ಕವಿ ಅನಂತ ನಾಯಕ ಅವರ ಲೇಖನಿಯಲ್ಲಿ ಅರಳಿದ ‘ವರ್ಷಾಘಾತ’ ಕವನವನ್ನು ತಪ್ಪದೆ ಓದಿ…
ಬೆಚ್ಚನೆ ಬಿಸಿಲಿಗೆ ಬಿಚ್ಚುತ ರೆಕ್ಕೆಯ
ಗುಚ್ಚದಿ ಕುಳಿತಿರೆ ವಿಹಗಗಳು |
ಕಪ್ಪನೆ ಜಲಧರ ಹನಿಗಳ ಹನಿಸಲು
ಕ್ಷಿತಿಯಲಿ ವರ್ಷದ ಧಾರೆಗಳು ||1||
ತಂಪಿನ ಎಲರಿಗೆ ಕಲರವ ಬಾರದೆ
ಗಡಗಡ ನಡುಗಿದ ಹಕ್ಕಿಗಳು |
ಹರವಿನ ಎಲೆಗಳು ಭರ ಭರ ಬೀಸಲು
ಗಾಳಿಗೆ ಚದುರಿದ ಗೂಡುಗಳು ||2||
ವರುಣನ ಅವಕೃಪೆ ಕಾರಣ ಅರಿಯದ
ದಾರುಣ ಜಗಲಿಗೆ ಜೀವಿಗಳು |
ದಾಳಿಗೆ ನಲುಗಿದ ಒಟ್ಟಲು ಮರಿಗಳ
ಅದುರಿದ ಕೆಂಪನೆ ಅಧರಗಳು ||3||
ಮೂಡಣ ದಿಸೆಯಲಿ ಆರುಣನ ಕಾಣಲು
ಹಸಿರಲಿ ಅರಳಿದ ಮಲರುಗಳು |
ಧರಣಿಯ ಕಾವಲು ನಿರುತವು ಕಾಪುದೆ
ತರಣಿಯ ದಿನಚರಿ ಕರಣಗಳು ||4||
- ಅನಂತ ನಾಯಕ – ಲೇಖಕರು, ಸಾಹಿತಿಗಳು,
