ಎಲ್ಲರೂ ನನ್ನನ್ನು ಪ್ರೀತಿಸಬೇಕೆಂಬ ಆಶಯವಿಲ್ಲ, ನಾನು ಪ್ರೀತಿಸುವರು ನನ್ನ ತಸು ಗಮನಿಸಿದರೆ ಸಾಕಬೇಕೆಂಬ ಆಸೆ…ಡಾ.ಶ್ವೇತಾ ಪ್ರಕಾಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಎಲ್ಲಾವೂ ನನಗೆ ಬೇಕೆಂಬ
ಆಶಯವಿಲ್ಲ ನನಗೆ,
ನನ್ನ ಬಳಿ ಇದ್ದದ್ದು ದೂರ ಆಗದೆ ಇರಲಿ
ಎಂಬ ಆಸೆ ನನಗೆ.
ಬಯಸಿದ್ದೆಲ್ಲವೂ
ದೊರೆಯಬೇಕೆಂಬ ಆಶಯವಿಲ್ಲ ನನಗೆ,
ದೊರೆತದ್ದು , ದೂರವಾಗದಿರಲೆ೦ಬ
ಆಸೆ ನನಗೆ.
ದೂರ ಹೋದವರು ಮರಳಿ
ಬರಬೇಕೆಂಬ ಆಶಯವಿಲ್ಲ ನನಗೆ,
ಅವರೆಲ್ಲೆ ಇದ್ದರು
ಸಂತಸದಿಂದಿರಲೆ೦ಬ ಆಸೆ ನನಗೆ.
ಎಲ್ಲರೂ ನನ್ನನ್ನು ಪ್ರೀತಿಸಬೇಕೆಂಬ
ಆಶಯವಿಲ್ಲ,ನಾನು ಪ್ರೀತಿಸುವರು
ನನ್ನ ತಸು ಗಮನಿಸಿದರೆ
ಸಾಕಬೇಕೆಂಬ ಆಸೆ .
ತುಂಬ ದಿನ ಇರಬೇಕೆಂಬ ಆಶಯವಿಲ್ಲ ನನಗೆ
ಇರುವಷ್ಟು ದಿನ ಎಲ್ಲರ ಜೊತೆ
ನಗುನಗುತಾ ಬದುಕೆ೦ಬ ಆಸೆ ನನಗೆ.
- ಡಾ.ಶ್ವೇತಾ ಪ್ರಕಾಶ್
