ಅಮ್ಮನ ಮಾತು – ರೂಪೇಶ್ ಪುತ್ತೂರು

ಅಪ್ಪನ ವಿನಿಯೋಗದ ನಂತರ, ಅಮ್ಮ ನನ್ನ ಜೊತೆ ಇದ್ದಾರೆ. ಕೆಲವೊಮ್ಮೆ ಚಿಕ್ಕ ಮಕ್ಕಳ ಹಠ, ಕೆಲವೊಮ್ಮೆ ಎಟಕದಾದಂತಹಾ ಮಾತುಗಳು. ರೂಪೇಶ್ ಪುತ್ತೂರು ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಜೀವನದಲ್ಲಿ ಅತ್ಯಂತ ಶ್ರೀಮಂತಿಕೆ ಇರುವುದು ಪ್ರೀತಿಯಲ್ಲಿ, ಸ್ನೇಹದಲ್ಲಿ , ನಮ್ಮವರು ಎಂದು ಕ್ಷಮಿಸುವುದರಲ್ಲಿ. ದ್ವೇಷ ಎಂಬುವುದು ದರಿದ್ರತೆಯ ಪ್ರತೀಕ.

ನಾವು ಯಾರನ್ನಾದರೂ ದ್ವೇಷಿಸುತ್ತಿದ್ದಲ್ಲಿ, ಅವರ ಪ್ರೀತಿಯೂ ನಮ್ಮನ್ನ ಕ್ರೋದಿತವಾಗಿಸುತ್ತದೆ. ನಾವು ಒಬ್ಬರನ್ನು ಪ್ರೀತಿಸುತ್ತಿದ್ದರೆ , ಅವರು ನೀಡುವ ನೋವುಗಳಲ್ಲೂ- ಗಾಯಗಳಲ್ಲೂ ಬರೇ ಪ್ರೀತಿ ಮಾತ್ರ ಅನುಭವವಾಗುತ್ತದೆ.

ನಮಗೆ ಕೆಲವೊಂದರ ಮೇಲೆ ತೀವ್ರ ಪ್ರೀತಿ ಬರುವುದಕ್ಕೆ ಕಾರಣ ಅದನ್ನು (ಜೀವ/ನಿರ್ಜೀವವ) ನ್ನು ಅಷ್ಟೊಂದು ಸಹಿಸಿ, ವೇದನಿಸಿ, ತ್ಯಾಗದಿಂದ ಶ್ರಮಿಸಿ, ಹೃದಯ ಕೊಟ್ಟು ಪಡೆದು/ಗಳಿಸಿದ್ದರಿಂದ ಆಗಿರಬಹುದು.

ಕೆಲವೊಂದರ ಮೇಲೆ ಅಷ್ಟೊಂದು ದ್ವೇಷ ಬರುವುದು ಅದ (ಜೀವ/ನಿರ್ಜೀವವ)ನ್ನು ಅಷ್ಟೊಂದು ಪ್ರೀತಿಸಿದರೂ, ಅದರಿಂದ ಹೃದಯಕ್ಕೆ ಬರೇ ವೇದನೆಗಳು, ಯಾತನೆ -ಶೋಕ ಮಾತ್ರ ಉಡುಗೊರೆಯಾಗಿ ಲಭಿಸಿದ್ದು ಆಗಿರಬಹುದು.

ಒಬ್ಬರನ್ನು ಇಷ್ಟಪಡುವುದಕ್ಕಿಂತ ಅತ್ಯಂತ ವೇಗವಾಗಿ ಯಾವತ್ತೂ ಅವರನ್ನು ಇಷ್ಟಪಡದಂತಹಾ ವೈರತ್ವ ತಕ್ಷಣ ಹುಟ್ಟಿ ಅವರನ್ನು ದ್ವೇಷಿಸಲು ವೇಗೋತ್ಕರ್ಷವಾಗಿ ಕಿಂಚಿತ್ ಸಮಯದಲ್ಲಿ ಸಾಧ್ಯವಾಗುತ್ತದೆ.

ಸ್ನೇಹ ನಷ್ಟವಾದವರ ರೋಗವೇನೆಂದರೆ..
ಕೆಲವೊಮ್ಮೆ ಮೌನ
ಕೆಲವೊಮ್ಮೆ ಏಕಾಂಗಿತನ
ಅದಿಲ್ಲದಿದ್ದರೆ … ಹಗೆತನ!!!!

ನಾವು ಪ್ರೀತಿಸುವವರು ನಿಮ್ಮಿಂದ ವಿನಃ ಕಾರಣ ದೂರವಾದರೆ, ಅಥವಾ ಅವಗಣಿಸಿದರೆ , ಅವರಿಗೆ ಕೊಡಬೇಕಾದ ವೈಭವಮಾನ್ಯ ಉಡುಗೊರೆ ಅದು ಮೌನ. ಅದೇ ಸಮಯದಲ್ಲಿ ನಮ್ಮಲ್ಲಿ ಏಕಾಂಗಿತನ ಉಂಟಾಗುತ್ತದೆ, ಅಲ್ಲಿ ನಾವು ನಮ್ಮನ್ನೂ, ಪ್ರಕೃತಿಯನ್ನೂ, ಜೀವನ ಸಹಜತೆಯನ್ನು ಅರಿಯಲು ಪ್ರಯತ್ನಿಸಬೇಕು ಆವಾಗ ಸಾಮಾಜಿಕ ಚಿಂತನೆ ನಾವರಿಯದೆ ನಮ್ಮಲ್ಲಿ ಹುಟ್ಟುತ್ತದೆ.

ಅದೇ ಹಗೆತನ ಉತ್ಪತ್ತಿಯಾದರೆ, ಅದು ತುಂಬಾ ಸಮಸ್ಯೆ ಉಂಟುಮಾಡುತ್ತದೆ. ಆದ್ದರಿಂದ ಉದ್ಭವವಾಗುವ ಯಾವುದೇ ಸಮಸ್ಯೆಗೆ ಪರಿಹಾರ ಕಂಡು ಹುಡುಕುವುದು ತುಂಬಾ ಕ್ಲಿಷ್ಟಕರ. ಆದ್ದರಿಂದ ಮೌನ ಹಾಗೂ ಏಕಾಂಗಿತನದ ಸಾಮ್ರಾಜ್ಯದ ಒಳಿತನ್ನು ನಮ್ಮದಾಗಿಸುವುದು ಬುದ್ದಿವಂತಿಕೆ…

ಹೀಗೆ ಅಮ್ಮನ ಮಾತುಗಳನ್ನು ಕೇಳಲು ಅದೇನೋ ಒಂದು ಆನಂದ…..
ಆ ಸ್ವಾರ್ಥದಲ್ಲಿ….

ನಿಮ್ಮವ ನಲ್ಲ
ರೂಪು


  • ರೂಪೇಶ್ ಪುತ್ತೂರು 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading