‘ಬಾಳ ರಥ’ ಕವನ – ಹರಿಹರ ಬಿ ಆರ್

ಕವಿ, ಲೇಖಕರು ಆಗಿರುವ  ಹರಿಹರ ಬಿ ಆರ್ ಅವರ ೩೫ ನೆಯ ವಿವಾಹ ವಾರ್ಷಿಕೋತ್ಸವಕ್ಕೆ ಆಕೃತಿಕನ್ನಡ ಶುಭಕೋರುವ ಮೂಲಕ ಅವರ ರಚನೆಯ ಕವಿತೆಯನ್ನು ಪ್ರಕಟಿಸಿದೆ ತಪ್ಪದೆ ಓದಿ…

ಬಾಳ ರಥ ಸಾಗುತಿದೆ
ಬೆಳಕು ಕತ್ತಲ ನಡುವೆ
ಬೆಳಕೆಲ್ಲ ದಿನದಲಿದೆ
‌ರವಿ ಇಲ್ಲದಿರೆ ಚಂದ್ರಕಲಾ

ಸವಿ ಬಾಳು ಸಾಗುತಿದೆ
ಹಿರಿಯರ ಮಾರ್ಗದರ್ಶನದಿ
ದೇವರ ಆಶೀರ್ವಾದವಿದೆ
ಎಮಗೆ ನಿರ್ಯೋಚನಾ ಹಾದಿ

ಅನುಮೋದನೆಗಿಲ್ಲ ತೊಂದರೆ
ಸಹಧರ್ಮಿಣಿ ಕೃತಿಗಳೊಪ್ಪಿರೆ
ಕೋಪತಾಪಗಳಿದ್ದರೂ ಬಳಿಯಿರೆ
ಸಹಕಾರ ನಿನಾದವು ಒದಗುತಿರೆ

ಆರಂಭದಿ ಕಷ್ಟಕೆ ತಲ್ಲಣ
ದಿನ ದೂಡುತಿರೆ ಮಣಮಣ
ಹರುಷೋಲ್ಲಾಸಕೆ ರಮಣ
ಪೂಜೆ ಪುನಸ್ಕಾರಕೆ ಕಾಲಹರಣ

ಕಳಕಳಿಯ ಸ್ವಚ್ಛದ ಕೆಲಸದಿಂ
ಹೊಳೆಯುತಿಹುದು ಗೋಡೆಗಳು
ನಿರಂತರ ಸರ್ವ ಕಾರ್ಯಗಳಿಂ
ಸೋತಿಹುದು ತೋಳ್ಬಲಗಳು

ಕೆಳಗೆ ಕೂಡಬೇಡಿ ಮಲಗಬೇಡಿ
ಪ್ರತಿ ಹೆಜ್ಜೆಗೂ ಉಪಕಾರಗಳನು
ನಡಿಗೆ ಯೋಗಕೆ ಕಳಿಸಿ ಗಡಿಬಿಡಿ
ಸಮಯಕೆ ಉಟೋಪಚಾರವನು

ಜರ್ಝರಿತ ಶ್ರಮದ ನಡುವೆ
ಇಣುಕಿದೆ ಪ್ರಿತಿಯ ನುಡಿಗಳು
ಸಾಹಿತ್ಯದಿ ಬರೆಯ ಕೂತರೆ
ಸರಾಗದಿ ಪತ್ತೆ ತಪ್ಪುಒಪ್ಪುಗಳು

ಮುಗಿಯದ ಕೆಲಸವೆಂಬ ಮಾತು
ಹೇಳುವುದ ಹೇಳಿ ಮಾಡುವ ಛಾತಿ
ಮನದೊಳಗೆ ಕೈ ಹಾಕಿ ಹುಡುಕಿತು
ಒಳಗಿರುವುದೆಲ್ಲ ಬರೇ ಪ್ರೇಮ ಪ್ರೀತಿ

ದೇವರಲಿ ಪ್ರಾರ್ಥನೆ ನೆಮ್ಮದಿಗೆ
ಆಸೆಗಳ ಪೂರೈಸಿಹ ದೇವನಿಗೆ
ಧನ್ಯವಾದಗಳ ಅರ್ಪಣೆ ನಿನಗೆ
ಅನುಗ್ರಹವಿರಲಿ ನಮ್ಮಿಬ್ಬರಿಗೆ


  •  ಹರಿಹರ ಬಿ ಆರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading