ಅರವಿಂದ ಕುಲಕರ್ಣಿಯವರ ಆ ದಿನಗಳ ಸವಿ ಸವಿ ನೆನಪುಗಳು

ಆಗ ಮೊಬೈಲ್, ಟಿವಿ ಇಲ್ಲದ ಕಾಲ. ದೇಶದ ವಾಣಿಜ್ಯ ಬ್ಯಾಂಕು ಗಳು ಗ್ರಾಮೀಣ ಭಾಗದಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಹಿಂದೇಟು ಹಾಕುತ್ತಿದ್ದ ಸಮಯ. ಈ ಕಷ್ಟವನ್ನು ಮನಗಂಡು ಆಗಿನ ಪ್ರದಾನ ಮಂತ್ರಿಗಳು ದೇಶದ ತುರ್ತು ಪರಿಸ್ಥಿತಿಯ ಕಾಲದಲ್ಲಿ  ಗ್ರಾಮೀಣ ಜನರ ಅನುಕಲಕ್ಕಾಗಿ ಗ್ರಾಮೀಣ ಬ್ಯಾಂಕುಗಳನ್ನು ಹುಟ್ಟು ಹಾಕಿದರು. ಹಾಗೇ ಅನೇಕ ರಾಜ್ಯಗಳಲ್ಲಿ ವಿವಿಧ ಹೆಸರಿನಲ್ಲಿ ಅನೇಕ ಭಾಗಗಳಲ್ಲಿ ಗ್ರಾಮೀಣ ಬ್ಯಾಂಕುಗಳು ಪ್ರಾರಂಭವಾದವು. ಅದೇ ಸಮಯದಲ್ಲಿ ನಮ್ಮ ಭಾಗದ ಮಲಪ್ರಭಾ ನದಿ ಹೆಸರಿನ ಮಲಪ್ರಭಾ ಗ್ರಾಮೀಣ  ಬ್ಯಾಂಕು ಒಂದು.

ಇದೇ ಸಂರ್ಭದಲ್ಲಿ ನನಗೆ ಮಳೆ ಕಲ್ಲೂರು  ಶಾಖೆಗೆ  ಹಾಜರಾಗಲು ನೇಮಕಾತಿ ಆದೇಶ ಬಂದಿತ್ತು.  ನಮ್ಮ ತಂದೆಯವರು  ಈ ಹಳ್ಳಿ ಎಲ್ಲಿದೆ ನೋಡಿದೆಯಾ? ಎಂದು ಕೇಳಿದರು. ನಾನೂ ಕರ್ನಾಟಕ ರಾಜ್ಯದ ನಕಾಶೆ ತರಿಸಿ ಹುಡುಕಿ ಇಂತಲ್ಲೆ ಇದೆ ಅಂತಾ ಖಾತ್ರಿ ಪಡಿಸಿದೆ. ಈ ಊರಿಗೆ ಹೋಗಬೇಕು ಅಂದರೆ ಮೂರು ಬಸ್ಸು ಹತ್ತಿ ನಡುವೆ ಒಂದು ಟೆಂಪೋ ಇಳಿದು  ಈ ಊರನ್ನು ತಲುಪಬೇಕು. ತಂದೆಯವರು ನಮ್ಮ ಊರಿನ ಯಾರಿಗೋ ಅಲ್ಲಿ ಬೀಗರಿದ್ದಾರೆ ಅವರಿಗೆ ಅವರು ದೂರದ ಸಂಬಂಧಿ. ಈ ಮಾಹಿತಿ ಪಡೆದು ಅವರಿಗೆ ಪತ್ರ ಬರೆದು ಕೊಟ್ಟು ನಮ್ಮ ಹುಡುಗನಿಗೆ ಸಹಾಯ ಮಾಡಿ ಅಂತಾ ವಿನಂತಿಸಿದರು.  ಈ ಪತ್ರ ಎಷ್ಟು ಅನುಕೂಲ ಆಯಿತೋ ಬಿಟ್ಟಿತೋ ಅದು ಬೇರೆ ವಿಷಯ. ಯಾಕೆಂದರೆ ಈಗಾಗಲೆ ನಮ್ಮ ಬ್ಯಾಂಕಿನ ಮೂರು ಜನ ಸಿಬ್ಬಂದಿ ಒಂದು ಮನೆಯಲ್ಲಿ  ವಾಸವಾಗಿದ್ದರು. ಅದು ಒಂದು ಜನತಾ ಮನೆ. ಖಾಲಿ ಇದ್ದದರಿಂದ  ಪಂಚಾಯತಿ ಅವರು ಅದನ್ನು ನಮಗೆ ಕೊಟ್ಟಿದ್ದರು. ನಾನು ಅದರಲ್ಲಿ ಕೂಡಿದೆ. ಅದು ಹೆಳಿ ಕೇಳಿ ಗ್ರಾಮೀಣ ಭಾಗ. ಎಲ್ಲ ಸೌಲಭ್ಯದ ಕೊರತೆ. ತಾಲೂಕಿನಿಂದ 15 ಕಿ.ಮೀ ದೂರ.ಬೆಳಿಗ್ಗೆ ಒಂದು ಬಸ್ಸು. ಸಾಯಂಕಾಲ 7 ಗಂಟೆಗೆ ಒಂದು ಬಸ್ಸು. ಊರಲ್ಲಿ ಯಾರ ಹತ್ತಿರವೂ ಮೋಟಾರ ಸಾಯಿಕಲ್ ಇರಲಿಲ್ಲ. ಇನ್ನು ರೋಡು ಡಾಂಬರು ಕಾಣದ ಕೆಂಪು ಧೂಳಿನಿಂದ ಕೂಡಿದ ಕಚ್ಚಾ ರಸ್ತೆ. ಊರು ಸಣ್ಣದು. ಕುಡಿಯುವ ನೀರಿಗಾಗಿ ಹ್ಯಾಂಡ್ ಬೋರೆ ಗತಿ. ಒಂದು ಪೋಸ್ಟ್ ಆಫೀಸ್ ಅಲ್ಲಿ ಒಂದು ಫೋನು . ನಮಗೆ ಲೈನ್ ಸಿಕ್ಕರೆ ಮಾತು ಇಲ್ಲದಿದ್ದರೆ ಫೋನು ತಿರಿಗಿಸಿದ್ದೆ ಲಾಭ. ಎಲ್ಲ ಊರುಗಳಲ್ಲಿ ಬೇರೆ ಯಾವ ಗುಡಿ ಇರದಿದ್ದರೂ ಮಾರುತಿ ಗುಡಿ ಇರುತ್ತದೆ.ಅದರಂತೆ ಈ ಊರಿನಲ್ಲಿ ಒಂದು ಸಣ್ಣ ಮಾರುತಿ ಗುಡಿ ಇದೆ. ಊರಿನಲ್ಲಿ ಸಣ್ಣ ಸಣ್ಣ ಚಹಾದ ಅಂಗಡಿ.ಅಲ್ಲಿ ಸಿಗುವದು ಚಹಾ, (ಅದು ಹಾಲು ಕಡಿಮೆ ಇರುವ ಕೆಂಪು ಬಣ್ಣದ ಮುಂಜಾನೆ ತಯಾರು ಮಾಡಿದ)ಮತ್ತು ಚುನಮರಿ , ಅತ್ಯಂತ ಖಾರ ಇರುವ ಮೀರ್ಚಿ. ಅಂಗಡಿಯಲ್ಲಿ ಕಟ್ಟಿಗೆಯ ಬಾಕು, ಮುಂದೆ ಟೇಬಲ್. ಮುಂದೆ,ಲ್ಲ ಗೌವ್ ಎನ್ನುವ ನೊಣ. ಚಹಾ ಕುಡಿದದ್ದು ಆದರೂ ಇನ್ನೂ ಬೀಡಿ ಸೇದುತ್ತಾ ಕುಳಿತ ಜನ. ನಾವು ಕೆ.ಟಿ ಗೇ ಆರ್ಡರ್ ಮಾಡಿದರೆ  ಹೆಚ್ಚಿಗೆ ಸಕ್ಕರೆ ಹಾಕಿ ಮಾಡಿ ಕೊಡುವವರು. ಅಂದರೆ ಅದು ಛಲೋ ಆಗುತ್ತದೆ ಅಂತ ಅವರ ಕಲ್ಪನೆ.

ನಾವೆಲ್ಲ ಸಿಬ್ಬಂದಿ ಮದುವೆ ಆಗದವರು ವಂದೇ ಮನೆಯಲ್ಲಿ ಇರುವದು ಮತ್ತು ನಾವೇ ಅಡಿಗೆ ಮಾಡಿಕೊಳ್ಳುವದು. ಒಂದು ದಿನ ಉಪ್ಪು ಹೆಚ್ಚು ಒಂದು ದಿನ ಖಾರ ಹೆಚ್ಚು. ಪ್ರಯೋಗ.

ಮುಂದೊಂದು ದಿನ ಸರಿಯಾಗಿ ಅಡಿಗೆ ಮಾಡಬಹುದು ಅನ್ನುವ ವಿಶ್ವಾಸದೊಂದಿಗೆ ಹೊಸ ಹೊಸ ತಪ್ಪುಗಳು. ನಾವು ಮಾಡಿದ್ದು ನಾವೇ ತಿನ್ನಬೇಕು ಅಂತಾ ಕೀಟಲೆ ಮಾಡುವ ಮಿತ್ರ ಆಚಾರಿ

ರೂಮಿನಲ್ಲಿ ಒಂದು ರೇಡಿಯೋ,ಅದರಲ್ಲಿ ಕ್ರಿಕೇಟ್ ಕಾಮೆಂಟರಿ.ವಿವಿಧ ಭಾರತೀಯ ಹಿಂದಿ ಚಿತ್ರ ಗೀತೆಗಳು. ಅದನ್ನೇ ಎಲ್ಲರೂ ಕೇಳುವದು. ಆದರೂ ಎಲ್ಲ ಕಡೆ ಸಂತೋಷ, ಹುರುಪು.ಗ್ರಾಮದಲ್ಲಿ ನಮಗೆ ಬಹಳ ಗೌರವ. ಆದರ, ಉಪಚಾರಕ್ಕೆ ಏನೂ ಕೊರತೆ ಇಲ್ಲಾ. ಹೆಚ್ಚಿನವರು ಅನಕ್ಷರಸ್ಥ ಗ್ರಾಹಕರು. ಈಗಲೂ ಹಾಗೇ ಇದೆ . ಗ್ರಾಹಕರ ಹಣತುಂಬುವ,ಹೀಂದಕ್ಕೆ ಪಡೆಯುವ  ಚಲನ್ ನಾವೇ ಬರೆಯಬೇಕು.

ಹೀಗಿರಲಾಗಿ ಒಂದು ದಿನ ಆಕಸ್ಮಿಕವಾಗಿ ಬೆಂಗಳೂರಿನಿಂದ ಇಬ್ಬರು  ಅಧಿಕಾರಿಗಳು ನಮ್ಮ ಶಾಖೆಗೆ ಬೆಳಗಿನ ಬಸ್ಸಿನಲ್ಲಿ  ಪರಿವೀಕ್ಷಣೆ ಸಲುವಾಗಿ ಬಂದರು. ಬಂದವರೇ “ಏನು ಧೂಳು ರಸ್ತೇರಿ ಇದು” ಅನ್ನುತ್ತ ಫ್ಯಾನು ಹಾಕಿರಿ ಮಾರಾಯರೇ ಅಂದರು . ನಾವು ” ಕರಂಟ್ ಇಲ್ಲರಿ ಸರ್ ” .

ಇರಲಿ ಅನ್ನುತ್ತಾ ಸುಧಾರಿಸಿಕೊಳ್ಳುತ್ತಾ ಕರ್ಚೀಫಿನಿಂದ ಮುಖ ವರಸಿಕೊಳ್ಳುತ್ತ inspection  ಪ್ರಾರಂಭ ಮಾಡಿದರು . ನಾವು ಯಥಾಪ್ರಕಾರ ಟಿಫಿನ್ ತುಗೊಳ್ಳ್ರಿ ಸರ್ ಅಂತಾ ಹೇಳಿ . ಚುನಮರೀ , ಮಿರ್ಚಿ  ಮತ್ತು ಕೆಂಪು ಚಹಾ ತರಿಸಿ, ಆತಿಥ್ಯ ಮಾಡಿದೆವು. ಏನು ಮಾಡುವುದು ಸರ್ ಇಲ್ಲಿ  ಸಿಗುವದು  ಇದೆ ಒಂದು ಅಂತ ಬಾಯೂಪಚರ ಮಾಡಿದೆವು. ಅವರಲ್ಲಿ ವಬ್ಬರಿಗೆ ಶೌಚಕ್ಕೆ ಹೋಗಬೇಕಾಗಿತ್ತು .ಇಲ್ಲಿ

ಟಾಯ್ಲೆಟ್ ಎಲ್ಲಿದೆ? ಎಂದು ಕೇಳಿದರು.

ಸರ್, ಇಲ್ಲಿ ಇಲ್ಲ…

ಅಂದರೆ??

ಸರ್,ಇಲ್ಲಿ ಹೊರಗಡೆ ಹೊಲದಲ್ಲಿ ಹೋಗಬೇಕು.

ಹೌದಾ?

