‘ಬಿಸಿಲ ಹೂವುಗಳು’ ಕೃತಿ ಪರಿಚಯ

ಸುಮಿತ್ ಮೇತ್ರಿ ಅವರ ‘ಬಿಸಿಲ ಹೂವುಗಳು’ ಯುವ ತಲೆಮಾರಿನ ಹೊಸ ಕಾವ್ಯಗಳ ಕುರಿತು ಓಂಕಾರ ಪಾಟೀಲ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಬಿಸಿಲ ಹೂವುಗಳು (ಯುವ ತಲೆಮಾರಿನ ಹೊಸ ಕಾವ್ಯಗಳು)
ಸಂಪಾದಕರು : ಸುಮಿತ್ ಮೇತ್ರಿ.
ಪ್ರಕಾಶಕರು : ಸುಗಮ ಪುಸ್ತಕ ಹಲಸಂಗಿ
ಪುಸ್ತಕದ ಬೆಲೆ :೧೬೦ ರೂಪಾಯಿ

ಬಿಸಿಲ ಹೂವುಗಳು ಸುಮಿತ್ ಮೆತ್ರಿ ಅವರಿಂದ ಸಂಪಾದಿಸಲ್ಪಟ್ಟ ಯುವತಲೆ ಮಾರಿನ ಹೊಸ ಕಾವ್ಯಗಳ ಸಂಗ್ರಹದ ಸಂಕಲನವಾಗಿದೆ. ಈ ಕೃತಿಯು ಯುವಕವಿಗಳ ಕಾವ್ಯ ಪ್ರಯೋಗಗಳನ್ನು ಒಳಗೊಂಡಿದ್ದು ಸಂಪಾದಕರ ಸಾಹಿತ್ಯ ಪದ್ಧತಿ ಮತ್ತು ಕಾವ್ಯದ ಮೇಲೆ ಅವರಿಗಿರುವ ಪ್ರೀತಿ ವ್ಯಕ್ತವಾಗಿದ್ದು ಹೊಸ ಪೀಳಿಗೆಯ ಕವಿಗಳ ಭಿನ್ನ ಧ್ವನಿಗಳನ್ನು ಒಂದೆಡೆ ಸೇರಿಸಿ ಓದುಗರ ಕೈಗೆ ನೀಡಿರುವ ಅವರ ಕಾರ್ಯ ಪ್ರಶoಸನೀಯವಾಗಿದೆ.

ಸಂಪಾದಕರಾದ ಶ್ರೀ ಸುಮಿತ್ ಮೇತ್ರೆ ಅವರ ಕುರಿತು ಹೇಳಬೇಕಾದರೆ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶೇಷವಾಗಿ ಕಾವ್ಯದ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಯುವ ಸಂಪಾದಕರು ಹಾಗು ಬರಹಗಾರರಾಗಿದ್ದಾರೆ.

ಬಿಸಿಲ ಹೂವುಗಳು ಪುಸ್ತಕದ ಕುರಿತು ಹೇಳಬೇಕಾದರೆ ಇಲ್ಲಿನ ಎಲ್ಲ ಕವಿಗಳ ಕವಿತೆಗಳು ಬೇರೆ ಬೇರೆ ರೀತಿಯಲ್ಲಿ ಜೀವoತಿಕೆ ಮತ್ತು ಅರ್ಥವನ್ನು ಪಡೆದಿವೆ ಅನ್ನುವ ಭಾವನೆ ಪ್ರತಿಯೊಬ್ಬ ಓದುಗನಿಗೆ ಭಾಸವಾಗುತ್ತದೆ. ಅದೇ ರೀತಿ ಈ ಕಾಲಮಾನದ ವಸ್ತುಸ್ಥಿತಿ ಅರಿಯುವ ಓದುಗರ ಕಾವ್ಯದ ಅನುಭವಕ್ಕೆ ಹೊಸ ಅರ್ಥ ಸ್ಪಷ್ಟತೆ ರೂಪ ಕೊಡುವ ಪ್ರಯತ್ನವಾಗಿದೆ ಅನ್ನುವದನ್ನು ಪ್ರತಿಯೊಬ್ಬ ಓದುಗ ಅರ್ಥ ಮಾಡಿಕೊಳ್ಳುವ ಪುಸ್ತಕವಾಗಿದೆ.

“ಕವಿಯಲ್ಲಿ ಪದ ಸಂಪತ್ತು ಇರದಿದ್ದರೆ ಅಥವಾ ಇದ್ದರೂ ಬಳಸದಿದ್ದರೆ ಕವಿತೆ ರಕ್ತಹೀನತೆಯಿಂದ ಬಳಲಿದಂತೆ” ಅನ್ನುವ ಓ ಎಲ್ ನಾಗಭೂಷಣ್ ಅವರ ಮಾತಿನಂತೆ ಸ್ವರಚಿತ ಪದಗಳ ಒಡನಾಟ ಮಾತ್ರವಲ್ಲ, ಮಾತಿನ ರೂಢಿಯನ್ನು ಮುರಿದು ಹಾಗೆ ಮುರಿಯುವ ಮೂಲಕವೇ ಹೊಸ ನೋಟ ಪರಿಚಿತ ಭಾವದ ಇನ್ನೊಂದು ಆಯಾಮ ಗೊತ್ತಿರುವ ವಿಚಾರದ್ದೆ ಆಗಿರುವ ಇನ್ನೊಂದು ಹೊಸ ಮುಖವನ್ನು ತೋರುವ ಕವಿಯ ಬಗ್ಗೆ ಪ್ರೀತಿ ಗೌರವ ಆದರಗಳು ಗರಿ ಗೆದ್ದರುತ್ತವೆ.

ಒಟ್ಟಾಗಿ ಹೇಳಬೇಕಾದರೆ ಈ ಕೃತಿಯಲ್ಲಿನ ಕವಿಗಳ ಕವಿತೆಗಳು ಪರಿಸರ, ಮನಸ್ಥಿತಿ, ಅನುಭಾವ, ಅನುಭವ ಭಾವಶೋಧ ರಸಾನುಭಾವ ವಸ್ತು ವಿಷಯಗಳನ್ನು ಒಳಗೊಂಡ ಕವಿತೆಗಳಾಗಿವೆ.

ಸುಮಿತ್ ಮೇತ್ರೆ ಅವರ ಸಂಪಾದಿತ ಬಿಸಿಲ ಹೂವುಗಳು (ಯುವ ತಲೆಮಾರಿನ ಹೊಸ ಕಾವ್ಯ)ಎಂಬ ಶೀರ್ಷಿಕೆ ಸಂಪಾದಿತ ಕವನ ಸಂಕಲನ ಕೃತಿ ಓದುಗರನ್ನು ಓದಿಸಿಕೊಂಡು ಹೋಗುವ ಉತ್ತಮ ಕಾವ್ಯಗಳ ಹೂರಣದ ಪುಸ್ತಕವಾಗಿದೆ.


  • ಓಂಕಾರ ಪಾಟೀಲ – ಕಾರ್ಯದರ್ಶಿಗಳು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಬೀದರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading