‘ಬಳೆ’ ಕವನ – ಪ್ರಭಾವತಿ ಎಸ ವಿ



ಹಿರಿಯ ಸಾಹಿತಿ ಪ್ರಭಾವತಿ ಎಸ ವಿ ಅವರ ಕವನ ‘ಬಳೆ’ ಹೆಣ್ಣಿನ ಕೈಗೆ ಒಂದು ಭೂಷಣ. ಬಳೆಯ ಮಹತ್ವವನ್ನು ಈ ಕವನದ ಸಾಲುಗಳಲ್ಲಿ ಸುಂದರವಾಗಿ ಕವಿಯತ್ರಿ ವರ್ಣಿಸಿದ್ದಾರೆ.ಮುಂದೆ ಓದಿ…

ಹೊಂಬಳೆಯೊಂದನು ಕೊಂಡೆ
ಉಡಲಿಲ್ಲ ತೊಡಲಿಲ್ಲ
ಹಾಗೆಯೇ ದಿಟ್ಟಿಸಿದೆ

ಈ ಬಳೆ ಇದ್ದಿದ್ದರೆ ಅಂಗಡಿಯಲ್ಲೆ
ಆಗುತ್ತಿತ್ತು ಬರ ಹೋಗುವವರ ಕಣ್ಣಿಗೆ ಆಹಾರ

ಈ ಬಳೆ ಏರಿದ್ದರೆ ದುಂಡಗಿನ ಕೈ
ಆಗುತ್ತಿತ್ತು ತೋಳಿನ ಹೊಳಪಿಗೆ ಸಿಂಗಾರ

ಈ ಬಳೆ ಏರಿದ್ದರೆ ದೇವರ ಕೈ
ಬೀಗುತ್ತಿತ್ತು ಭಕ್ತರನ್ನು ಆಶೀರ್ವದಿಸಿ

ಬೆಲೆಯುಂಡು ಬೆಲೆ ಕಟ್ಟಿ
ಒಂದಾದ ನಾವಿಬ್ಬರೂ
ಸೇರಲೇ ಇಲ್ಲ
ದುಂಡಾಗಿಯೇ ಇದೆ ಬಳೆ
ಬೋಳಾಗಿಯೇ ಇದೆ ಕೈ


  • ಪ್ರಭಾವತಿ ಎಸ ವಿ (ಹಿರಿಯ ಸಾಹಿತಿಗಳು, ಕವಯತ್ರಿ) ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading