ಡಿಸೆಂಬರ್ ಒಂದು ವಿಶ್ವ ಏಡ್ಸ್ ದಿನವೆಂದು ಆಚರಿಸುತ್ತಾರೆ, ಶಿಕ್ಷಕಿ, ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರು ಬರೆದ ಈ ಕವನವನ್ನು ತಪ್ಪದೆ ಮುಂದೆ ಓದಿ…
ಒಂದೇ ಒಂದು ಮಾತು ಆಲಿಸಿ ಬಿಡು ನನ್ನದು….
ಮತ್ತೆ ಎರಗುವೆಯಂತೆ ರಣಹದ್ದಿನಂತೆ
ಈ ಪರಿ ಹಸಿವು ನಿನಗೆ… ಒಳ್ಳೆಯದಲ್ಲ
ಸಾವಧಾನ
ಇಂದು ವಿಶ್ವ ಏಡ್ಸ್ ದಿನ
ಇದು ನಿನ್ನದೇ ದೇಣಿಗೆ ನನಗೆ
ಹಾಗೂ ನನ್ನಂತಹವರಿಗೆ ಮತ್ತು ನಿನಗೂ….
ಇಣುಕಿದ್ದರೆ ಆಗಲೇ ನೀನು
ಎದೆಯ ಪಂಜರದೊಳಗೆ
ಕಾಣುತ್ತಿತ್ತೇನೋ….ನಿನಗೂ….
ನನಗೂ ಹೇಳ ಬಿಡಲಿಲ್ಲ….
ನಿನಗೂ ಅರಿಯಬೇಕಿರಲಿಲ್ಲ
ಈಗಿರುವುದು ಒಂದೇ….ಆಗಿ
ನಾವು
ಕಾಯುತ್ತಾ ಸಾರುವುದು ಆ ಸಾವಿನ ನಿಲ್ದಾಣದ ಠಾವು
ಅಥವಾ ಬದುಕು ಬೇಕೆನಿಸಿದರೆ
ಸಹಿಸುವುದು ವಿಸ್ಮೃತಿಗೆ ನೋವು…
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು
