ಜ್ಯೋತಿ ಸುನೀಲ್ ಕುಮಾರ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ತಿರುಪತಿಗೆ ನಾ ಹೋಗಿರಲು
ತಿರುಮಲೇಶನ ದರ್ಶಿಸಲು
ವರಪ್ರಸಾದ ತಂದಿರಲು
ಪರಿಪರಿಯಲಿ ಬೇಡಿರಲು
ಮನೆಗೆ ನೀವು ಬಂದರೆ
ಸನಿಹವು, ಇಲ್ಲ ತೊಂದರೆ
ಘನ್ನಮಹಿಮನ ಲಡ್ಡು ತಿಂದರೆ
ಶ್ರೀನಿವಾಸನ ವರವೇ ಆಸರೆ
ಅಂಡಜವಾಹನನ ಕ್ಷೇತ್ರ ಚೆನ್ನ
ಮಂಡೆಕೂದಲು ಸಮರ್ಪಿಸಿ ಮುನ್ನ
ಮುಂಡನ ಬಾಗಲು ದೇವ ಪ್ರಸನ್ನ
ಕಂಡೆ, ಜ್ಯೋತಿ ಸ್ವರೂಪನೇ ಹರಸೆನ್ನ
- ಜ್ಯೋತಿ ಸುನೀಲ್ ಕುಮಾರ್ – ಹೈದರಾಬಾದ್