ನಮ್ಮ ಸಿಪಾಯಿ ಜೊತೆ ಮಾಡಿ ಅವರನ್ನು ಕಳಿಸಿದೆವು

ಆಗ ಹೊಲದಲ್ಲಿ ಗೋದಿ ರಾಶಿ ಸಮಯ, ಎಲ್ಲಾ ಕಡೆ ಜನ. ಆದರೂ ನಮ್ಮ ಸಿಪಾಯಿ ಏನೋ ವ್ಯವಸ್ತಾ ಮಾಡಿ ಸಾಹೇಬರ ಕಾರ್ಯಕ್ರಮ ಮುಗಿಸಿಕೊಂಡು ಬಂದ. ಕೈ ವರಶಿಕೊಳ್ಳುತ್ತ, ಮತ್ತೊಮ್ಮೆ ಹೋಗುವದು ಬಂದರೆ ಹೇಗೇ ಎಂದು ಚಿಂತೆ ಮಾಡುತ್ತ (ಮಿರ್ಚಿ ,ಮಂಡಕ್ಕಿ ಕಣ್ಣ ಮುಂದೆ ಬಂದಿರಬಹುದು)  ಬಂದವರೇ ಸಾಹೇಬರು

ಇಲ್ಲಿ ಮುಂದಿನ ಬಸ್ಸು ಯಾವಾಗ ಬರುತ್ತದೆ. ??

ಸಾಯಂಕಾಲ 7. ಗಂಟೆಗೆ ಸರ್

ಮತ್ತೆ ಈಗಲೇ ಹೋಗಬೇಕು ಹೇಗೆ ಮಾಡುವದು

ಸರ್ inspection ??

ಅದನ್ನ ಈಗಾಗಲೇ ಮುಗಿಸಿ ಆಯಿತು

ನಮ್ಮ ಮ್ಯಾನೇಜರ್ ಏನೋ ಪ್ರಯತ್ನ ಮಾಡಿ  ಒಂದು ಟಾಂಗಾ ಗಾಡಿ  ವ್ಯವಸ್ಥಾ ಮಾಡಿ ತಾಲೂಕಿಗೆ  ಕಳಿಸಿ ಕೊಡುವ ವ್ಯವಸ್ಥಾ ಮಾಡಿದರು.

ಹೋಗುವಾಗ ಸಾಹೇಬರು ನಮ್ಮನ್ನು ಉದ್ದೇಶಿಸಿ

You are all brave persons ” ಅಂತಾ ಹೇಳಿ ಅಲ್ಲಿಂದ ಹೊರಟು ಹೋದರು.

ನಮಗೂ ಅವತ್ತು ಅನಿಸಿತು ನಾವು ಗಟ್ಟಿಗರೇ ಇರಬೇಕು ಅಂತ.

ಆಗ ಅನುಕೂಲ ಕಡಿಮೆ ಇರಬಹುದು. ಆದರೆ ಸ್ನೇಹಕ್ಕೆ ಕೊರತೆ ಇರಲಿಲ್ಲ. ಜನ ಮುಗ್ಧರು ಪ್ರಾಮಾಣಿಕರು, ನಮಗೆ ಬಹಳ ಗೌರವ ಕೊಡುವವರು. ನಾವೂ ಕೂಡ ಅಷ್ಟು ಅನುಕೂಲ ಕಡಿಮೆ ಇದ್ದರೂ ಬಹಳ ಸಂತೋಷ ನೆಮ್ಮದಿಯಿಂದ enjoy ಮಾಡಿದೆವು. ಈಗ ಬಸ್ಸುಗಳು ಓಡಾಡುತ್ತವೆ. ಸರಕಾರವೇ ಶೌಚಾಲಯ ನಿರ್ಮಾಣಕ್ಕೆ ಅವಕಾಶ ಕೊಟ್ಟಿದ್ದಾರೆ. ಈಗ ಗ್ರಾಮೀಣ ಬ್ಯಾಂಕು ಗ್ರಾಮೀಣ ಭಾಗದಲ್ಲಿ ನಮ್ಮ ದೇಶದ ಜನರ ಜೀವನಾಡಿ ಆಗಿವೆ. ಈ  ಕರೋನಾ ಅವಧಿಯಲ್ಲಿ ಪ್ರಧಾನ ಮಂತ್ರಿ ಯವರ ನೇರ ಹಣ ವರ್ಗಾವಣೆ ಕಾರ್ಯಕ್ರಮದಲ್ಲಿ  ರೈತರಿಗೆ  ರೂ 2000 ಮತ್ತು 500 ರೂಪಾಯಿ ಬಟವಾಡೆ ಮಾಡುತ್ತಿವೆ.

ಈಗ ಭೌತಿಕ ಅನುಕೂಲಗಳು ಹೆಚ್ಚಾಗಿವೆ.ಆದರೆ ಪರಿಸರ ,ನಿಸರ್ಗ ಸೌಂದರ್ಯ ಮೊದಲಿನಂತೆ ಇವೆಯೇ ??

Screenshot-2020-04-29-at-10.31.18

ಲೇಖನ : ಅರವಿಂದ ಕುಲಕರ್ಣಿ

ak.shalini@outlook.com

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW