ನಮ್ಮ, ಅಜ್ಞಾನ, ಅಹಂ, ಆನಾಚಾರ, ದುರಾಚಾರ, ತಪ್ಪು, ದುರ್ಬುದ್ಧಿ, ನೀಚತನ ಎಲ್ಲವನ್ನೂ ಬಿಟ್ಟು ಸನ್ಮಾರ್ಗದಲ್ಲಿ ಜೀವನ ನಡೆಸಿದರೆ ಜೀವನದಲ್ಲಿ ಅಮೃತಾವನ್ನು ಸವೆಯಬಹುದು, ವಚನಶ್ರೀ ಶಿವಕುಮಾರ ಪಾಟೀಲ ಅವರು ವಚನದ ಅರ್ಥ ತಿಳಿಸುತ್ತಿದ್ದಾರೆ, ತಪ್ಪದೆ ಮುಂದೆ ಓದಿ….
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,
ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ.
- ಬಸವಣ್ಣ
ನಮ್ಮ, ಅಜ್ಞಾನ, ಅಹಂ, ಆನಾಚಾರ, ದುರಾಚಾರ, ತಪ್ಪು, ದುರ್ಬುದ್ಧಿ, ನೀಚತೆ ಎಲ್ಲವನ್ನೂ ಬಿಡಬೇಕು, ಬಿಡಬೇಕು ಅಂದರೆ ಇವುಗಳನ್ನು ಮೊದಲು ತಿಳಿಯಬೇಕು, ಇವಗಳ ಕೆಟ್ಟ ಗುಣಗಳ ಅರಿವು ನಮಗಾಗಬೇಕೆಂದರೆ ಜ್ಞಾನವನ್ನು ಸಂಪಾದಿಸ ಬೇಕು.
ಕತ್ತಲೆಯ ದುಷ್ಟಪರಿಣಾಮಗಳು ಕತ್ತಲೆಯಲ್ಲಿ ಇವರಿಗೆ, ಬೆಳಕಿನ ಮಹತ್ವ ಅರಿಯದವರಿಗೆ ಕತ್ತಲೆಯ ನೂನ್ಯತೆಗಳು ತಿಳಿಯದು. ಜ್ಯೋತಿಯ ಬೆಳಕನ್ನು ಅರಿತಾಗ, ಕತ್ತಲೆಯನ್ನು ಅರಿಯಬಹುದು. ಅಸತ್ಯಗಳ ವಂಚನೆಗಳನ್ನು ತೊಡೆದುಹಾಕಬೇಕೆಂದರೆ, ಸತ್ಯದ ಅಮೃತವನ್ನು ಸವಿಯಬೇಕು.
ನೈಜ್ಯವಾದ ವಸ್ತುವಿನ ಗುಣ ದಿಂದ, ನಕಲಿ ವಸ್ತುಗಳ ಅವ ಗುಣಗಳನ್ನು ತಿಳಿಯಬಹುದು.
ಶರಣರ ನಡೆ ನುಡಿಗಳಿಂದ ನನ್ನ ಮನದ ಅಜ್ಞಾನ, ಕತ್ತಲೆ, ಅಸತ್ಯ ತಿಳಿಯಿತು. ಎಂಬ ಬಸವ ಮಾರ್ಗವನ್ನು ಎಲ್ಲ ಮಾನವರು ಆತ್ಮೀಯವಾಗಿ ಅವಲೋಕಿಸಿ ಶರಣರಾಗುವ ಪ್ರಯತ್ನ ಮಾಡಬೇಕು.
- ವಚನಶ್ರೀ ಶಿವಕುಮಾರ ಪಾಟೀಲ
