‘ಅವ್ವ…ಅವಳು’ ಕವನ – ಎಮ್ಮಾರ್ಕೆ

ಅವ್ವನಿಗಾಗಿ ಮಹಾಂತೇಶ ರಾಮಪ್ಪ ಕುಂಬಾರ ಅವರು ಬರೆದ ಒಂದು ಪುಟ್ಟ ಭಾವಪೂರಿತ ಒಂದು ಪದ್ಯ, ವಿಶ್ವ ಅವ್ವ೦ದಿರ ದಿನದ ಶುಭಾಶಯಗಳು….

ನವಮಾಸವು ನೊಂದು
ನಮ್ಮನು ಭುವಿಗೆ ತಂದು
ಅತಿ ಹರ್ಷಗೊಂಡವಳು,

ಮಗುವ ನಗುವ ನೋಡಿ
ತನ್ನೆಲ್ಲ ನೋವನು ದೂಡಿ
ಈ ಜಗವನೇ ತೂಗಿದವಳು,

ಅವ್ವ….ಅಕ್ಷರಕ್ಕೆ ಸಿಗದವಳು
ಅವ್ವ….ಅಳತೆ ಮೀರಿದವಳು,
ಅವ್ವ…ಮೊದಲ ಗುರುವಾದವಳು
ಅವ್ವ…ಮಮತೆ ಮಡಿಲಾದವಳು,
ಅವ್ವ….ಮಗುವಿಗೆ ಮುಗಿಲಾದವಳು
ಅವ್ವ…ಎಲ್ಲದಕ್ಕೂ ಮಿಗಿಲಾದವಳು.


  • ಮಹಾಂತೇಶ ರಾಮಪ್ಪ ಕುಂಬಾರ (ಎಮ್ಮಾರ್ಕೆ)

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW