‘ಭ್ರಮೆ’ ಕವನ – ಡಾ. ಕೃಷ್ಣವೇಣಿ.ಆರ್.ಗೌಡ

ಡಾ. ಕೃಷ್ಣವೇಣಿ.ಆರ್.ಗೌಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಮುಂದೆ ಓದಿ…

ಅಧೋ ಸುತ್ತುತಿದೆ
ಚಂದ್ರನ ಮೇಲೊಂದು
ರೆಂಬೆಯ ಬಿಂಬ…

ಬದಲಾದ ಹಳೆಯ ಚಾರಿತ್ರ್ಯಕ್ಕೆ
ವಾಸ್ತವ್ಯದ ಕಹಳೆ.
ಇದಕೆ ಹಾಲು ಸುರಿಸುವ
ಮೊಲೆ ತುದಿ ಇಬ್ಭಾಗದಲಿ
ಸೀಳಿ ಆನಂದ ಭಾಷ್ಪ ಸುರಿಸುತಿದೆ….

ಜನಿವಾರದ ಹರಿನಾಮಕೆ
ಕೆಳಜಾತಿಯ ರಕ್ತದ ತಿಲಕ
ಷಡ್ಯಂತ್ರದ ಸರಿಗಮಕೆ
ಚರ್ಮದ ಮೃದಂಗ
ಮಾತಂಗಿಯ ವೀಣೆ
ಮೀಟದೆ ಕಲ್ಲಾಗಿದೆ….

ಏಕೋ ಮಂಕಾದ ಪ್ರಕೃತಿ
ಜಾಗೃತಿಯ ನೆಲದಿ
ಸಗಣಿ ರಾಡಿಯ ಎರಕ…

ತತ್ವದ ಹರಿಕಾರರೆಲ್ಲರೂ
ಮತ್ತೇ ಎದ್ದೇಳುವ
ಭ್ರಮೆಗೆ ಹಣೆಯ ಹುಬ್ಬು ಕಣ್ಣೆತ್ತಿ ಕಾಯುತಿದೆ….

ಮಾಯೆಯ ಮಡಕೆಯಲಿ
ಟಂಕ ಟೊಂಕ ಕಟ್ಟುತಿದೆ..
ಪುನರಪಿ ಜನನದಿಗೆ
ಆಹ್ವಾನದ ಕರೆಯೋಲೆ…..


  • ಡಾ. ಕೃಷ್ಣವೇಣಿ.ಆರ್.ಗೌಡ –  – ವಿಜಯ ನಗರ ಜಿಲ್ಲೆ, ಹೊಸಪೇಟೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading