ಸೋತು ಗೆದ್ದ ಬಾಝಿಗರ್ ‘ಸುಧಾಕರ್ ಶೆಟ್ಟಿ’



”ಗೋ ಕೃಪಾ ಅಗರಬತ್ತಿ” ಯಲ್ಲಿ ಚಾಲಿ ಅಡಿಕೆ ಸಿಪ್ಪೆ, ಗಿಡ್ಡ ಗೋವಿನ ಸೆಗಣಿ, ತುಳಸಿ, ಬೇವು, ತುಪ್ಪ, ಲಿಂಬು, ಗುಗ್ಗಳ, ಜಾಠಮಸಿ ಬಳಸಿ ರಾಸಾಯನಿಕ ಬಳಸದೆ ಮಾಡಿದಂತಹ ಅಗರಬತ್ತಿಯಿದು, ಈ ಅಗರಬತ್ತಿಯ ಹಿಂದೆ ಒಬ್ಬ ಸಾಧಕನ ಕತೆಯಿದೆ, ಅವರ ಹೆಸರೇ ಸುಧಾಕರ್. ಮುಂದೆ ಓದಿ ಆಕೃತಿಕನ್ನಡದಲ್ಲಿ…

ಹುಟ್ಟು- ಸಾವು ಅನಿರಿಕ್ಷಿತ, ಇದರ ಮಧ್ಯೆ ನಮ್ಮದೆಯೊಂದು ಹೆಜ್ಜೆಗುರುತು ಮೂಡಿಸುವುದು ಅವಶ್ಯಕ. ಆ ಭಗವಂತ ಪ್ರತಿ ಮನುಷ್ಯನಲ್ಲೂ ಒಂದಲ್ಲ ಒಂದು ದಿವ್ಯಾಶಕ್ತಿಯೊಂದನ್ನು ಕರುಣಿಸಿದ್ದಾನೆ, ಅದರ ಆತ್ಮಲೋಕನವನ್ನು ನಾವು ಮಾಡಿಕೊಂಡು ಕಿಚ್ಚು ಹಚ್ಚಿದಾಗ ಹೊಸದೊಂದು ಆವಿಷ್ಕಾರವಾಗುತ್ತದೆ ಎನ್ನುತ್ತಾರೆ ಸುಧಾಕರ್ ಶೆಟ್ಟಿ ಅವರು.

ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂದು ತೊಡೆ ತಟ್ಟಿ ನಿಂತಂತಹ ಹುಡುಗನ ಕತೆಯಿದು. ಈ ಯುವಕ ಹಲವಾರು ವರ್ಷಗಳ ಕಾಲ ಹೊಸ ಹೊಸ ಉದ್ಯೋಗಗಳಿಗೆ ಕೈ ಹಾಕಿ ಸುಟ್ಟುಕೊಂಡು, ಆಡಿಕೊಳ್ಳುವವರ ಬಾಯಿಗೆ ಆಹಾರವಾದರು. ಸಾಲದಕ್ಕೆ ತಾವು ಮಾಡಿದ ಸಾಲ ಸೋಲಗಳಿಂದ ಮನೆಯವರ ಬೈಗುಳಕ್ಕೆ ತುತ್ತಾದರು. ಆದರೆ ಮರಳಿ ಯತ್ನವ ಮಾಡು … ಮಾತಿಗೆ ಕಟ್ಟುಬಿದ್ದ ಇವರು, ತಮ್ಮ ಸತತ ಪ್ರಯತ್ನದಿಂದ ಸೋತು ಗೆದ್ದಂತಹ ಬಾಝಿಗರ್ #ಸುಧಾಕರ್ ಅವರು. ರಾಸಾಯನಿಕ ಮುಕ್ತ ಸೊಳ್ಳೆ ಬತ್ತಿಯನ್ನು ಹುಟ್ಟು ಹಾಕಿ, ಅದಕ್ಕೆ ‘ ಗೋ ಕೃಪಾ ಅಗರಬತ್ತಿ’ ಎಂದು ಹೆಸರಿಟ್ಟರು. ಎಲ್ಲರಿಗೂ ರಾಸಾಯನಿಕ ಮುಕ್ತ ಸೊಳ್ಳೆ ಬತ್ತಿ ಸಿಗಬೇಕು ಎನ್ನುವ ಉದ್ದೇಶದಿಂದ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ಶಿವಮೊಗ್ಗದ ಸುತ್ತ ಮುತ್ತಲಿನಲ್ಲಿ ಸಾಕಷ್ಟು ಬೇಡಿಕೆಯನ್ನು ಸೃಷ್ಟಿಸಿದೆ.

This slideshow requires JavaScript.

 

 

ಅಗರಬತ್ತಿಯ ಆವಿಷ್ಕಾರ

ಈ ಅಗರಬತ್ತಿಯ ಆವಿಷ್ಕಾರಕ್ಕೆ ನನ್ನ ಅಕ್ಕನ ಮಗುವೇ ಕಾರಣ ಎಂದು ನಗುತ್ತ ಹೀಗೆ ಹೇಳುತ್ತಾರೆ, ‘ಅಕ್ಕನ ಮಗುವಿಗೆ #ಸೊಳ್ಳೆ ಕಚ್ಚಿ ಅಲರ್ಜಿಯಾಯಿತು, ಅದನ್ನು ನೋಡಿ ಸೊಳ್ಳೆ ಬತ್ತಿ ಹಚ್ಚುವಂತೆ ಮನೆಯಲ್ಲಿ ಹೇಳಿದೆ. ಈಗ ಬರುವ ಸೊಳ್ಳೆ ಬತ್ತಿಗಳಲ್ಲಿ ಸಾಕಷ್ಟು ರಾಸಾಯನಿಕ ಬಳಕೆಯಾಗುತ್ತಿದ್ದರಿಂದ ಮಗುವಿಗೆ ಅದು ಒಳ್ಳೆಯದಲ್ಲ ಎನ್ನುವುದು ತಿಳಿಯಿತು. ಆ ಸಮಯದಲ್ಲೇ ನಾನ್ಯಾಕೆ ದೇಸಿ  ಸಾಮಗ್ರಿಯನ್ನು ಬಳಸಿ, ರಾಸಾಯನಿಕ ಮುಕ್ತ ಅಗರಬತ್ತಿ ತಯಾರಿಸಬಾರದು ಎನ್ನುವ ಆಯೋಚನೆ ಬಂತು. ಆ ಯೋಚನೆಯನ್ನು ಬೆನ್ನಟ್ಟಿ ಹೋದಾಗ ಹುಟ್ಟಿಕೊಂಡಿದ್ದೆಈ ‘ ಗೋ ಕೃಪಾ ಅಗರಬತ್ತಿ’ ”ಎಂದು ತಮ್ಮ ಪ್ರಾಡಕ್ಟ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

 

 

ಮೊದಲು ಅಲ್ಪ ಜಮೀನಿನಲ್ಲಿ ಟೊಮೆಟೊ ಬೆಳೆದೆ, ಒಳ್ಳೆ ಫಸಲು ಕೂಡಾ ಬಂದಿತು, ಇನ್ನೇನ್ನುಅದನ್ನು ಮಾರುಕಟ್ಟೆಗೆ ತಲುಪಿಸಬೇಕು ಎನ್ನುವಷ್ಟರಲ್ಲಿ ಕೊರೋನಾ ಆರ್ಭಟ ಹೆಚ್ಚಾಯಿತು, ಎಲ್ಲ ಟೊಮೆಟೊ ಹಾಳಾಗಿ ಹೋದವು. ಹೀಗೆ ಒಂದಲ್ಲ ಒಂದು ಉದ್ಯೋಗದಲ್ಲಿ ನಷ್ಟವನ್ನೇ ಕಾಣುತ್ತಾ ಹೋದವನಿಗೆ ಜೀವನದ ಭರವಸೆಯೇ ಹೋಗಿತ್ತು. ನನ್ನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೇ ಜೀವನಕ್ಕೆ ತಿಲಾಂಜಲಿ ಹೇಳಿ ಬಿಡುತ್ತಿದ್ದರು. ಮನೆಯಲ್ಲೂ ಕೂಡಾ  ನನ್ನ ಮೇಲಿನ ನಂಬಿಕೆಯೂ ಕಳುಚಿ ಹೋಗಿತ್ತು. ಅಂತಹ ಸಮಯದಲ್ಲಿ  ಅಗರಬತ್ತಿ ತಯಾರಿಸುವುದಾಗಿ  ಮನೆಯಲ್ಲಿ ಮೊದಲು ಹೇಳಿದಾಗ ಗೋ ಸಗಣಿ ಬೇಡಾ… ಮನುಷ್ಯರ ಸೆಗಣಿ ಹಿಡಿ… ಎಂದು ಬಾಯಿಗೆ ಬಂದಂತೆ ಬೈದರು. ಅದಕ್ಕೆ ನಾನು ನಿರಾಸೆಗೊಳ್ಳಲಿಲ್ಲ. ದುರದೃಷ್ಟದಲ್ಲಿ ಅದೃಷ್ಟವನ್ನು ಹುಡುಕುತ್ತಾ ಹೋದವನು ನಾನು,  ಈಗ ಗೋ ಕೃಪಾ ಅಗರಬತ್ತಿ ನನ್ನ ಕೈ ಹಿಡಿದಿದೆ” ಎಂದು ತಾವು ಎದುರಿಸಿದ ಕಷ್ಟಗಳನ್ನು ನಗುತ್ತಲೇ ಹೇಳುತ್ತಾರೆ.

 

ಪ್ರಯೋಗ ಶುರು ಮಾಡುವ ಮೊದಲು ಸಾಕಷ್ಟು ಕಡೆ ಹೋಗಿ ರಾಸಾಯನಿಕ ಮುಕ್ತ ಅಗರಬತ್ತಿ ಇದೆಯೇ??? ಎಂದು ಹುಡುಕಿದೆ. ಎಲ್ಲಿಯೂ ನನಗೆ ಸಿಗಲಿಲ್ಲ. ನಾನೇ ಮೊದಲು ದೇಸಿ ರಾಸಾಯನಿಕ ಮುಕ್ತ #ಅಗರ_ಬತ್ತಿ ತಯಾರಿಸಲೇ ಬೇಕು ಎಂದು ಹಠಕ್ಕೆ ಬಿದ್ದೆ. ಸುಮಾರು ಎರಡು ವರ್ಷಗಳು ಈ ಪ್ರಯೋಗದಲ್ಲಿ ಕಳೆಯಿತು. ಮೂರನೇ ಬಾರಿ ಮಾಡಿದ ಪ್ರಯೋಗ ಯಶಸ್ವಿಯಾಯಿತು. ಇದರಲ್ಲಿ ಚಾಲಿ ಅಡಿಕೆ ಸಿಪ್ಪೆ, ಗಿಡ್ಡ ಗೋವಿನ ಸೆಗಣಿ, ತುಳಸಿ, ಬೇವು, ತುಪ್ಪ, ಲಿಂಬು, ಗುಗ್ಗಳ, ಜಾಠಮಸಿ ಬಳಸಿ ಮಾಡಿದಂತಹ ಅಗರಬತ್ತಿ. ನೈಸರ್ಗಿಕ ವಸ್ತುಗಳನ್ನು ಬಳಸಿ ಮಾಡಿದಂತಹ ಅಗರಬತ್ತಿಯಾದ್ದರಿಂದ ಮಕ್ಕಳಿಗೆ, ಅಸ್ತಮಾ ಇರುವ ರೋಗಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಸೊಳ್ಳೆ ಬತ್ತಿಯ ಇನ್ನೊಂದು ವಿಶೇಷತೆ ಏನೆಂದರೆ ಇದನ್ನು ಬಳಸುವುದರಿಂದ ಸೊಳ್ಳೆಗಳು ಸಾಯುವುದಿಲ್ಲ, ಬದಲಾಗಿ ಮನೆಯಿಂದ ಹೊರಕ್ಕೆ ಹೋಗುತ್ತವೆ.  ಈ ಅಗರಬತ್ತಿಯನ್ನು ಬಳಸುವಾಗ ಮನೆಯ ಬಾಗಿಲನ್ನು ತೆರೆದಿಡಬೇಕು, ಇಲ್ಲವಾದರೆ ಸೊಳ್ಳೆಗೆ ಹೊರಕ್ಕೆ ಹೋಗಲು ಸಾಧ್ಯವಾಗುವುದಿಲ್ಲ.

 

ಈ ಅಗರಬತ್ತಿಯಲ್ಲಿ  ರಾಸಾಯನಿಕ ಬಳಕೆ ಶೂನ್ಯವಾಗಿದೆ. ಇದನ್ನು ಬಳಸಿದವರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಕೆಲವು ಬ್ರಾಂಡ್ ಗಳು ಇದನ್ನು ಕೊಳ್ಳುವುದಾಗಿ ಮುಂದೆ ಬಂದಿದ್ದಾರೆ, ಆದರೆ ಬೇರೆಯವರ ಬ್ರಾಂಡ್ ಗೆ ಮಾರಿದರೆ ನನ್ನದು ಎನ್ನುವುದು ಏನು ಉಳಿಯುವುದಿಲ್ಲ. ಈಗಾಗಲೇ ಸಾಕಷ್ಟು ಖರ್ಚು ಮಾಡಿದ್ದೇನೆ. ಜನ ಇದನ್ನು ಬಳಸಿ, ಕೈ ಹಿಡಿದರೆ ನಾನು ಗೆದ್ದಂತೆ ಎಂದು ಉಸಿರು ಬಿಡುತ್ತಾರೆ.

ಸುಧಾಕರ್ ತಮ್ಮ ಮಾತನ್ನು ಮುಂದೊರೆಸಿ ‘ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ #ಗುಡ್ಡೇಕೊಪ್ಪದಲ್ಲಿ ಸೊಳ್ಳೆಬತ್ತಿ‌ ಉತ್ಪಾದನಾ ಘಟಕ ಆರಂಭಿಸಿದ್ದೇನೆ, ಸಾಮಾಜಿಕ ಜಾಲತಾಣಗಳ ಮುಖಾಂತರ ತಿಂಗಳಿಗೆ 50,೦೦೦ ಕ್ಕಿಂತಲೂ ಹೆಚ್ಚಿನ ಮೌಲ್ಯದ ಉತ್ಪನ್ನಗಳು ಮಾರಾಟವಾಗುತ್ತಿವೆ. ಮಲೆನಾಡಿನ ಜನರು ಸೇರಿದಂತೆ ಮುಂಬೈ, ಬೆಂಗಳೂರು, ಚೆನೈ ಮೊದಲಾದ ನಗರಗಳ ಗ್ರಾಹಕರಿಂದ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಬರುತ್ತಿದೆ. ಜನರ ಪ್ರೋತ್ಸಾಹ ನನಗೆ ಸಾಕಷ್ಟು ಉತ್ಸಾಹ ತುಂಬಿದೆ ಅನ್ನುತ್ತಾ ತಮ್ಮ ಮಾತನ್ನು ಮುಗಿಸುತ್ತಾರೆ. ಕಷ್ಟಪಟ್ಟು ದುಡಿಯುವ ಸುಧಾಕರ್ ನಂತಹ ಪ್ರತಿಭಾವಂತ ಯುವ ಉದ್ಯೋಗಿಗಳಿಗೆ ಗ್ರಾಹಕರೇ ಆಶ್ರಯದಾತರು. ಅವರ ಶ್ರಮಕ್ಕೆ ಫಲ ಸಿಗಲಿ ಎಂದು ಶುಭ ಹಾರೈಸುತ್ತದೆ ಆಕೃತಿಕನ್ನಡ.



(ಸುಧಾಕರ್ ಅವರ ರಾಸಾಯನಿಕ ಮುಕ್ತ ಅಗರಬತ್ತಿ ಹೇಗಿರುತ್ತೆ ಅನ್ನೋದು ನನಗೆ ಗೊತ್ತಿರಲಿಲ್ಲ, ಸುಮ್ಮನೆ ಜನರಿಗೆ ತಗೊಳ್ಳಿ ಎನ್ನುವುದಕ್ಕಿಂತ ನಾನು ಮೊದಲು ಅದನ್ನು ಬಳಸಿ ನೋಡಬೇಕೆಂದು ಸುಧಾಕರ್ ಅವರಿಗೆ ಆರ್ಡರ್ ಕೊಟ್ಟು ಅಗರಬತ್ತಿ ತರಿಸಿದೆ, ಸುಧಾಕರ್ ಅವರು ನಿರಂತರವಾಗಿ ನನ್ನ ಪ್ರತಿಕ್ರಿಯೆಗಾಗಿ ಕರೆ ಮಾಡುತ್ತಲೇ ಇದ್ದರು, ನಾನು ಯಾವುದೇ ಉತ್ತರ ಕೊಡಲಿಲ್ಲ. ಆದರೆ ಮೂರನೇ ವಾರ ನಾನೆ ಅವರಿಗೆ ಕರೆ ಮಾಡಿ ನಮ್ಮನ್ನೇ ಸೊಳ್ಳೆ ಮುಕ್ತವಾಗಿದೆ ಸುಧಾಕರ್ ಅವರೇ ಎಂದೆ. ಆ ಮಾತಿಗೆ ಅವರು ಉಬ್ಬಲಿಲ್ಲ ಬದಲಾಗಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕತೊಡಗಿದರು ‘ಮೇಡಂ, ಅಗರಬತ್ತಿ ಹೇಗೆನ್ನಿಸಿತು ?… ಏನಾದರೂ ಬದಲಾವಣೆ ತರಬೇಕೇ?…ತಪ್ಪಿದ್ದರೆ ನೇರವಾಗಿ ಹೇಳಿ ಸರಿಪಡಿಸಿಕೊಳ್ಳುವೆ’ ಎಂದರು ಸುಧಾಕರ್.

ಕಲಿಯಬೇಕು, ಸಾಧಿಸಬೇಕು ಎನ್ನುವ ತುಡಿತವನ್ನು ಸುಧಾಕರ್ ಅವರಲ್ಲಿ ನಾನು ಕಂಡೆ. ಕಷ್ಟ ಪಟ್ಟು ಮಾಡಿದ ‘ಗೋ ಕೃಪಾ ಅಗರಬತ್ತಿ’ನಿಜಕ್ಕೂ ಉತ್ತಮವಾಗಿದೆ, ಎಲ್ಲರೂ ಬಳಸಿ…ಎನ್ನುವುದರ ಜೊತೆಗೆ ಸುಧಾಕರ್ ಅವರಂತಹ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ… – ಶಾಲಿನಿ ಹೂಲಿ ಪ್ರದೀಪ್.)

ಈ ಅಗರಬತ್ತಿ ಖರೀದಿಸಲು 8123459190 ಸಂಪರ್ಕಿಸಬಹುದು.
ಇದರ ಬೆಲೆ : ೪೫ ರೂಪಾಯಿಗಳು ಮಾತ್ರ
ಇದರಲ್ಲಿ ೧೦ ಅಗರಬತ್ತಿಗಳಿರುತ್ತವೆ.

(ಸೂಚನೆ : ಇದನ್ನು ಬಳಸುವಾಗ ಬಾಗಿಲನ್ನು ತೆರೆದಿಡುವುದನ್ನು ಮರೆಯಬೇಡಿ)

************************

  • ಶಾಲಿನಿ ಹೂಲಿ ಪ್ರದೀಪ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW