಗಾಗಿ ಮಿಡಿಯುವ ಜೀವ ಎಂದರೆ ಮಗಳು ಗೌರಿ ಇಂತಹ ಮಗಳನ್ನು ಬಿಟ್ಟು ಹೊರಡಲು ಮಾನಸಿಕವಾಗಿ ಬಹಳ ಕುಗ್ಗಿರುತ್ತಾನೆ, ಅಂತಿಮ ವರ್ಷದ ಮೆಡಿಕಲ್ ಓದುತ್ತಿರುವ ಗೌರಿಯು ಸಹ ಅಪ್ಪನಿಲ್ಲದೆ ಪರೀಕ್ಷೆ ಯ ಸಿದ್ಧತೆ ಗಳನ್ನು ಮಾಡಲಾಗದೆ ನೊಂದಿರುತ್ತಾಳೆ .

ಫೋಟೋ ಕೃಪೆ : amazon

ಹುಬ್ಬಳ್ಳಿಗೆ ಬಂದು ಅಲ್ಲಿ‌ ನೆಲೆನಿಲ್ಲಲು ಮಗಳ ಗೆಳತಿಯ ಮನೆ ವೆಂಕಟೇಶನಿಗೆ ನೆರವಾಗುತ್ತದೆ. ನಿವೃತ್ತಿ ಯ ಅಂಚಿನಲ್ಲಿರುವ ಮಗಳ ಗೆಳತಿಯ ತಂದೆ ಅನಂತ ಪಾಟೀಲ್‌ ಹಾಗೂ ಅತನ ಕುಂಟುಂಬದ ಸ್ನೇಹ, ಒಡನಾಟ ಗೆಳತನ ಅಲ್ಲಿನ ಅಡುಗೆ ಎಲ್ಲವೂ ವೆಂಕಟೇಶನಿಗೆ ತನ್ನ ಮನೆಯು ಶ್ರೀ ಮಂತಿಕೆ ತುಂಬಿದ ಬಡ ಕುಟೀರ ಎಂದು ಮನವರಿಕೆ ಮಾಡುತ್ತವೆ. ಅಲ್ಲಿನ ಜನರ ಹೆಸರುಗಳು ಮೊದಲಿಗೆ ವೆಂಕಟೇಶನಿಗೆ ಅಚ್ಚರಿ ಉಂಟು ಮಾಡುತ್ತವೆ. ಮತ್ತೆ ಬೆಂಗಳೂರಿಗೆ ಹಿಂತಿರುಗಬೇಕೆಂಬ ಅದಮ್ಯ ಬಯಕೆ “ಶಂಕರ ಮಾಸ್ಟರ್ “ಅವರಿಂದ ಮರೆಯಾಗಿ ಇಲ್ಲದ ಸಂಬಂಧದ ಜಾಡು ಹಿಡಿದು ಅದರ ಇರುವಿಕೆಯ ಗೊತ್ತು ಮಾಡಿಕೊಳ್ಳುವಲ್ಲಿ ವೆಂಕಟೇಶ್ ಯಶಸ್ವಿಯಾಗುತ್ತಾನೆ. ಈತ ಮದ್ಯ ಅಲ್ಲಿನ ಹಲವು ಊರುಗಳ ಸಂಕ್ಷಿಪ್ತ ಪರಿಚಯ ಓದುಗರಿಗೆ ಅಗುತ್ತದೆ .

ಭಾಗ್ಯವ್ವಳ ಭೇಟಿ ಆಕೆಯ ಇತಿಹಾಸದಲ್ಲಿ‌ ತನಗಿರುವ ಸಂಬಂಧ ಈ‌ ಕುರಿತ ಹುಡುಕಾಟ. ಕೃಪಣರಂತೆ ಬದುಕಿ‌ ತಮ್ಮ ಸುಖ ಸಂತೋಷ ಎಲ್ಲವನ್ನು ಬ್ಯಾಂಕ್  ಲಾಕರ್ ಗಳಲ್ಲಿ ಕೊಡಿಟ್ಟು ಕೊಳೆಸುವ ಚಂಪಕ್ಕ ಮತ್ತು ಮಧವರಾವ್ ಸತ್ತು ಬದುಕಿರುತ್ತಾರೆ. ಜೀವನದ ಇತಿಹಾಸವೇ ಮರೆತು. ತಂದೆಯ ಗತ ಜೀವನದ ಕುರುಹು ಅಪರಿಚಿತ ಸ್ಥಳಗಳಿಗೆ ನೀಡಿದ ಭೇಟಿ ತನ್ನಿಂದ ಅಳಿದ ಬದುಕಿನ ಕೊಂಡಿಯನ್ನು ಮರು‌ ನಿರ್ಮಿಸಲು ವೆಂಕಟೇಶ್ ನಿಗೆ ಸಾಧ್ಯವಾಯಿತೆ?. ಶಂಕರ್ ಮಾಸ್ಟರ್ ಯಾರು?… ಭಾಗ್ಯವ್ವ ಹೇಳಿದ ಸತ್ಯ ಯಾವುದು?… ವೆಂಕಟೇಶ್ ನಿಗೆ ದೊರೆತ ಸಾಕ್ಷಿಗಳು ಯಾವ ತಿರುವು ನೀಡುತ್ತದೆ ಎಂಬುದಕ್ಕೆ ಕಾದಂಬರಿ ಓದಿ ತಿಳಿಯಬೇಕು .


  • ರೇಶ್ಮಾ ಗುಳೇದಗುಡ್ಡಾಕರ್
5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW