‘ಹೋರಾಟದ ಕಲಿ ಇಮ್ರಾನ್ ಖಾನರ ಹೆಜ್ಜೆ ಗುರುತುಗಳು’ಪುಸ್ತಕ ಬಿಡುಗಡೆ

ಲೇಖಕ ಸುಧಾಕರ್ ಎಸ್.ಬಿ ಬರೆದಿರುವ ಇಮ್ರಾನ್ ಖಾನ್ ರ ಬದುಕು ಮತ್ತು ಸಾಧನೆಯ ಕುರಿತಾದ “ಹೋರಾಟದ ಕಲಿ ಇಮ್ರಾನ್ ಖಾನರ ಹೆಜ್ಜೆ ಗುರುತುಗಳು” ಪುಸ್ತಕ ಬಿಡುಗಡೆ ಕಾರ್ಯಕ್ರಮ, ಸರ್ವರಿಗೂ ಸ್ವಾಗತ…

ನಿಯಾಜಿ ಎಂಬ ಬುಡಕಟ್ಟು ಜನಾಂಗದಲ್ಲಿ ಹುಟ್ಟಿ, ಕ್ರಿಕೆಟ್ ಆಟದಲ್ಲಿ ವಿಶ್ವಮಟ್ಟದ ತಾರೆಯಾಗಿ ಬೆಳಗಿ, ತನ್ನಮ್ಮ ಶೌಕತ್ ಖಾನಂ ಸ್ಮರಣಾರ್ಥ ಆಸ್ಪತ್ರೆಯನ್ನು ಕಟ್ಟಿ ಬಡವರ ಪಾಲಿನ ಆರಾಧ್ಯ ದೈವವಾಗಿ, ಪಾಕಿಸ್ತಾನದ ಹಾಲಿ ಪ್ರಧಾನಮಂತ್ರಿಯಾಗಿ ಚರಿತ್ರೆಯ ರೋಚಕ ಪುಟಗಳನ್ನು ಅಲಂಕರಿಸಿರುವ ಇಮ್ರಾನ್ ಖಾನ್ ರ ಬದುಕು ಮತ್ತು ಸಾಧನೆಯನ್ನು ಕುರಿತು ನನ್ನ ಆತ್ಮೀಯ ಗೆಳೆಯ ಸಾಸಲು ಸುಧಾಕರ್ ಎಸ್.ಬಿ ಬರೆದಿರುವ ಹಾಗೂ ಪ್ರಮಥ ಪ್ರಕಾಶನ ಪ್ರಕಟಿಸುತ್ತಿರುವ “ಹೋರಾಟದ ಕಲಿ ಇಮ್ರಾನ್ ಖಾನರ ಹೆಜ್ಜೆ ಗುರುತುಗಳು” ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮ ನಾಳೆ 27-10-2022 ಗುರುವಾರ ಸಂಜೆ 5:30 ಕ್ಕೆ ಕುವೆಂಪು ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು ಇಲ್ಲಿ ನಡೆಯುತ್ತಿದೆ.

ಅಧ್ಯಕ್ಷತೆ: ಶ್ರೀಮತಿ ಲೀಲಾದೇವಿ ಆರ್ ಪ್ರಸಾದ್, ಮಾಜಿ ಮಂತ್ರಿಗಳು, ಕರ್ನಾಟಕ ಸರ್ಕಾರ.

ಉದ್ಘಾಟನೆ : ಜಸ್ಟೀಸ್ ಎಚ್.ಎನ್. ನಾಗಮೋಹನದಾಸ್, ನಿವೃತ್ತ ನ್ಯಾಯಾಧೀಶರು, ಉಚ್ಛ ನ್ಯಾಯಾಲಯ, ಬೆಂಗಳೂರು,

ಪುಸ್ತಕ ಬಿಡುಗಡೆ: ಶ್ರೀ ರವೀಂದ್ರ ಭಟ್ಟ ಐನಕೈ, ಕಾರ್ಯನಿರ್ವಾಹಕ ಸಂಪಾದಕರು, ಪ್ರಜಾವಾಣಿ, ಬೆಂಗಳೂರು

ಪುಸ್ತಕ ಕುರಿತು : ಡಾ.ವಡ್ಡಗೆರೆ ನಾಗರಾಜಯ್ಯ

ನಿರೂಪಣೆ: ಡಾ.ಎ.ಆರ್.ಗೋವಿಂದಸ್ವಾಮಿ, ರಂಗತಜ್ಞ, ಚಲನಚಿತ್ರ ಹಾಗೂ ದೂರದರ್ಶನ ಕಲಾವಿದ, ಬೆಂಗಳೂರು. ಈ ಕಾರ್ಯಕ್ರಮದಲ್ಲಿ ನೀವು ದಯಮಾಡಿ ಬಿಡುವು ಮಾಡಿಕೊಂಡು ಭಾಗವಹಿಸಬೇಕಾಗಿ ಕೋರುತ್ತೇನೆ.


  • ಡಾ.ವಡ್ಡಗೆರೆ ನಾಗರಾಜಯ್ಯ – ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading