ಔಷಧೀಯ ಗುಣವಿರುವ ಅರಿಶಿನ ಮಹತ್ವ – ಸುಮನಾ ಮಳಲಗದ್ದೆ

ಅರಿಶಿನ ಒಂದು ಬಣ್ಣ ಮತ್ತು ರುಚಿಯನ್ನಷ್ಟೇ ಹೆಚ್ಚಿಸುವುದಿಲ್ಲ, ಬದಲಾಗಿ ಔಷಧಿ ಗುಣಗಳನ್ನು ಹೊಂದಿದೆ. ಅದರ ಕುರಿತು ನಾಟಿವೈದ್ಯರಾದ ಸುಮನಾ ಮಳಲಗದ್ದೆ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ….

ಅರಿಶಿನದಲ್ಲಿ ಅರಿಶಿನ: (ಹಳದಿ), ಕಸ್ತೂರಿ ಅರಿಶಿನ, ಅಂಬೆ ಅರಿಶಿನ, ಕಾಡು ಅರಿಶಿನ, ಕಪ್ಪು ಅರಿಶಿನ, ಬಿಳಿ ಅರಿಶಿನ ಮರದರಿಶಿನ ಇಷ್ಟು ಅರಿಶಿನ ನನಗೆ ಗೊತ್ತು. ಒಂದೊಂದು ಅರಿಶಿನದ ಬಣ್ಣವೂ ಬೇರೆ. ಅದರ ಔಷಧೀಯ ಗುಣಗಳು ಬೇರೆ ಬೇರೆ.

ಇದು ಅಹಾರದ ಬಣ್ಣಕ್ಕೆ ಮತ್ತು ರುಚಿಗೆ ಎರಡಕ್ಕೂ ಉಪಯೋಗಿಸುವ ಅರಿಶಿನ (ಹಳದಿ) ಮಾತ್ರ. ಜನಸಾಮಾನ್ಯರ ಬಳಕೆಯ ಅರಿಶಿನವನ್ನು ಮಾತ್ರ ಈ ಲೇಖನಕ್ಕೆ ಆಯ್ಕೆ ಮಾಡಿಕೊಂಡಿದ್ದೇನೆ.

ಫೋಟೋ ಕೃಪೆ : google

1) ಗಾಯವಾದ ತಕ್ಷಣ ರಕ್ತದ ಸೋರಿಕೆಯನ್ನು ತಡೆಯಲು ಅಥವಾ ಗಾಯವನ್ನು ಗುಣಪಡಿಸಲು ಅರಿಶಿನನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

2) ಅರಿಶಿನ ಪುಡಿಯನ್ನು ಅಥವಾ ಹಸಿ ಅರಿಶಿನವನ್ನು ಹಾಲಿನಲ್ಲಿ ಕುದಿಸಿ ಸ್ವಲ್ಪ ಬೆಲ್ಲ ಸೇರಿಸಿ ಕುಡಿದರೆ ಕಫ ಮತ್ತು ಮೈಕೈ ನೋವು ನಿವಾರಣೆಯಾಗುತ್ತದೆ.

3) ಅರಿಶಿನವು ನಂಜುನಿರೋಧಕ ಮತ್ತು ರೋಗ ನಿರೋಧಕ ಶಕ್ತಿ ಗುಣಗಳನ್ನು ಹೊಂದಿದೆ.

4) ಅರಿಶಿನದ ಬಳಕೆ ದೇಹವನ್ನು ಹೊಳೆಯುವಂತೆ ಮಾಡುತ್ತದೆ. ನಾನು ತಯಾರಿಸುವ ಸ್ನಾನದ ಸೋಪಿನಲ್ಲಿ ಅರಿಶಿನ ಇರುತ್ತದೆ.

5) ಬೆಳಿಗ್ಗೆ ಒಂದು ಲೋಟ ಹಾಲಿನೊಂದಿಗೆ ಅರ್ಧ ಟೀ ಚಮಚ ಅರಿಶಿನ ಮಿಶ್ರಣ ಮಾಡಿ ಕುಡಿಯುವುದರಿಂದ ದೇಹವು ಹೊಳಪು ಹೆಚ್ಚುತ್ತದೆ.

6) ಪ್ರತಿದಿನ ಅರಿಶಿನ ಸೇವನೆಯಿಂದ ದೇಹದಲ್ಲಿ ಹೆಚ್ಚುವರಿ ಕೊಬ್ಬಿನ ಸಂಗ್ರಹವು ಕ್ರಮೇಣ ಕಡಿಮೆಯಾಗುತ್ತದೆ.

7) ಅರಿಶಿನ ಬಳಕೆಯು ರಕ್ತವನ್ನು ಶುದ್ಧೀಕರಿಸುತ್ತದೆ.

8) ಅಡಿಗೆಯಲ್ಲಿ ಅರಿಶಿನ ಉಪಯೋಗದಿಂದ ಹೃದಯದ ತೊಂದರೆಗಳು ಕಂಡು ಬರುವುದಿಲ್ಲ.

9) ಸುಣ್ಣದೊಂದಿಗೆ ಅರಿಶಿನ ಮಿಶ್ರಣ ಮಾಡಿ ಲೇಪಿಸುವುದರಿಂದ ನೋವು ಕಡಿಮೆಯಾಗುತ್ತದೆ.

10) ಹಾಲಿನಲ್ಲಿ ಅರಿಶಿನ ಮಿಶ್ರಣ ಮಾಡಿ ಕುಡಿಯುವುದರಿಂದ ಕಿವಿ ಸಂಬಂಧಿತ ಸಮಸ್ಯೆಗಳು ನಿವಾರಣೆ ಆಗುತ್ತದೆ.

11) ಬಿಸಿ ಹಾಲನ್ನು ಸೇವಿಸಿದ ನಂತರ ದೇಹಬೆಚ್ಚಗಾಗುವಂತೆ ರಗ್ ಹೊದ್ದು ಮಲಗುವುದರಿಂದ ಶ್ವಾಸಕೋಶದಲ್ಲಿ ಉಂಟಾಗಿರುವ ಶೀತ ಗುಣವಾಗುತ್ತದೆ. ಚಳಿಗಾಲದಲ್ಲಿ ಇದರ
ಬಳಕೆಯು ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ.ನಾನು ತಯಾರಿಸುವ ಕಷಾಯ ಪುಡಿಯಲ್ಲಿ ಬಣ್ಣಕ್ಕೆ ಮತ್ತು ಆರೋಗ್ಯಕ್ಕೆ ಉಪಯೋಗಿಸುತ್ತೇನೆ.

12) ಹಾಲಿನಲ್ಲಿ ಅರಿಶಿನ ಮಿಶ್ರಣ ಮಾಡಿ ಕುಡಿಯುವ ಮೂಲಕ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ಅರಿಶಿನ ಅತೀವ ಸೇವನೆಯು ರಕ್ತದ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.ನಾನು ತಯಾರಿಸುವ ಶುಗರ್ ಮೆಡಿಸಿನ್ ನಲ್ಲಿ ಅರಿಶಿನ ಮತ್ತು ಕಸ್ತೂರಿ ಅರಿಶಿನವನ್ನು ಉಪಯೋಗಿಸುತ್ತೇನೆ.

13) ಕ್ಯಾನ್ಸರ್ ಬರದಂತೆ ತಡೆಗಟ್ಟಲು ಮತ್ತು ಕ್ಯಾನ್ಸರ್ ಬಂದ ನಂತರ ಇದು ಅಷ್ಟು ಪರಿಣಾಮಕಾರಿ ಇಲ್ಲದಿರಬಹುದು. ಆದರೆ ಒಂದು ಗೋಲಿ ಗಾತ್ರದ ಅರಿಶಿನದ ಉಂಡೆ ಮತ್ತು ಬೇವಿನ ಪುಡಿಯ ಉಂಡೆಯನ್ನು ಮುಂಜಾನೆ ಬರೀ ಹೊಟ್ಟೆಯಲ್ಲಿ ಸೇವಿಸುವುದರಿಂದ , ಕ್ಯಾನ್ಸರ್ ಜೀವಕೋಶಗಳನ್ನು ನಾಶ ಮಾಡುತ್ತದೆ.

14) ಅರಿಶಿನ ಮತ್ತು ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಕಷಾಯ ಮಾಡಿ ಸ್ವಲ್ಪ ಸ್ವಲ್ಪ ಕುಡಿಯುವುದರಿಂದ ಉರಿಮುತ್ರ ಗುಣವಾಗುತ್ತದೆ.

15) ಅರಿಶಿನ ಬೆಣ್ಣೆ ಸೇರಿಸಿ ಚರ್ಮದ ರೋಗಕ್ಕೆ ಹಚ್ಚಿದರೆ ಗುಣವಾಗುತ್ತದೆ.

16) ಪೆಟ್ಟಾಗಿ ರಕ್ತ ಹೆಪ್ಪುಗಟ್ಟಿದ ಭಾಗಕ್ಕೆ ಅರಿಶಿನ ಬೆಲ್ಲ ಸೇರಿಸಿ ಚನ್ನಾಗಿ ಅರೆದು ಪೇಸ್ಟ್ ಮಾಡಿ ಹಚ್ಚಿದರೆ ಕರಗಿ ರಕ್ತ ಸಂಚಾರ ಸರಿಯಾಗುತ್ತದೆ.

17) ಪಟಿಗಾರದ ಪುಡಿ ಮತ್ತು ಅರಿಶಿನ ಪುಡಿ ಸೇರಿಸಿ ತಯಾರಿಸಿ ದ ಔಷಧಿ ಕಿವಿ ಸೋರುವುದನ್ನು ಗುಣಪಡಿಸುತ್ತದೆ ಆದರೆ ಅನುಭವ ಇಲ್ಲದೇ ತಯಾರಿಸುವ ಸಾಹಸ ಬೇಡ.

18) ಹೆಣ್ಣುಮಕ್ಕಳು ಮುಟ್ಟಾದ ನಾಲ್ಕನೇ ದಿನ ಬೆಳಿಗ್ಗೆ ತಲೆಗೆ ಸ್ನಾನ ಮಾಡಿ ಕೂದಲು ಒಣಗುವುದರೊಳಗೆ ಅರ್ಧ ಚಮಚದಷ್ಟು ಅರಿಶಿನ ಪುಡಿ ಅರ್ಧ ಚಮಚದಷ್ಟು ಬೆಲ್ಲ ಸೇರಿಸಿ ತಿನ್ನುವುದರಿಂದ ಯಾವುದೇ ಗರ್ಭದ ಸಮಸ್ಯೆ ಬರುವುದಿಲ್ಲ.ಮೆನೋಪಾಸ್ ಸಹಜ ವಾಗಿ ಯಾವುದೇ ತೊಂದರೆಗಳು ಇಲ್ಲದೇ ನಿಲ್ಲುತ್ತದೆ.

19) ಬೆಲ್ಲ , ಸ್ವಲ್ಪ ಸುಣ್ಣ, ಅರಿಶಿನ ಸೇರಿಸಿ ಚನ್ನಾಗಿ ತಿಕ್ಕಿ ಗಂಟಲಿನ ಬಾವಿಗೆ ಹಚ್ಚಿದರೆ ಬಾವು ನೋವು ಮತ್ತು ಟ್ರಾನ್ಸಿಲ್ ಗುಣವಾಗುತ್ತದೆ.

20) ಬಿಸಿ ನೀರಿನಲ್ಲಿ ಕಾಲು ತೊಳೆದು ಎಳ್ಳೆಣ್ಣೆ ಯಲ್ಲಿ ಪುಡಿ ಸೇರಿಸಿ ಹಚ್ಚಿದರೆ ಬೆರಳ ಸಂಧಿಯಲ್ಲಿ ಆಗುವ ಹುಣ್ಣು ಗುಣವಾಗುತ್ತದೆ.

21)ನಿಂಬೆರಸ ಅರಿಶಿನ ಪುಡಿ ಸೇರಿಸಿ ಬಿಸಿ ಮಾಡಿ ಉಗುರಿಗೆ ಕಟ್ಟಿದರೆ ಉಗುರು ಸುತ್ತು ಗುಣವಾಗುತ್ತದೆ.

22)ಅರಿಶಿನ ಕೊಂಬು ಸುಟ್ಟು ಹೊಗೆ ಮೂಗಿನಲ್ಲಿ ತೆಗೆದುಕೊಂಡರೆ ಗೊಣ್ಣೆ ಗುಣವಾಗುತ್ತದೆ.

23)ಅರಿಶಿನ , ವಾಯು ವಿಳಂಗ, ಬೆಲ್ಲ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಉದರ ಕ್ರಿಮಿ ಗುಣವಾಗುತ್ತದೆ.

24) ಹಸಿ ಅರಿಶಿನವನ್ನು ಹುಣಸೆ ಸೋಪ್ಪಿನ ರಸದಲ್ಲಿ ತೈದು ತಣ್ಣಿರು ಸೇರಿಸಿ ಕುಡಿಯುವುದರಿಂದ ಸಿಡುಬು ಗುಣವಾಗುತ್ತದೆ. ಇದರ ಪೇಸ್ಟ್ ಅನ್ನು ಹಚ್ಚುವುದರಿಂದ ಸಿಡುಬಿನ ಕಲೆ ಗುಣವಾಗುತ್ತದೆ.

25) ರಾಗಿ ಹಿಟ್ಟು, ಅರಿಶಿನ, ಬೀಮಸೇನಿ ಕರ್ಪೂರ ಸೇರಿಸಿ ಕಷಾಯ ಮಾಡಿ ಕುಡಿದರೆ ನೆಗಡಿ ಗುಣವಾಗುತ್ತದೆ.

26) ಗೋಧಿ ಹಿಟ್ಟು ಅರಿಶಿನ ಸೇರಿಸಿ ಮೂಖಕ್ಕೆ ಪ್ಯಾಕ್ ಹಾಕಿದರೆ ಬೇಡದ ಕೂದಲು ಉದುರುತ್ತದೆ.

27) ಇಷ್ಟೆಲ್ಲಾ ಆರೋಗ್ಯ ಪ್ರಯೋಜನ ಹೊಂದಿರುವ ಉಪಯುಕ್ತ ಔಷಧಿ ಆಗಿದ್ದರೂ ಅರಿಶಿನವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಬಳಸಬೇಕು. ಅಳತೆ ಮೀರಿದರೆ ಆಪತ್ತು ಕಂಡಿತಾ‌.

28) ಹೆಚ್ಚು ಸೇವಿಸಿದರೆ ಕೂದಲು ಉದುರುವುದು ಮತ್ತು ಬಾಲ್ಯದಲ್ಲೇ ಕೂದಲು ಬಿಳಿಯಾಗುವುದು.

29) ಪಿತ್ತಕೋಶ ಸಮಸ್ಯೆ ಹೊಂದಿರುವ ವರು ಅರಿಶಿನ ಬಳಕೆ ಮಾಡುವುದನ್ನು ನಿಲ್ಲಿಸಬೇಕು.

30) ತೊನ್ನು ಇರುವವರು ಅರಿಶಿನ ಬಳಕೆಯನ್ನು ನಿಲ್ಲಿಸಬೇಕು.

ಇಷ್ಟೆಲ್ಲಾ ಅನುಕೂಲ ಅಥವಾ ಅನಾನುಕೂಲ ಅರಿಶಿನ ಶುದ್ಧ ವಾಗಿದ್ದರೆ ಮಾತ್ರ.

ಫೋಟೋ ಕೃಪೆ : google

ವಿಶೇಷ ಸೂಚನೆ :

ಈಗ ನಾವು ಮಾರುಕಟ್ಟೆಯಿಂದ ಖರೀದಿಸಿದ್ದು ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ಗ್ರಾಹಕರು ಮನೆಯಲ್ಲಿಯೇ ಸರಳ ಪರೀಕ್ಷೆಯನ್ನು ಮಾಡಬಹುದು. ಒಂದು ಟೇಬಲ್ ಸ್ಪೂನ್ ಅರಿಶಿನ ಪುಡಿಯನ್ನು ಪಾರದರ್ಶಕ ಗ್ಲಾಸ್ ನೀರಿನಲ್ಲಿ ಹಾಕಿ ಚೆನ್ನಾಗಿ ಬೆರೆಸಿ. ಅರಿಶಿನದ ಪುಡಿಯನ್ನು ಬೆರೆಸಿದ ಈ ಲೋಟ ನೀರನ್ನು ಒಂದು ಗಂಟೆಯವರೆಗೆ ಮುಟ್ಟದೆ ಬಿಡಿ. ನಂತರ ನೀವು ಪರಿಶೀಲಿಸಿದರೆ, ಸಂಪೂರ್ಣ ಚಮಚ ಅರಿಶಿನ ಪುಡಿ ಗಾಜಿನ ಕೆಳಭಾಗದಲ್ಲಿ ನೆಲೆಗೊಂಡಿದ್ದರೆ ಮತ್ತು ನೀರಿನ ಬಣ್ಣವು ಬದಲಾಗದೆ ಇದ್ದರೆ, ಅದು ಶುದ್ಧ ಅರಿಶಿನ ಪುಡಿಯಾಗಿದೆ. ಏಕೆಂದರೆ ಶುದ್ಧ ಅರಿಶಿನ ಪುಡಿ ನೀರಿನಲ್ಲಿ ಕರಗುವುದಿಲ್ಲ ಮತ್ತು ಕಲಬೆರಕೆ ಮಾಡಿದರೆ, ನೀರಿನ ಬಣ್ಣ ಹಳದಿಯಾಗಿರುತ್ತದೆ.
ಪುಡಿ ಕೆಂಡದಲ್ಲಿ ಹಾಕಿ ಸುಟ್ಟರೆ ಶುದ್ಧ ಅರಿಶಿನ ವಾಸನೆ ಬರುತ್ತದೆ.


  • ಸುಮನಾ ಮಳಲಗದ್ದೆ 
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW