“ಇದು ನಮ್ಮ ನಿಮ್ಮದೇ ಬದುಕಿನ ತಲ್ಲಣಗಳ ಕವಿತೆ. ಆಂತರ್ಯವ ಬೆಳಗಿ ಬೆಳಕಾಗಿಸುವ ಬೆಳಕಿನ ರಿಂಗಣಗಳ ಭಾವಗೀತೆ. ಜೀವ-ಜೀವನಗಳು ಭಾರವಾಗುವುದು, ಭಾವ-ಭಾವನೆಗಳು ಬರಡಾಗುವುದು ಹೊರಗಿನ ಅಂಧಕಾರದಿಂದಲ್ಲ, ಒಳಗಿನ ವಿಕಾರಗಳಿಂದ. ಅರ್ಥಪೂರ್ಣ ಚಿತ್ರಕ್ಕೆ ಔಚಿತ್ಯಪೂರ್ಣ ಸಾಲುಗಳು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ತೊರೆದರಷ್ಟೇ ಹಗೆ ಮೇಲರಿಮೆ
ಸಂಕುಚಿತತೆ ಅಹಮಿಕೆ ಬಗಲು
ತೆರೆದೀತು ಬದುಕಿನ ಬಾಗಿಲು
ಕಂಡೀತು ಆಸ್ಥೆ ಅಂತಃಕರಣ
ಅರಿವು ಆಸರೆಗಳ ಮುಗಿಲು.!
ಮೆರೆದರಷ್ಟೇ ಪ್ರೀತಿ ಮಮಕಾರ
ಸ್ನೇಹ ಸಾಮರಸ್ಯದ ಮಡಿಲು
ಕಂಡೀತು ಬೆಳಕಿನ ಮೆಟ್ಟಿಲು
ಬೆಸೆದು ಬೆಳಗೀತು ಬಾಂಧವ್ಯ
ಬೆಸುಗೆ ಬಂಧಗಳ ಒಡಲು..!
- ಎ.ಎನ್.ರಮೇಶ್. ಗುಬ್ಬಿ.