ಕವಿ ನಾಯಿ ಗುತ್ತಿ ಅವರ ಒಂದು ವಾಕ್ಯದ ಸಾಲಿನಿಂದ ಪ್ರೇರಣೆಗೊಂಡು ಪತ್ರಕರ್ತ ವೈ ಜಿ ಅಶೋಕ್ ಕುಮಾರ್ ಅವರ ಲೇಖನಿಯಲ್ಲಿ ಮೂಡಿ ಬಂದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಬಾ ಮತ್ತೊಮ್ಮೆ
ಭೇಟಿಯಾಗೋಣ
ಮೊದಲ ಸಲ ಸಿಕ್ಕಿದಂತೆ
ನಿನ್ನ ಹೆಸರು ಹೇಳು
ನಾ ಕೇಳುವೆ
ಮೊದಲ ಕಣ್ಣ
ನೋಟದಂತೆ
ನೋಡಿದೊಡನೆ ಮಿಂಚಿನಂತೆ
ತಿರುತಿರುಗಿ ನೋಡಿದಂತೆ
ಬಾ ಮತ್ತೊಮ್ಮೆ
ಭೇಟಿಯಾಗೋಣ
ಮೊದಲ ಬಾರಿ ಸಿಕ್ಕಂತೆ
ನಾನು ನನ್ನ
ಹೆಸರು ಹೇಳುವೆ
ನೀನು ನಿನ್ನ ಹೆಸರು ಹೇಳು
ಹೊಸದಾಗಿ ಪ್ರೀತಿ ಮೊಳಕೆಯೊಡೆದಂತೆ
ನಮ್ಮಿಬ್ಬರ ಪೂರ್ವಾಪರ
ಗೊತ್ತಿಲ್ಲದಂತೆ
ಬಾ ಮತ್ತೊಮ್ಮೆ ಭೇಟಿಯಾಗೋಣ
ಮೊದಲ ಸಲದಂತೆ
ನಾನು ನನ್ನ ಹೆಸರು ಹೇಳುವೆ
ನೀ ನಿನ್ನ ಹೆಸರು ಹೇಳು
ಆದರೆ
ಮತ್ತೆ ಸುಳ್ಳು
ಮಾತ್ರ ಹೇಳಬೇಡ
- ವೈ ಜಿ ಅಶೋಕ್ ಕುಮಾರ್ -ಪತ್ರಕರ್ತರು , ಲೇಖಕರು
