ಸಾಂಪ್ರದಾಯಿಕ ಕಿವಿಯೋಲೆಯಾಗಿದ್ದ ‘ಬುಗುಡಿ’ ನಿಧಾನವಾಗಿ ಪೇಟೆಯ ಪಡ್ಡೆ ಹುಡುಗೀರ ಆಭರಣವೂ ಆಯಿತು. ಆ ಬುಗುಡಿ ಕುರಿತು ಲೇಖಕ ನಟರಾಜ್ ಸೋನಾರ್ ಅವರು ಬರೆದ ಚಿತ್ರ ಬರಹ ಓದುಗರ ಮುಂದಿದೆ, ತಪ್ಪದೆ ಓದಿ…
ಬುಗುಡಿ ಯಂತಹ ವಸ್ತು ಅಲ್ಲ
ನೆಗೆಡಿ ಯಂತಹ ಜಡ್ಡ ಅಲ್ಲ
ಗಾದೆಮಾತು.
****
ಬುಗುಡಿ ಕಡ್ಡಿ ಮಾಡುವ ನುರಿತ ಅಕ್ಕಸಾಲಿಗರು ಒಂದು ಜೊತೆ ಬುಗುಡಿ ಮಾಡಬೇಕಾದರೆ, ಒಂದು ಸಾವಿರ ಬಂಗಾರದ ತುಂಡುಗಳನ್ನು ಕ್ರಮಬದ್ದವಾಗಿ ಜೋಡಿಸಿದಾಗ ಅದು ಒಂದು ಬುಗುಡಿ ವಸ್ತು ಆಗುವುದು ಬುಗುಡಿಲ್ಲಿ ಐದು ಕಳಸದ ಬುಗುಡಿ, ಏಳು ಕಳಸದ ಬುಗುಡಿ, ಚಳ ತುಂಬು ಬುಗುಡಿ, ಗಡ್ಡಿ ಬುಗುಡಿ,ಸಾದಾ ಬುಗುಡಿ, ಮೇಲೆ ಕಳಸ ಕೆಳಗ ಮುತ್ತು ಬಿಗಿದು ಮಾಡಿದ ಬುಗುಡಿ ಅದರ ವಿನ್ಯಾಸ ಮನಮೋಹಕ ಅನೇಕ ಬುಗುಡಿ ಪ್ರೀಯ ಹೆಣ್ಣು ಮಕ್ಜಳ ಅತಿಪ್ರೀಯ ವಸ್ತು ಬುಗುಡಿ.
ನಾಲ್ಕ ಅಣೆತೂಕದ ಬುಗುಡಿ ; ಒಂದುವರೆ ಅಣೆ ತೂಕದ ತಂತಿ : ಒಂದುನೂರು ಮುತ್ತು, ಬೇಕಾಗುತ್ತವೆ ಅಕ್ಕಸಾಲಿಗರ ಮಜೂರಿ ಬುಗುಡಿ ಮಾಡಲು ಎರಡುನೂರು ರೂಪಾಯಿ, ಮುತ್ತು ಬಿಗಿಯಲು ಐದನೂರು ರೂಪಾಯಿ ಕೂಲಿ ತಗೆದುಕೊಂಡು ಸುಂದರ ವಾದ ಬುಗುಡಿ ತಯಾರಿಸುವ ಜಾಣ್ಮೆ ಇವರದು.
(ಸಾಂದರ್ಭಿಕ ಚಿತ್ರ) ಫೋಟೋ ಕೃಪೆ : google
ಅಕ್ಕಸಾಲಿಗರಲ್ಲಿ ಕೆಲವರು ಬುಗುಡಿ ಎಕ್ಸಪರ್ಟಗಳು ಇನ್ನೂ ಇದ್ದಾರೆ.
ಬುಗುಡಿಗೆ ಸಾವಿಲ್ಲ. ನೆಗಡಿಯಂತಹ ಜಡ್ಡ ಅಲ್ಲ ;
****
ನೆಗಡಿ ಅನ್ನುವುದು ಜಡ್ಡ ಅಲ್ಲ ಖರೆ ಆದರ ನೆಗೆಡಿ ಬಂತು ಅಂದರ ಮನುಷ್ಯನನ್ನ ಹೈರಾಣಮಾಡಿ ಬಿಡುವುದು ,ಅದು ಬಂದರ ಜಲ್ದೀ ಹೋಗಗಂಗಿಲ್ಲ ದೇಹದಲ್ಲಿನ ನೀರಿನ ಅಂಶ ಕಡಿಮೆ ಮಾಡಿ ನರಗಳಿಗೆ ಹೆಚ್ಚಿನ ಒತ್ತಡ ಇಡೀ ದೇಹ ಒಂತರ ಸುಸ್ತೋ ಸುಸ್ತು ಇದು ಜಡ್ಡ ಅಲ್ಲ ಆದರೆ, ಜಡ್ಡ ಆದಾಂಗ ಆಗಿ ನೆಗಡಿ ಕಡಿಮೆಯಾಗುವುದರೊಳಗ ಅವನ ಮಾರಿ ನೋಡಲಾರದಂಗ ಆಗತೈತಿ ಅದಕ್ಕ
ನಮ್ಮ ಹಿರಿಯ್ಯಾರು ಬುಗುಡಿ ಅಂತ ವಸ್ತು ( ಆಭರಣ ) ಅಲ್ಲ : ನೆಗಡಿ ಅಂತ ಜಡ್ಡ ಅಲ್ಲ ! ಅಂತ ಅಂದರೇನೋ ? ಒಟ್ಟಾರೆ, ನೆಗಡಿ ಬುಗುಡಿ ಪ್ರಾಸ ಹೇಂಗೀದೆ?
ವಸ್ತ = ಆಭರಣ
ಜಡ್ಡ = ಅನಾರೋಗ್ಯ
- ಚಿತ್ರ ಬರಹ : ನಟರಾಜ್ ಸೋನಾರ್