ಮಾನಸ….ಇದು ಮನಸಿನ ಮಾತು (ಭಾಗ-೩೪)

ಆಪ್ತಸಮಾಲೋಚನೆ ಮಾಡಿದಾಗ ನಮಗೆ ತಿಳಿದು ಬಂದದ್ದು ತಾಯಿ ಮಗಳಿಗೆ ಸ್ನೇಹಿತರ ಜೊತೆಗೆ ಮೂರು ದಿನ ಟ್ರಿಪ್ ಹೋಗಲು ಬೇಡವೆಂದಿದ್ದು ಮಗಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಮುಂದೇನಾಯಿತು ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಹರೆಯದ ಸುರಕ್ಷತೆ, ಸಲಿಗೆ ಅಮ್ಮಾ ಅಮ್ಮಾ… ನಾನು ಫ್ರೆಂಡ್ಸ್ ಜೊತೆ ಟ್ರಿಪ್ ಹೊಗ್ತೀನಿ ಅಮ್ಮಾ. ಯಾವ ಟ್ರಿಪ್ ಬೇಡ. ಓದುವಾಗ ಓದ್ಕೊಂಡಿರು ಮುಂದೆ ಎಲ್ಲಿಗೆ ಬೇಕಾದರೂ ಹೋಗಬಹುದು ಎಂದಳು ತಾಯಿ.

ಥೂ ಏನು ಕೇಳಿದರೂ ಬೇಡ, ಎಲ್ಲದಕ್ಕೂ ರಿಸ್ಟ್ರಿಕಷನ್ಸ್, ಏನುಕ್ಕೆ ಈ ಮನೆಯಲ್ಲಿ ಹುಟ್ಟಿದೆನೋ, ಯಾವುದಕ್ಕೂ ಸ್ವತಂತ್ರ ಇಲ್ಲ…. ಈ ಸಂಭಾಷಣೆ, ಒಬ್ಬ ತಾಯಿ ತನ್ನ ಮಗಳ ಬಗ್ಗೆ ಹೇಳಿದ್ದು. ಆಪ್ತಸಮಾಲೋಚನೆ ಮಾಡಿದಾಗ ನಮಗೆ ತಿಳಿದು ಬಂದಿದ್ದು ಮಧ್ಯಮ ವರ್ಗದ ಕುಟುಂಬದವರ ಸಮಸ್ಯೆ. ತಾಯಿ ಮಗಳು ನಮ್ಮಲ್ಲಿಗೆ ಬಂದರು. ಸಮಸ್ಯೆ ಏನೆಂದರೆ ಕಾಲೇಜು ಓದುವ ಮಗಳು ತನ್ನ ಸ್ನೇಹಿತರ ಜೊತೆಗೆ ಮೂರು ದಿನಗಳ ಕೇರಳಾ ಟ್ರಿಪ್ ಹೋಗುವುದಾಗಿ ಕೇಳಿದ್ದಳು, ತಾಯಿ ಬೇಡವೆಂದರು. ಅವಳ ತಂದೆ ದುಡಿಮೆಗಾಗಿ ದೂರದ ಊರಿನಲ್ಲಿ ನೆಲೆಸಿದ್ದು, ಶನಿವಾರ ಭಾನುವಾರ ಮನೆಗೆ ಬರುತಿದ್ದರು.

ತಾಯಿ ಮಗಳು ಇಬ್ಬರೇ ಮನೆಯಲ್ಲಿ, ತಾಯಿಗೆ ಆತಂಕ, ಕಾಲ ಸರಿಯಿಲ್ಲ, ಬೇಡ ಮಗಳೇ ಎಂದು ತಾಯಿಯ ಕಾಳಜಿ. ಅದಕ್ಕೆ ಮಗಳು, ಇನ್ನೂ ಎಲ್ಲಿದೀಯ ಅಮ್ಮ ನೀನು? ಯಾವ ಕಾಲದಲ್ಲಿದೀಯ? ಈಗಿನ ಕಾಲದಲ್ಲಿ ಹುಡುಗ ಹುಡುಗಿಯರು ಒಟ್ಟಿಗೆ ಓಡಾಡುತ್ತಿರುತ್ತಾರೆ. ಏನೂ ಆಗುವುದಿಲ್ಲ ಕಳುಹಿಸು ಎಂದು ದಂಬಾಲು ಬಿದ್ದಿದ್ದಳು.

ಅಪ್ಪನೂ ಹೇಳಿದ್ದಾಯಿತು ಪ್ರಯೋಜನಕ್ಕೆ ಬರಲಿಲ್ಲ. ಮಗಳು ಕಾಲೇಜಿಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತಳು. ಕೊನೆಯ ವರ್ಷದ ಬಿ ಎಸ್ ಸಿ ಯಲ್ಲಿ ಓದುತಿದ್ದವಳು, ಕಾಲೇಜು ಬಿಡುತ್ತೇನೆಂದಾಗ ತಾಯಿ ಮಗಳನ್ನು ನಮ್ಮಲ್ಲಿಗೆ ಕರೆದುಕೊಂಡು ಬಂದರು. ತಾಯಿ ಮಗಳು ಇಬ್ಬರಿಗೂ ಸಮಾಧಾನ ಹೇಳಿ ಕಳುಹಿಸಿದಾಗ ಮಗಳ ಮುಖದಲ್ಲೂ ತಾಯಿಯ ಮುಖದಲ್ಲೂ ನಗು ಕಂಡು ನಮಗೆ ಸಮಾಧಾನವಾಗಿತ್ತು.

ಹೆಣ್ಣು ಮಕ್ಕಳಾಗಲಿ, ಗಂಡುಮಕ್ಕಳಾಗಲಿ ಹರೆಯದಲ್ಲಿ ಅವರಿಗೆ ಯಾರ ಮಾತೂ ಬೇಡವೆನಿಸುತ್ತದೆ. ಯಾರ ಭೋದನೆಯೂ ಬೇಡವೆನಿಸುತ್ತದೆ. ಅಪ್ಪ ಅಮ್ಮನ ಮಾತನ್ನು ಕೇಳುವುದಿಲ್ಲ, ಅವರನ್ನು ಶತ್ರುಗಳ ರೀತಿ ನೋಡುತ್ತಾರೆ. ತಿಳಿ ಹೇಳಿದರೂ ಅವರಿಗೆ ಅರಿವಾಗುವುದಿಲ್ಲ. ಸ್ನೇಹಿತರ ಒಡನಾಟದಲ್ಲಿ ಇರುವುದರಿಂದ ಅವರ ಪ್ರಭಾವ ಹೆಚ್ಚಾಗಿ ಇರುತ್ತದೆ. ಕೆಲವೊಮ್ಮೆ ಅವರ ಬಲವಂತಕ್ಕೋ, ಇನ್ನೆಲ್ಲಿ ಸ್ನೇಹ ಮುರಿದುಬೀಳುತ್ತದೆ ಎಂದು ಭಯದಿಂದ ಇರುವುದು ಕೂಡ ಮನೆಯವರ, ತಂದೆ ತಾಯಿಯವರ ಮಾತು ಕೇಳದಿರುವುದು ಮುಖ್ಯವಾದ ಸಂಗತಿಗಳು.

ಹರೆಯದ ವಯಸ್ಸೇ ಹೇಳುವ ಹಾಗೆ ಗಂಡು ಮಕ್ಕಳು ಹಾಗು ಹೆಣ್ಣು ಮಕ್ಕಳಿಗೆ ಪರಸ್ಪರ ಆಕರ್ಷಣೆ ಇದ್ದೇ ಇರುತ್ತದೆ. ಸ್ನೇಹ ಎಂಬ ಪದಕ್ಕೆ ಬಹಳ ಮುಂದುವರೆದ ಅರ್ಥ ಬಂದು ಬಿಡುತ್ತದೆ. ಟ್ರಿಪ್, ಲಾಂಗ್ ಟೂರ್ ಎಂದು ಕಾಲೇಜಿಂದ ಹೊರಟಾಗ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ. ಕುಡಿತದ ಅಭ್ಯಾಸ ಇರುವವರಿಗೆ ಬಹಳ ಅಪಾಯಕ್ಕೆ ಎಡೆ ಮಾಡಿಕೊಡುವ ಸಂದರ್ಭಗಳು ಬರಬಹುದು.

ಈಗಿನ ಯುವಪೀಳಿಗೆಯವರು ಗಂಡು ಹೆಣ್ಣು ಎಂಬ ಭೇದವಿಲ್ಲದೆ ಕುಡಿಯುವುದು, ಸಿಗರೇಟ್ ಸೇವನೆ ರೂಢಿ ಆಗಿಬಿಟ್ಟಿದೆ. ಕುಡಿದ ಅಮಲಿನಲ್ಲಿ ಏನೂ ಅರಿವಿಲ್ಲದೆ, ಮೈ ಮೇಲೆ ಪರಿಜ್ಞಾನವಿಲ್ಲದೆ ಒಬ್ಬರ ಮೇಲೆ ಒಬ್ಬರು ಬಿದ್ದಿರುತ್ತಾರೆ. ಈ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಅಪಾಯವಿರುತ್ತದೆ. ಇದೆಲ್ಲ ಅನುಭವದಿಂದ ತಂದೆ ತಾಯಿ ಮಕ್ಕಳನ್ನು ಹೊರಗೆ ಕಳುಹಿಸಲು ಇಷ್ಟ ಪಡುವುದಿಲ್ಲ. ಮಕ್ಕಳು ಸಹ ಇದನ್ನು ಅರ್ಥ ಮಾಡಿಕೊಳ್ಳಬೇಕು. ತಮ್ಮ ಜೀವನ ಹಾಳು ಮಾಡಿಕೊಳ್ಳುವುದು ಬೇಡವೆಂದು ತಂದೆ ತಾಯಿಯ ಕಾಳಜಿ ಹಾಗು ಸುರಕ್ಷತೆ. ಮಕ್ಕಳು ಅವರ ಪ್ರೀತಿಯ ಸಲಿಗೆ ತೆಗೆದುಕೊಂಡು ಜೀವನ ಹಾಳು ಮಾಡಿಕೊಳ್ಳಬಾರದು.

ಹರೆಯ ವಯಸ್ಸು ದಾಟಿ ಪ್ರೌಢಾವಸ್ಥೆಗೆ ಬಂದಾಗ ಜೀವನದ ಮೌಲ್ಯಗಳು ಅರ್ಥವಾಗುತ್ತಾ ಬರುತ್ತದೆ. ತಂದೆ ತಾಯಿಯ ಏಕೆ ನಮಗೆ ಹಾಗೆ ಹೇಳುತಿದ್ದರು, ನಮಗೆ ಸ್ನೇಹಿತರ ಜೊತೆ ಸಲಿಗೆಯಿಂದ ಇರಲು ಬಿಡುತ್ತಿರಲಿಲ್ಲ. ಕ್ಷಣಿಕ ಸುಖಕ್ಕಾಗಿ ಜೀವನ ಹಾಳು ಮಾಡಿಕೊಳ್ಳುವ ಯುವ ಪೀಳಿಗೆಯವರು ಬಹಳ ಅರ್ಥ ಮಾಡಿಕೊಳ್ಳುವುದು ಇದೆ.

ವಯಸಿನ ಸಹಜ ಮನೋಕಾಮನೆಗಳಿಗೆ ಜೀವನ ಹಾಳು ಮಾಡಿಕೊಳ್ಳುವುದು ಎಂದರೆ ಹಣದ ಅಭಾವ, ಸಮಾಜದಲ್ಲಿ ಎಲ್ಲರಂತೆ ತಾನೂ ಇರಬೇಕು ಎನ್ನುವ ಬಯಕೆಗಳು, ಹೈ ಸೊಸೈಟಿ ಜೀವನ ಶೈಲಿ, ಆಕರ್ಷಕ ಕಾಣಬೇಕೆಂದು ಅರೆ ಬೆತ್ತಲೆಯ ಬಟ್ಟೆ ಧರಿಸುವುದು, ಸೌಂದರ್ಯ ವೃದ್ದಿಸಲು ಸೌಂದರ್ಯ ವರ್ಧಕಗಳ ಬಳಕೆಗೆ ಮನೆಯಲ್ಲಿ ಹಣ ಸಿಗದಿದ್ದಾಗ ಹಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದರಾಗಿ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಕೆಲವರು ಮಾತ್ರ ಹೀಗೆ ಇರುತ್ತಾರೆ. ಎಲ್ಲರಿಗೂ ಒಂದೇ ಭಾವವಿರುವುದಿಲ್ಲ. ಕೆಲವರು ಮನೆಯ ಪರಿಸ್ಥಿತಿ ಅರ್ಥ ಮಾಡಿಕೊಂಡು ತಾವಾಯಿತು ತಮ್ಮ ಪಾಡಾಯಿತು ಅನ್ನುವ ಹಾಗೆ ಕೆಲವರಿರುತ್ತಾರೆ.

ಹರೆಯದ ಮಕ್ಕಳಿಗೆ ಮನೆಯಲ್ಲಿ ನಿರ್ಬಂಧನೆಗಳು ಇರುವುದು ಮುಖ್ಯವಾಗಲು ಹಲವು ಕಾರಣಗಳಿವೆ. ಈ ನಿರ್ಬಂಧಗಳು ಮಕ್ಕಳ ಭವಿಷ್ಯ ಮತ್ತು ಸುಸ್ಥಿರ ಬೆಳವಣಿಗೆಗಾಗಿ ಸಹಾಯಕವಾಗುತ್ತವೆ. ಮಕ್ಕಳಿಗೆ ತಾವು ಎದುರಿಸಬಹುದಾದ ಅಪಾಯಗಳನ್ನು ಅರಿಯುವ ಸಾಮರ್ಥ್ಯ ಕಡಿಮೆಯಾಗಿರುತ್ತದೆ. ನಿರ್ಬಂಧಗಳು ಅವರನ್ನು ಅನಾಹುತಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ನಿರ್ಬಂಧಗಳು ಮಕ್ಕಳಲ್ಲಿ ಶಿಸ್ತಿನ ಗುಣವನ್ನು ಬೆಳೆಸುತ್ತವೆ. ಇದು ಅವುಗಳಲ್ಲಿ ಶ್ರೇಯಸ್ಸು, ಸಮಯ ಪಾಲನೆ ಮತ್ತು ಚಿಂತನ ಶಕ್ತಿ ವೃದ್ಧಿಸಲು ನೆರವಾಗುತ್ತದೆ ಮತ್ತು ಮಕ್ಕಳಿಗೆ ಮೌಲ್ಯ ಸಜಿತ ಜೀವನ ಮಾರ್ಗವನ್ನು ಕಲಿಸುತ್ತದೆ ಮತ್ತು ನಮ್ಮ ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಅರ್ಥಮಾಡಿಸುತ್ತವೆ.

ನಿರ್ಬಂಧಗಳು ಮಕ್ಕಳಲ್ಲಿ ಆತ್ಮ ವಿಶ್ವಾಸ್ ಗುಣವನ್ನು ಉಂಟುಮಾಡುತ್ತವೆ, ಇದು ಮುಂದೆ ಅವರ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ. ಅದನ್ನು ಅವರಿಗೆ ವಿವರಿಸಿ ಹೇಳಬೇಕು. ನಿರ್ಬಂಧಗಳ ಮೂಲಕ, ಮಕ್ಕಳು ತಮ್ಮ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬೇಕೆಂಬುದನ್ನು ಕಲಿಯುತ್ತಾರೆ. ಸರಿಯಾದ ಮಾರ್ಗದಲ್ಲಿ ನಿಯಮಿತ ಜೀವನವು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅವರು ಜೀವನದಲ್ಲಿ ಜೀವನೋಪಾಯಕ್ಕಾಗಿ ಏನನ್ನು ಮಾಡಬೇಕೆಂಬುದರ ಬಗ್ಗೆ ಸ್ಪಷ್ಟತೆಯನ್ನು ಹೊಂದಿರುತ್ತಾರೆ.

ಇದರ ಜೊತೆ ನಿರ್ಬಂಧಗಳು ಕಠಿಣವಾಗಬಾರದು. ಅವು ಪ್ರೀತಿಪೂರ್ವಕವಾಗಿ ಮತ್ತು ಮಕ್ಕಳ ವಯಸ್ಸಿಗೆ ತಕ್ಕಂತೆ ಇರಬೇಕು, ಇದರಿಂದಾಗಿ ಅವರು ಸಹಜವಾಗಿ ಆಯ್ಕೆಗಳನ್ನು ಕಲಿಯುತ್ತಾರೆ ಹಾಗು ಮಾರ್ಗದರ್ಶನಕ್ಕಾಗಿ ಪೋಷಕರನ್ನೇ ಅವಲಂಬಿಸುತ್ತಾರೆ, ತಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರೌಢಿಮೆ ಬರುವವರೆಗೂ.

ಮಾನಸ….ಇದು  ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

1 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW