ಜೇನು, ಬಿದಿರಿನ ತವರು ತೇಗ ಬೀಟಿಯ ಆವಾಸ ಮಧುರ ಭಾವಗಳ ಸೆಲೆಯೀ ವನ…ಕವಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಬಿಡುಸ್ವಾರ್ಥ, ಪಡೆ ಬಾಳಿಗರ್ಥ
ಕುರುಡು ಕಾಂಚಾಣದ ಬೆನ್ನ ಬಿಟ್ಟು
ನೆಟ್ಟು ಪೋಷಿಸಿ ಗಿಡಮರಗಳ
ಉಳಿಸೋಣ ನದಿಗಳು ತವರ
ಮೃಗಪಕ್ಷಿಗಳಾಗರವ ಮರಳಿಸಿ
ಸಂತಸದಿ
ತಾಯ ಋಣವ ಸಂದಾಯ
ಮಾಡಿ ಬಿಡೋಣ
ನಿಶ್ಚಿಂತ ನಾಳೆಗಳಿಗಾಗಿ
ಅರಣ್ಯವೆಮ್ಮ ಸಂಪದ
ಮಳೆಯ ಆಕರ
ವನ್ಯಸಸ್ಯಗಳ ತವರು
ಗಂಧ ಚಂದನಗಳ ಬೀಡು
ಋಷಿಮುನಿಗಳ ಸಾಧನಾ ಭೂಮಿ
ಸೌಂದರ್ಯದ ತಾಣ
ಮೃಗಯಾ ವಿನೋದಗಳ
ವಿಹಾರ ತಾಣ
ಜೇನು, ಬಿದಿರಿನ ತವರು
ತೇಗ ಬೀಟಿಯ ಆವಾಸ
ಮಧುರ ಭಾವಗಳ ಸೆಲೆಯೀ ವನ
ಸಂರಕ್ಷಣೆ ನಮ್ಮ ಹೊಣೆ
ಉಳಿಸುವುದು ನಮ್ಮ ಜಾಣ್ಮೆ
ಹಾಕೋಣ ಅರಣ್ಯ ಸಂಪತ್ತಿಗೆ ಮಣೆ
ಸುಖವಾದ ನಾಳೆಗಳ ದಿನಗಳಿಗೆ
- ಶಿವದೇವಿ ಅವನೀಶಚಂದ್ರ – ಕವಿಯತ್ರಿ, ಕೊಡಗು
