ಒಲವೆ ಜೀವನದ ಲೆಕ್ಕಾಚಾರ – ಪವಿತ್ರ .ಹೆಚ್.ಆರ್



ಜೀವನದ ಲೆಕ್ಕಾಚಾರದ ಮೇಲೆ ಒಲವು ಹೇಗೆ ಮೂಡುತ್ತದೆ ಎನ್ನುವುದರ ಮೇಲೆ ಕವಿಯತ್ರಿ ಪವಿತ್ರ .ಹೆಚ್.ಆರ್. ಅವರು ಬರೆದಿರುವ ಸುಂದರ ಕವನ ಓದುಗರಿಗಾಗಿ, ಮುಂದೆ ಓದಿ…

ಗುಣಿಸಿದರೆ ಗುಣಾಕಾರ
ಭಾಗಿಸಿದರೆ ಭಾಗಾಕಾರ
ಕೂಡಿಸಿದರೆ ಸಾಹುಕಾರ
ಕಳೆದರೆ ಸಾಲಗಾರ
ನಮ್ಮ ಜೀವನದ ಲೆಕ್ಕಾಚಾರ

ಗುಣದಿಂದ ಗುಣಿಸಿದರೆ ಗುಣವಂತ
ಭಾವನೆಯಿಂದ ಭಾಗಿಸಿದರೆ ಭಾಗ್ಯವಂತ
ಹಣದಿಂದ ಕೂಡಿಸಿದರೆ ಹಣವಂತ
ಇದ್ದದ್ದುನ್ನು ಕಳೆದರೆ ಸಾಲವಂತ
ಇದುವೇ ನಮ್ಮ ಜೀವನ ಪಂಥ

ಗುಣ್ಯ, ಗುಣಕಗಳ ಹಂದರ
ಸುಖ ದುಃಖಗಳ ಸಾಗರ
ಭಾಜ್ಯ ಭಾಜಕಗಳ ಹಂದರ
ಬಾಜಿ ಕಲಹಗಳ ಸಾಗರ
ಆದರೂ ಮಾನವ ಜನ್ಮ ಸುಂದರ

ಸಂಕಲ್ಯ, ಸಂಕಲತೆಗಳ ಮೊತ್ತ
ಪಾಪ, ಪುಣ್ಯಗಳ ಹುತ್ತ
ವ್ಯವಕಲ್ಯ, ವ್ಯವಕಲಕಗಳ ವ್ಯತ್ಯಾಸ
ಸರಸ ವಿರಸಗಳ ಸಮರಸ
ನೋವಿದ್ದರೂ ನಲಿಯುವ ಸಂತಸ
ಒಲವೇ ಜೀವನ #ಸಾಕ್ಷಾತ್ಕಾರ


  • ಪವಿತ್ರ .ಹೆಚ್.ಆರ್. ( ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಯತ್ರಿ )

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading