ಶೇಕ್ಸ್ಪಿಯರ್ ಹೆಂಡತಿ ಮನೆಯ ಛಾಯಾಚಿತ್ರಗಳು – ಡಾ.ಸ್ವಾಮಿ ಎಚ್ ಆರ್

ನಮ್ಮ ದೇಶದಲ್ಲಿ ಪೂರ್ವಜರ ವೈಯಕ್ತಿಕ ಬದುಕಿನ ಮನೆಯನ್ನು ಸಂರಕ್ಷಿಸಿರುವ ಒಂದು ಸಣ್ಣ ದಾಖಲೆ, ಬರವಣಿಗೆ ಹೊರತುಪಡಿಸಿದರೇ ಬೇರೆ ಯಾವುದು ಅವರಿಗೆ ಸಂಬಂಧಿಸಿದ ವಸ್ತುಗಳು ಕಾಣಸಿಗದಿರುವುದು ಬೇಸರದ ಸಂಗತಿ. ಲೇಖಕ ಡಾ.ಸ್ವಾಮಿ ಎಚ್ ಆರ್ ಅವರ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದ ಶೇಕ್ಸ್ಪಿಯರ್ ಹೆಂಡತಿ ಮನೆಯ ಚಿತ್ರಗಳು ಮತ್ತು ಮಾಹಿತಿ ಓದುಗರ ಮುಂದಿದೆ….

ವಿಲಿಯಂ  ಶೇಕ್ಸ್ಪಿಯರ್ (William Shakespeara) ಮನೆ ನೋಡಿಕೊಂಡು ಹೊರಡುವಾಗ ಇವರ ಹೆಂಡತಿ ಆನೀ ಹಾಥವೇ (Anne Hathaway’s) ಬಗ್ಗೆ ಅಷ್ಟೇನೂ ಮಾಹಿತಿ ತಿಳಿದಿಲ್ಲವಾದ್ದರಿಂದ ಅಲ್ಲಿನ ಸ್ವಯಂ ಸೇವಕರನ್ನು ಕೇಳಿದಾಗ ಇಂದು ಇದೇ ಊರಿಗೆ ಸೇರಿರುವ ಅಂದಿನ ಅವರ ಮನೆಯನ್ನೂ ಕೂಡ ಜೋಪಾನವಾಗಿ ಕಾಪಾಡಿಕೊಂಡಿದ್ದೇವೆ, ಬರೀ ಹತ್ತು ನಿಮಿಷದ ಪ್ರಯಾಣ ಹೋಗಿ ಎಂದಾಗ ಸೋಜಿಗವೆನಿಸಿತು.
ನಮ್ಮ ದೇಶದಲ್ಲಿ ಶೇಕ್ಸ್ಪಿಯರ್ ನ ಕಾಲಮಾನದ ಯಾವುದೇ ಕವಿಗಳ,ಅವರ ಪೂರ್ವಜರ ವೈಯಕ್ತಿಕ ಬದುಕಿನ ಮನೆಯನ್ನು ಸಂರಕ್ಷಿಸಿರುವ ಒಂದು ಸಣ್ಣ ದಾಖಲೆ ಬರವಣಿಗೆ ಹೊರತುಪಡಿಸಿ ಇಲ್ಲದಿರುವುದು ಬೇಸರದ ಸಂಗತಿ. ಆದರೆ ಈ ದೇಶದ ಜನ ಓದಿಗೆ , ಸಾಹಿತ್ಯಕ್ಕೆ ಇಷ್ಟು ಮಹತ್ವ ಕೊಡಲು ಮುಕ್ತವಾದ ಶಿಕ್ಷಣವೇ ಇರಬೇಕೆನಿಸುತ್ತದೆ. ಶೇಕ್ಸ್ಪಿಯರ್ ಪೂರ್ವಜರ ವೃತ್ತಿ, ಕುರಿ ಚರ್ಮ ಹದಮಾಡಿ ಉಣ್ಣೆಯಲ್ಲಿ ವಿವಿಧ ಬಗೆಯ ಉಡುಗೆಗಳನ್ನು ತಯಾರಿಸುವ ಮಾರುವ ಕಸುಬಾಗಿತ್ತು .

This slideshow requires JavaScript.

 

ಅದೇ ರೀತಿ ಇವರ ಹೆಂಡತಿ Anne Hathaway ಮನೆ ನೋಡಿದಾಗ ಇವರ ತಂದೆ ಕೂಡ ಕುರಿ ಸಾಕಣೆ ಉಣ್ಣೆನೆಯ್ಯುವ ,, ವ್ಯವಸಾಯಮಾಡಿ ಬದುಕುವ ಸಮುದಾಯದವರಾಗಿದ್ದರೆಂಬುದನ್ನು ಅಲ್ಲಿ ನ ಗೈಡ್ ಮನವರಿಕೆ ಮಾಡಿದರು ,,.. ಸಾಕಷ್ಟು ವಿಶಾಲವಾದ, ವೈವಿಧ್ಯಮಯವಾದ ಮರ ಗಿಡಗಳ ಹಚ್ಚಹಸಿರಿನ ನಡುವೆ ಶತ ಶತಮಾನಗಳಿಂದ ಆ ಗುಡಿಸಲು ಅಳಿಯದೆ ಉಳಿದಿರುವುದು ನಂಬಲಾಗುತ್ತಿಲ್ಲ…ನನ್ನ ಬಾಲ್ಯದ ಗುಡಿಸಲ ಮನೆಯಂತೆಯೇ ಇದೂ ಕೂಡ ಗೋಡೆಗೆ ಕೆಸರು ,ಮರದ ಕೊಂಬೆಗಳನ್ನು ಸೇರಿಸಿ ಕಟ್ಟಿರುವರು , ಮೇಲೆ ಮೆದೆ ಹುಲ್ಲುನ್ನೆ ಹಾಕಿದ್ದಾರೆ.
…ಈ ಮನೆ ಗುಡಿಸಲಾದರೂ ಮಹಡಿಯಿಂದ ಕೂಡಿದೆ ಆಗಿನ ಕಾಲದಲ್ಲಿ ಇವರು ಶ್ರಿಮಂತರೇ ..ಮನೆ ಸುತ್ತುತ್ತಾ ಇರುವಾಗಲೇ ನನ್ನ ಹೆಂಡತಿ Anne ರ ಬಗ್ಗೆ ಓದುತ್ತಾ ಇವರು ಮದುವೆ ಆದಾಗ Anne ಗೆ 26 ವರ್ಷ.. ಆದರೆ ವಿಲಿಯಂ ಗೆ 18 ಅಂತೆ .ಚರ್ಚ್ ನಲ್ಲಿ ಮದುವೆ ಆಗುವಾಗ ಆಕೆ ಆಗಲೇ pregnant ಆಗಿದ್ದರಂತೆ.. ..ಎಂಬ ಪ್ರಶ್ನೆಗೆ ..ನಾನು ಇಂಗ್ಲಿಷ್ ಮೇಷ್ಟ್ರು ಅಲ್ಲದಿರುವುದರಿಂದ.ಹೆಚ್ಚು ಓದಿಲ್ಲ ..ರವಿ ಮೂಲ ,ಕವಿಗಳ ಮೂಲ .. ಎಂದು.. ಒಟ್ಟಿನಲ್ಲಿ ಷೆಕ್ಸಪಿಯರ್ ಸಾಯೋಕಾಲದಲ್ಲಿ ಆತನ ಹೆಂಡತಿ ಜೋತೆಲೇ ಇದ್ದರಂತೆ… ಎನ್ನುತ್ತಾ..ಅವರ ಕೈತೋಟದಲ್ಲಿ ತಮ್ಮನ ಕುಟುಂಬ ದೊಂದಿಗೆ ಹಸಿರು ಸೇಬು ತಿನ್ನುತ್ತಾ . Anne ಅವರನ್ನು ನೆನೆದೆವು…

  • ಡಾ.ಸ್ವಾಮಿ ಎಚ್ ಆರ್ (ಹಿರಿಯ ಸಾಹಿತಿಗಳು, ಲೇಖಕರು, ಬರಹಗಾರರು )

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW